Koppala | ರಸ್ತೆ ದುರಸ್ಥಿಗಾಗಿ ಭಿಕ್ಷೆ ಬೇಡಿದ ಜನರು
ಕೊಪ್ಪಳ : ರಸ್ತೆ ದುರಸ್ಥಿ ಬಗ್ಗೆ ಅಧಿಕಾರಿಗಳ ಗಮನ ಸೆಳೆಯಲು ಸಾರ್ವಜನಿಕರು ವಿಭಿನ್ನ ಪ್ರಯತ್ನ ಮಾಡಿದ್ದಾರೆ.
ಕೊಪ್ಪಳ ತಾಲೂಕಿನ ಮುನಿರಾಬಾದ್ ಗ್ರಾಮದಲ್ಲಿ ವಿಭಿನ್ನ ರೀತಿಯಲ್ಲಿ ಅಧಿಕಾರಿಗಳ, ಶಾಸಕರ, ಹಾಗೂ ಸಂಸದರ ಗಮನ ಸೆಳೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು, ಮುನಿರಾಬಾದ್ ಗ್ರಾಮದಲ್ಲಿ ರಸ್ತೆಯ ದುರಸ್ಥಿ ಬಗ್ಗೆ ಗ್ರಾಮಸ್ಥರು ವಾಹನ ಸವಾರಿಗಳ ಹತ್ತಿರ ಕೇವಲ ಒಂದು ರೂಪಾಯಿ ಹಣ ಭಿಕ್ಷೆ ಬೇಡುವ ಮುಖಾಂತರ ಎಲ್ಲರ ಗಮನ ಸೆಳೆದಿದ್ದಾರೆ.
ಕಳೆದ ನಾಲ್ಕು ವರ್ಷದಿಂದ ಸತತವಾಗಿ ಸಂಬಂಧಪಟ್ಟ ಅಧಿಕಾರಿಗಳು, ಪಿ ಡಬ್ಲ್ಯೂ ಡಿ ಅಧಿಕಾರಿಗಳಿಗೆ ರಸ್ತೆ ದುರಸ್ತಿಯ ಬಗ್ಗೆ ಸಂಘ ಸಂಸ್ಥೆಗಳಿಂದ ಮನವಿ ಮಾಡಿದರು ಸಹ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ.
ಈ ರಸ್ತೆಯು ಮುನಿರಾಬಾದಿನ ಮುಖ್ಯ ರಸ್ತೆ ವಾಗಿದೆ, ಹಾಗೆಯೇ ಮುನಿರಾಬಾದ್ ಡ್ಯಾಮ್ ನಲ್ಲಿರುವ ಅಣೆಕಟ್ಟನ್ನು, ಪಂಪವನ ಉದ್ಯಾನವನವನ್ನು ವೀಕ್ಷಿಸಲು ಹೊರ ರಾಜ್ಯದ ಪ್ರವಾಸಿಗರು ಸಹ ಹೆಚ್ಚಾಗಿ ಬಳಸುವಂತಹ ರಸ್ತೆಯಾಗಿದೆ.
ಇಂತಹ ರಸ್ತೆಯು ಹದಗೆಟ್ಟು ಹೋಗಿರುವುದರಿಂದ ಸಾರ್ವಜನಿಕರು ಬೇಸತ್ತು ಇಂದು ರಸ್ತೆಯ ಮೇಲೆ ಓಡಾಡುತ್ತಿರುವಂತಹರ ಹತ್ತಿರ ಕೇವಲ ಒಂದು ರೂಪಾಯಿಯನ್ನು ಭಿಕ್ಷೆ ಬೇಡುವ ಮುಖಾಂತರ ಈ ಹೋರಾಟವನ್ನು ಮಾಡಿದ್ದಾರೆ.