Koragajja – ಕೊರಗಜ್ಜ ದೈವದ ಪವಾಡ!
ಕೃಷ್ಣನಗರಿಯಲ್ಲಿ ಕೊರಗಜ್ಜ ದೈವದ ಪವಾಡ
ವೈದ್ಯಲೋಕವನ್ನು ಅಚ್ಚರಿಗೊಳಿಸಿದ ಕೊರಗಜ್ಜ
ಕೊರಗಜ್ಜ ಪವಾಡಕ್ಕೆ ಬದುಕುಳಿದ ಪುಟ್ಟ ಕಂದಮ್ಮ
ಕರಿಗಂಧ ಹಚ್ಚುತ್ತಿದ್ದಂತೆ ಮಗುವಿನ ಆರೋಗ್ಯ ಚೇತರಿಕೆ
ತುಳುನಾಡಿನ ಬಹು ಜನರ ನಂಬುಗೆಯ ಕೊರಗಜ್ಜ ದೈವದ ಪವಾಡಗಳ ಬಗ್ಗೆ ಆಗ್ಗಿಂದಾಗೆ ಕೇಳುತ್ತಲೇ ಇರುತ್ತೇವೆ.
ಅದರ ಮುಂದುವರೆದ ಭಾಗವಾಗಿ ಇದೀಗ ಕೊರಗಜ್ಜ ದೈವ ಮತ್ತೆ ಪವಾಡ ಮೆರೆದಿದ್ದು, ವೈದ್ಯರೇ ಬದುಕುವ ಭರವಸೆ ನೀಡದ ಮಗುವಿಗೆ ಮರುಜೀವ ಸಿಕ್ಕಿದೆ.
ಹೌದು..! ಸಾಗರ ಮೂಲದ ಪುಟ್ಟ ಹೆಣ್ಣು ಮಗು ಅನಾರೋಗ್ಯದಿಂದ ಬಳಲುತ್ತಿದ್ದು ಕುಂದಾಪುರದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಇಲ್ಲಿಂದ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರ ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದ್ರೆ ಮಗುವಿನ ಆರೋಗ್ಯ ಚಿಂತಾಜನಕವಾಗಿದ್ದು, ಮಗು ಬದುಕುಳಿಯುವ ಬಗ್ಗೆ ವೈದ್ಯರು ವಿಶ್ವಾಸ ಕಳೆದುಕೊಂಡಿದ್ದರು.
ಈ ಮಾತು ಪೋಷಕರಿಗೂ ತಿಳಿಸಲಾಗಿತ್ತು. ಇದರಿಂದ ಕಂಗಾಲಾಗಿದ್ದ ಪೋಷಕರಿಗೆ ಆಸ್ಪತ್ರೆ ಬಳಿ ಇದ್ದ ವ್ಯಕ್ತಿ ಕೊರಗಜ್ಜ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಸಲಹೆ ನೀಡಿದ್ದರು.
ಅದರಂತೆ ಮಗುವಿನ ಪೋಷಕರು ಇಂದ್ರಾಳಿಯ ಎಂಜಿಎಂ ಹಾಸ್ಟೆಲ್ ಬಳಿಯಿರುವ ಕೊರಗಜ್ಜನ ಕ್ಷೇತ್ರಕ್ಕೆ ಬಂದು ಪ್ರಾರ್ಥನೆ ಸಲ್ಲಿಕೆ ಮಾಡಿ ಕರಿಗಂಧ ಮಗುವಿಗೆ ಹಚ್ಚಿದ್ದಾರೆ.
ಪವಾಡ ಎಂಬಂತೆ ಗಂಭೀರ ಸ್ಥಿತಿಯಲ್ಲಿದ್ದ ಪುಟ್ಟ ಕಂದಮ್ಮನ ಆರೋಗ್ಯ ದಿಢೀರ್ ಚೇತರಿಸಿಕೊಂಡಿದೆ. ಬಳಿಕ ವೈದ್ಯರು ಕೂಡ ಚಿಕಿತ್ಸೆ ಮುಂದುವರೆಸಿದ್ದು, ಮಗುವಿನ ಆರೋಗ್ಯ ಮತ್ತಷ್ಟು ಸುಧಾರಿಸಿದೆ.








