D.K.Shivakumar | ಇಟಲಿ ಮೂಲದವರನ್ನು ಮೆಚ್ಚಿಸುವುದಕ್ಕಾಗಿ ಸದಾರಮೆ ನಾಟಕ
ಬೆಂಗಳೂರು : ನಾವು ಅಧಿಕಾರಕ್ಕೆ ಬಂದರೇ ಮತಾಂತರ ನಿಯಂತ್ರಣ ಕಾಯ್ದೆ ರಿವರ್ಸ್ ಪಡೆಯುತ್ತೇವೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ರಾಜ್ಯ ಬಿಜೆಪಿ ತಿರುಗೇಟು ನೀಡಿದೆ.
ಈ ಕುರಿತು ಸರಣಿ ಟ್ವೀಟ್ ಗಳನ್ನ ಮಾಡಿರುವ ಬಿಜೆಪಿ, ಮಾನ್ಯ ಡಿ.ಕೆ.ಶಿವಕುಮಾರ್ ಅವರೇ,ಮತಾಂತರ ನಿಯಂತ್ರಣ ಕಾಯ್ದೆ ರಿವರ್ಸ್ ಮಾಡುತ್ತೇವೆ ಎಂದಿದ್ದೀರಿ. ಅಂದರೆ ನೀವು ಹಿಂದೂಗಳನ್ನು ಮತಾಂತರ ಮಾಡಲೆಂದೇ ಒಂದು ಕಾನೂನು ರೂಪಿಸುತ್ತೀರಾ ಎಂದು ಪ್ರಶ್ನಿಸಿದೆ.
ಮತಾಂತರ ನಿಯಂತ್ರಣ ಕಾಯ್ದೆಯ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಆಕ್ರೋಶ ಭರಿತರಾಗಿದ್ದಾರೆ. ಇಟಲಿ ಮೂಲದವರನ್ನು ಮೆಚ್ಚಿಸುವುದಕ್ಕಾಗಿ ಈ ಸದಾರಮೆ ನಾಟಕವೇ? ಹಿಂದೂಗಳು ಮತಾಂತರವಾದರೂ ಪರವಾಗಿಲ್ಲ ಎನ್ನುವ ನಿಮ್ಮ ಹಿಂದೂ ವಿರೋಧಿ ನಿಲುವಿಗೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಿಗೆ ತಮ್ಮದೇ ಕೋಟೆ ಕನಕಪುರ, ಕಪಾಲಿ ಬೆಟ್ಟ, ಹಾರೋಬೆಲೆ ವ್ಯಾಪ್ತಿಯಲ್ಲಿ ಮತಾಂತರದ ಪರವಾಗಿರುವವರ ಮತ ಕಳೆದುಕೊಳ್ಳುವ ಭೀತಿ ಎದುರಾಗಿದೆ.ಮತಾಂತರದ ಪರವಾಗಿರುವವರ ಓಲೈಕೆಗಾಗಿ ಮತಾಂತರ ನಿಯಂತ್ರಣ ಕಾಯ್ದೆಯಂತಹ ಜನಸ್ನೇಹಿ ಕಾನೂನಿಗೆ ವಿರೋಧಿಸುತ್ತಿದ್ದೀರಿ ಅಲ್ಲವೇ ಎಂದು ಬಿಜೆಪಿ ಟೀಕೆ ಮಾಡಿದೆ.
kpcc-d-k-shivakumar-congress-bjp









