Koppala – ಚರಂಡಿಯಲ್ಲಿ ತೇಲಿಬಂದ ನವಜಾತ ಶಿಶುವಿನ ಮೃತದೇಹ
ಚರಂಡಿಯಲ್ಲಿ ಅನಾಥ ನವಜಾತ ಶಿಶುವಿನ ಶವವೊಂದು ತೇಲಿಬಂದಿರುವ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ತಾವರಗೇರ ಪಟ್ಟಣದಲ್ಲಿ ಈ ಘಟನೆ ನಡೆದಿದೆ.
ತಾವರಗೇರ ಪಟ್ಟಣದ ಹೃದಯ ಭಾಗದಲ್ಲಿನ ಸಹಕಾರಿ ಬ್ಯಾಂಕ್ ಬಳಿಯ ಚರಂಡಿಯಲ್ಲಿ ಶಿಶು ಕಳೆಬರ ಪತ್ತೆಯಾಗಿದೆ. ಚರಂಡಿಗೆ ಎಸೆದಿರುವ ಶಿಶುವಿನ ತಾಯಿ ಯಾರು ಎಂದು ತಿಳಿದು ಬಂದಿಲ್ಲ.
ಚರಂಡಿಯಲ್ಲಿ ನವಜಾತ ಶಿಶುವಿನ ಮೃತದೇಹ ಕಂಡು ಆತಂಕಗೊಂಡ ಸ್ಥಳೀಯರು ಪೊಲೀಸರು ಮತ್ತು ಪುರಸಭೆಯವರಿಗೆ ಮಾಹಿತಿ ನೀಡಿದ್ದಾರೆ. ಸುಮಾರು ನಾಲ್ಕೈದು ತಿಂಗಳ ಮಗುವಾಗಿದ್ದು ಗಂಡು ಹೆಣ್ಣು ಎನ್ನುವ ರೂಪವಿನ್ನೂ ಮೂಡಿಲ್ಲ. ಅವಧಿಗೆ ಪೂರ್ವವೇ ಹೆರಿಗೆ ಮಾಡಿಸಿ ಚರಂಡಿಯಲ್ಲಿ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ತಾವರಗೇರಾ ಪಿಎಸ್ಐ ವೈಶಾಲಿ ಝಳಕಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಗುವಿನ ಕಳೆಬರಹವನ್ನ ಸರ್ಕಾರಿ ಸಮುದಾಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತಾವರಗೇರೆ ಪಟ್ಟಣ ಪಂಚಾಯಿತಿ ಸಿಬ್ಬಂದಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
Koppala – The body of a newborn baby found floating in a drain