ಡೆಟಾ ಲೀಕ್ | `ಕೂ’ ಆಪ್ ಸುರಕ್ಷಿತವೇ..?
ನವದೆಹಲಿ : ದೇಶದಾದ್ಯಂತ ರೈತರ ಚಳವಳಿ ಜೋರಾಗಿ ನಡೆಯುತ್ತಿದ್ದು, ಕೆಲವರು ದೇಶಿ ಮತ್ತು ವಿದೇಶಿ ಸೆಲೆಬ್ರಿಟಿಗಳ ಟ್ವೀಟ್ ಗಳು ವಿವಾದಕ್ಕೆ ಕಾರಣವಾಗಿದೆ. ಈ ಕ್ರಮದಲ್ಲಿ, ದೇಶೀಯ ಮೈಕ್ರೋ ಬ್ಲಾಗಿಂಗ್ ತಾಣ “ಕೂ” ಟ್ವಿಟರ್ ಗೆ ಪರ್ಯಾಯವಾಗಿ ಬೆಳಕಿಗೆ ಬಂದಿದೆ.
ಅದರಲ್ಲೂ ಆಡಳಿತಾರೂಢ ಬಿಜೆಪಿ ಕೇಂದ್ರ ಸಚಿವರು, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ಇತರ ಸರ್ಕಾರಿ ಇಲಾಖೆಗಳು ಕೂ ಆಪ್ ಕಡೆ ಶಿಫ್ಟ್ ಆಗಿರುವುದು ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಈ ಹಿನ್ನೆಲೆಯಲ್ಲಿ ಸೈಬರ್ ಭದ್ರತಾ ಸಂಶೋಧಕರು ಸೆನ್ಸೇಷನಲ್ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಫ್ರೆಂಚ್ ಭದ್ರತಾ ಸಂಶೋಧಕ ರಾಬರ್ಟ್ ಬ್ಯಾಪ್ಟಿಸ್ಟೆ ಎಂಬುವವರು, ಕೂ ಸುರಕ್ಷಿತವಲ್ಲ ಇದು ಪ್ರಸ್ತುತ, ಇಮೇಲ್ ಐಡಿ, ಫೋನ್ ನಂಬರ್, ಹುಟ್ಟಿದ ದಿನಾಂಕ ಸೇರಿದಂತೆ ಬಳಕೆದಾರರ ಮಾಹಿತಿಯನ್ನು ಸೋರಿಕೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಅಲ್ಲದೆ ಕೂ ನೊಂದಿಗೆ ಚೀನೀಯರ ಸಂಪರ್ಕವನ್ನು ತೋರಿಸುವ ಡೊಮೇನ್ ರೆಕಾರ್ಡ್ ಅನ್ನ ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಬಾಂಬೆ ನೆಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ನಾಲ್ಕು ವರ್ಷಗಳ ಹಿಂದೆ ರಚನೆಯಾಗಿರುವ ಡೊಮೇನ್ ಆಗಿದ್ದು ಈಗಾಗಲೇ ಕೈ ಬದಲಾಗಿದೆ ಎಂಬ ಮಾಹಿತಿ ಈಗ ಬಹಿರಂಗವಾಗಿದೆ.
ರಾಬರ್ಟ್ ಬ್ಯಾಪ್ಟಿಸ್ಟೆ ತಮ್ಮ ಸಂಶೋಧನಾ ವಿವರಗಳನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಕಳೆದ ರಾತ್ರಿ ಕೂ ಈ ಆಪ್ ನಲ್ಲಿ 30 ನಿಮಿಷಗಳನ್ನು ಕಳೆದಿದ್ದು, ಬಳಕೆದಾರರ ವೈಯಕ್ತಿಕ ಡೇಟಾವನ್ನು ಸೋರಿಕೆ ಮಾಡಿದೆ. ಇಮೇಲ್, ಜನ್ಮ ದಿನಾಂಕ, ಹೆಸರು, ವೈವಾಹಿಕ ಸ್ಥಿತಿ, ಲಿಂಗ ಸೇರಿದಂತೆ ಇತರ ವಿವರಗಳು ಬಹಿರಂಗವಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಅಲ್ಲದೆ ಕೆಲ ಭದ್ರತಾ ಲೋಪಗಳನ್ನು ಅವರು ಗುರುತಿಸಿದ್ದಾರೆ. ಅದರ ಸ್ಕ್ರೀನ್ ಶಾಟ್ ಗಳನ್ನೂ ಕೂಡ ಅವರು ಹಂಚಿಕೊಂಡಿದ್ದಾರೆ. ಈಗಾಗಲೇ ಆಪ್ ಗೆ ಸೇರ್ಪಡೆಯಾಗಿರುವ ಸರ್ಕಾರಿ ಇಲಾಖೆಗಳು, ಇತರ ಸೇವೆಗಳು ಮತ್ತು ಸಚಿವರ ದತ್ತಾಂಶ ಸೇರಿದಂತೆ ಲಕ್ಷಾಂತರ ಗ್ರಾಹಕರ ದತ್ತಾಂಶಗಳು ಸೋರಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಚೀನಾ ಕಂಪನಿ ಹೂಡಿಕೆ
ಸ್ವಯಂ ನಿರ್ಭರ್ ಆಪ್ ಆಗಿರುವ ಕುಲೋದಲ್ಲಿ ಚೀನಾ ಕಂಪೆನಿ ಹೂಡಿರುವ ಹೂಡಿಕೆಗಳು ಗಂಭೀರ ಚರ್ಚೆಗೆ ಎಡೆಮಾಡಿವೆ. ಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿ ಶಯೋಮಿ ಕಂಪನಿ ಶುನ್ ವೀ ಇದರಲ್ಲಿ ಷೇರು ಗಳನ್ನು ಹೊಂದಿದೆ.
ಈ ವಿಷಯವನ್ನ ಕೂ ಸಹ ವ್ಯವಸ್ಥಾಪಕರ ಅಪ್ರಮೇಯ ರಾಧಾಕೃಷ್ಣ ಕೂಡ ಇದನ್ನು ಖಚಿತಪಡಿಸಿದ್ದಾರೆ. ಷನ್ ವೇ ಷೇರುಗಳು ಇನ್ನೂ ಇವೆ ಮತ್ತು ಶೀಘ್ರದಲ್ಲೇ ಅವುಗಳನ್ನು ವಿಕ್ರಯಿಸುವುದಾಗಿ ಟ್ವೀಟ್ ಮಾಡಿದ್ದಾರೆ. ಆದ್ರೆ ಕೂ ಆಪ್ ಎಂಬುದು ಭಾರತೀಯ ಉದ್ಯಮಿಗಳಿಂದ ನೋಂದಾಯಿತ ಕಂಪನಿಯಾಗಿದೆ.
ಶ್ರೀ ಕಟೀಲು ದುರ್ಗಾಪರಮೇಶ್ವರೀ ಕ್ಷೇತ್ರ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ರೈತರ ಪ್ರತಿಭಟನೆ ಕುರಿತು ಟ್ವೀಟ್ ಮಾಡುತ್ತಿರುವ ಪತ್ರಕರ್ತರು, ರಾಜಕಾರಣಿಗಳು ಮತ್ತು ಕಾರ್ಯಕರ್ತರ ಖಾತೆಗಳನ್ನು ಬ್ಲಾಕ್ ಮಾಡಲು ಟ್ವಿಟ್ಟರ್ ನಿರಾಕರಿಸಿರುವ ಬಗ್ಗೆ ಐಟಿ ಇಲಾಖೆ ಅಸಮಾಧಾನ ಹೊಂದಿದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಟ್ವಿಟರ್ ನಿಂದ ಕು ಆಪ್ ಗೆ ಶಿಫ್ಟ್ ಆಗಿರುವುದಾಗಿ ಘೋಷಿಸಿದ್ದಾರೆ. ದೇಸಿ ಆತ್ಮನಿರ್ಭರ್ ಆಪ್ ಅನ್ನು ಬಳಸಬೇಕು ಎಂದು ಕರೆಕೊಟ್ಟಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel