ತಮಿಳಿನ ಸೂಪರ್ ಹಿಟ್ ಸಿನಿಮಾ ‘ಕೊಲಮಾವು ಕೋಕಿಲ’ ಹಿಂದಿಗೆ ರೀಮೇಕ್ : ನಾಯಕಿ ಇವರೇ..!
ತಮಿಳಿನ ಸೂಪರ್ ಹಿಟ್ ಸಿನಿಮಾ ಕೊಲಮಾವು ಕೋಕಿಲ ಸದ್ಯ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಗಳಿಕೆ ವಿಚಾರದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈ ಚಿತ್ರದಲ್ಲಿ ಖ್ಯಾತ ಬಹುಭಾಷಾ ನಟಿ ನಯನತಾರಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರ ನಿರೀಕ್ಷೆ ಮಟ್ಟಕ್ಕೆ ಸಕ್ಸಸ್ ಸಹ ಕಂಡಿತ್ತು. ಇದೀಗ ಈ ಚಿತ್ರ ಕನ್ನಡದಲ್ಲೂ ರೀಮೇಕ್ ಆಗುತ್ತಿರೋದು ಹೊಸ ವಿಚಾರವೇನಲ್ಲ. ‘ಪಂಕಜ ಕಸ್ತೂರಿ’ ಟೈಟಲ್ ನಲ್ಲಿ ರೆಡಿಯಾಗುತ್ತಿರುವ ಚಿತ್ರದಲ್ಲಿ ನಯನತಾರಾ ಪಾತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ಬಣ್ಣ ಹಚ್ಚಿದ್ದಾರೆ. ಮಯೂರ ರಾಘವೇಂದ್ರ ಸಿನಿಮಾ ನಿರ್ದೇಶನ ಮಾಡ್ತಿದ್ದಾರೆ. ಈ ವಿಚಾರ ಎಲ್ಲರಿಗೂ ಗೊತ್ತೇ ಇದೆ.
ಗುಣಭದ್ರ + ಸಮಂತಭದ್ರ = ‘ಕನ್ನಡಿಗ’..!
ಇದೀಗ ಹೊಸ ವಿಚಾರ ಏನಂದ್ರೆ ಇದೀಗ ಈ ಸಿನಿಮಾ ಹಿಂದಿಗೂ ರೀಮೇಕ್ ಆಗುತ್ತಿದೆ. ಹಿಂದಿಯಲ್ಲಿ ಈ ನಯನತಾರಾ ಪಾತ್ರದಲ್ಲಿ ಯಾವ ನಟಿ ಕಾಣಿಸಿಕೊಳ್ಳಬಹುದೆಂಬ ಕುತೂಹಲ ಸಹಜವಾಇಯೆ ಸಿನಿಪ್ರಿಯರಲ್ಲಿ ಮೂಡಿತ್ತು. ಇದೀಗ ಎಲ್ಲಾ ಕಾತರತೆಗೆ ತೆರೆ ಬಿದ್ದಿದೆ. ಅಂದ್ಹಾಗೆ ಚಿತ್ರದಲ್ಲಿ ಖ್ಯಾತ ನಟಿ ದಿವಂಗತ ಶ್ರೀದೇವಿ ಪುತ್ರಿ ‘ಧಡಕ್’ ಖ್ಯಾತಿಯ ಜಾಹ್ನವಿ ಕಾಣಿಸಿಕೊಳ್ತಾಯಿದ್ದಾರೆ ಎನ್ನಲಾಗಿದೆ. ಈ ಚಿತ್ರಕ್ಕೆ ಆನಂದ್ ಎಲ್ ರಾಯ್ ಬಂಡವಾಳ ಹೂಡುತ್ತಿದ್ರೆ ಸಿದ್ಧಾರ್ಥ್ ಸೇನ್ ಗುಪ್ತಾ ಅವರು ಆಕ್ಷನ್ ಕಟ್ ಹೇಳಲಿದ್ದಾರೆ. ಜ. 7ರಿಂದ ಚಿತ್ರೀಕರಣವೂ ಸಹ ಪ್ರಾರಂಭವಾಗಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








