ಸಿದ್ದರಾಮಯ್ಯಗೆ ಕೋಟ ಶ್ರೀನಿವಾಸ್ ಪೂಜಾರಿ ಟಾಂಗ್
ಕೊಡಗು : ಐಟಿ ಎನ್ನುವುದು ಸರ್ಕಾರೇತರ ಸಂಸ್ಥೆ. ಹಣ ಜಾಸ್ತಿ ಇದ್ರೆ ಬಿಜೆಪಿ ಮೇಲೂ ದಾಳಿ ಮಾಡುತ್ತೆ ಕಾಂಗ್ರೇಸ್ ಮೇಲೂ ದಾಳಿ ಮಾಡುತ್ತೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಜಮೀರ್ ಅಹ್ಮದ್ ಮನೆ ಮೇಲಿನ ಐಟಿ ದಾಳಿ ರಾಜಕೀಯ ಪ್ರೇರಿತ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಕೊಡಗಿನಲ್ಲಿ ಪ್ರತಿಕ್ರಿಯೆ ನೀಡಿದ ಶ್ರೀನಿವಾಸ್ ಪೂಜಾರಿ, ಐಟಿ ಎನ್ನುವುದು ಸರ್ಕಾರೇತರ ಸಂಸ್ಥೆ. ಹಣ ಜಾಸ್ತಿ ಇದ್ರೆ ಬಿಜೆಪಿ ಮೇಲೂ ದಾಳಿ ಮಾಡುತ್ತೆ ಕಾಂಗ್ರೇಸ್ ಮೇಲೂ ದಾಳಿ ಮಾಡುತ್ತೆ. ಅದು ಯಾವುದೇ ಪಾರ್ಟಿಯನ್ನ ಹುಡುಕೊದಿಲ್ಲಾ ಅಕ್ರಮ ಹಣವನ್ನ ಹುಡುಕುತ್ತೆ ಎಂದರು.
ಇನ್ನು ಐಟಿ ತನ್ನಷ್ಟಕೆ ಕೆಲಸ ಮಾಡುತ್ತೆ ಅದಕ್ಕೂ ಸರ್ಕಾರಕ್ಕೂ ಏನು ಸಂಭಂದ ಇಲ್ಲಾ. ಕಾಂಗ್ರೇಸ್ ನ ಬಹುತೇಕ ನಾಯಕರು ಇದು ರಾಜಕೀಯ ಪ್ರೇರಿತ ಎನ್ನುತ್ತಿದ್ದು, ಅವರಿಗೆ ಬೇರೆ ದಾರಿ ಇಲ್ಲಾ. ತಪ್ಪನ್ನ ಸಮರ್ಥ ಮಾಡಿಕೋಳ್ಳೋದು ಯಾರಿಗೂ ಸರಿಯಲ್ಲ. ಐಟಿ ದಾಳಿಯಾದವರು ತಮ್ಮ ಆಕ್ರಮಣವನ್ನ ಕಡಿಮೆ ಮಾಡೋದು ಓಳಿತು ಎಂದು ಸಚಿವರು ಹೇಳಿದರು.