ಮಾತಿಗೆ ತಪ್ಪಿದ ಕೋಟಿಗೊಬ್ಬ ನಿರ್ಮಾಪಕ – ಸಲಗ ಶ್ರೀಕಾಂತ್ ಬೇಸರ
ಕೋಟಿಗೊಬ್ಬ ಚಿತ್ರದ ನಿರ್ಮಾಪಕ ಹೇಳಿದ ಮಾತಿನಂತೆ ನಡೆದುಕೊಂಡಿಲ್ಲ. ಕೊಟ್ಟ ಮಾತನ್ನು ಅವರು ಉಳಿಸಿಕೊಂಡಿಲ್ಲ. ಅವರೇ ಹೇಳಿದಂತೆ ಕೇಳಿದ್ರೂ ಅವರು ಮಾತು ಉಳಿಸಿಕೊಂಡಿಲ್ಲ ಎಂದು ಸಲಗ ಚಿತ್ರದ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಬೇಸರ ವ್ಯಕ್ತಪಡಿಸಿದ್ದಾರೆ. ಕೋಟಿಗೊಬ್ಬ-3 ಚಿತ್ರದ ವಿರುದ್ಧ ಮಾತ್ರ ಷಡ್ಯಂತ್ರವಾಗಿಲ್ಲ. ಸಲಗ ಚಿತ್ರದ ವಿರುದ್ಧವೂ ಷಡ್ಯಂತ್ರ ನಡೆದಿದೆ ಎಂದು ನಿರ್ಮಾಪಕ ಶ್ರಿಕಾಂತ್ ಆರೋಪಿಸಿದ್ದಾರೆ.
ಮೈಸೂರು ವಿತರಕರು ಕೋಟಿಗೊಬ್ಬ ಚಿತ್ರಕ್ಕೆ ಮಾಡಿದಂತೆ ನಮಗೂ ಮಾಡಿದ್ದಾರೆ. ನಮಗೂ ಹಣಕೊಡದೇ ಕೈಕೊಟ್ಟಿದ್ದಾರೆ ಎಂದು ಶ್ರೀಕಾಂತ್ ಹೇಳಿದ್ದಾರೆ. ಇನ್ನು ಸುದೀಪ್ ಅಭಿನಯದ ಕೋಟಿಗೊಬ್ಬ-3 ಮತ್ತು ಸಲಗ ಚಿತ್ರ ಒಂದೇ ದಿನ ಬಿಡುಗಡೆ ಹೇಗೆ ಆಯ್ತು ಎಂಬುದರ ಬಗ್ಗೆಯೂ ಶ್ರೀಕಾಂತ್ ಅವರು ಮಾಹಿತಿ ನೀಡಿದ್ದಾರೆ.
ನಾವು ಸಕ್ರೀಯ ನಿರ್ಮಾಪಕರು ಎಂಬ ಸಂಘ ಮಾಡಿಕೊಂಡಿದ್ದೇವು. ಎಲ್ಲರೂ ಜೊತೆಯಾಗಿ ಮಾತನಾಡಿಕೊಂಡು ಎರಡು ವಾರಗಳ ಅಂತರದಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಬೇಕು ಎಂದು ಮಾತನಾಡಿಕೊಂಡಿದ್ದೇವು. ಚಿತ್ರ ಮಂದಿರಗಳು ಪೂರ್ಣ ಪ್ರಮಾಣದಲ್ಲಿ ತೆರೆಯುವಂತೆ ಸರ್ಕಾರ ಆದೇಶ ನೀಡಿದಾಗ ಸ್ವತಃ ಸೂರಪ್ಪ ಬಾಬು ಅವರೇ ನನಗೆ ಕರೆ ಮಾಡಿದ್ದರು. ನಮ್ಮ ಸಿನಿಮಾ ತಡವಾಗಿ ಬಿಡುಗಡೆ ಮಾಡುತ್ತೇವೆ. ಕಾಪಿ ರೆಡಿಯಾಲು ಸ್ವಲ್ಪ ತಡವಾಗುತ್ತದೆ ನೀವು ಅಕ್ಟೋಬರ್ 14ಕ್ಕೆ ಸಿನಿಮಾವನ್ನು ಬಿಡುಗಡೆ ಮಾಡಿ ಎಂದು ಹೇಳಿದ್ದರು ಎಂಬ ವಿಷ್ಯವನ್ನು ಶ್ರೀಕಾಂತ್ ಅವರು ಮಾಧ್ಯದ ಜೊತೆ ಹಂಚಿಕೊಂಡಿದ್ದಾರೆ.
ಆದಾಗ ನಂತರ ಸೂರಪ್ಪ ಬಾಬು ಅವರು ಅಕ್ಟೋಬರ್ 15ಕ್ಕೆ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ನಂತರ ಅಕ್ಟೋಬರ್ 14ಕ್ಕೆ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಅವರ ಕಚೇರಿಗೆ ಹೋಗಿ ನಾನು ಮಾತನಾಡಿಕೊಂಡು ಬಂದಿದ್ದೇನೆ. ಆದ್ರೆ ಅವರು ಯಾಕೆ ಈ ರೀತಿ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಇಲ್ಲಿ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳಬಹುದಿತ್ತು. ಇಲ್ಲಿ ಯಾರು ಕುತಂತ್ರ ಮಾಡಿದ್ದಾರೆ ಎಂಬುದನ್ನು ಕೂಡ ಸದ್ಯದಲ್ಲೇ ಬಹಿರಂಗಪಡಿಸುವಾಗಿ ಶ್ರೀಕಾಂತ್ ಹೇಳಿದ್ದಾರೆ.