D K Sivakumar – ಬೊಮ್ಮಾಯಿ ಕೇವಲ ಲಿಂಗಾಯತ ಜಾತಿ ಮೇಲೆ ಸಿಎಂ ಆಗಿದ್ದಾರಾ?
ಬೆಂಗಳೂರು : ಬಸವರಾಜ ಬೊಮ್ಮಾಯಿ ಅವರು ಕೇವಲ ಲಿಂಗಾಯತ ಜಾತಿ ಮೇಲೆ ಸಿಎಂ ಆಗಿದ್ದಾರಾ ಎಂದು ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಲಿಂಗಾಯತ ಸಿಎಂ ಟಾರ್ಗೆಟ್ ಮಾಡುತ್ತಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, ‘ಮುಖ್ಯಮಂತ್ರಿ ಬೊಮ್ಮಾಯಿ ಅವರು ಕೇವಲ ಲಿಂಗಾಯತ ಜಾತಿ ಮೇಲೆ ಸಿಎಂ ಆಗಿದ್ದಾರಾ?
ಸಂವಿಧಾನದ ಪ್ರಕಾರ ಅವರು ಸಿಎಂ ಆಗಿದ್ದಾರೆ. ನಾವು ಸರ್ಕಾರವನ್ನು ಟಾರ್ಗೆಟ್ ಮಾಡ್ತಿದೇವೆ.
ಸಿಎಂ ಆದವರು ಸರ್ಕಾರದ ಮುಖ್ಯಸ್ಥರಾಗಿದ್ದಾರೆ. ಹೀಗಾಗಿ ಸರ್ಕಾರದ ವೈಫಲ್ಯಗಳನ್ನು ಇಟ್ಟುಕೊಂಡಷ್ಟೇ ಅವರನ್ನು ಗುರಿ ಮಾಡುತ್ತಿದ್ದೇವೆ.
ಇದರಲ್ಲಿ ಜಾತಿ ಪ್ರಶ್ನೆಯೇ ಇಲ್ಲ’ ಎಂದು ತಿರುಗೇಟು ನೀಡಿದರು.
ಬಿಜೆಪಿ ಸರ್ಕಾರದಲ್ಲಿ ರೋಗಿಗಳು, ರೈತರು, ಕಾರ್ಮಿಕರಿಗೆ ರಕ್ಷಣೆ ಇಲ್ಲವಾಗಿದೆ. ರಾಜ್ಯದಲ್ಲಿ ಸರ್ಕಾರವೇ ಇಲ್ಲ ಎಂಬಂತೆ ಅದು ವಿಫಲವಾಗಿದೆ.
ಕಾನೂನು ಸಚಿವರೇ ಹೇಳಿದ್ದಾರೆ, ನಾವು ಸರ್ಕಾರದಲ್ಲಿ ಆಡಳಿತ ನಡೆಸುತ್ತಿಲ್ಲ, ಕೇವಲ ಸರ್ಕಾರವನ್ನು ತಳ್ಳುತಿದ್ದೇವೆ ಎಂದು.
ಹೀಗಾಗಿ ಈ ಸರ್ಕಾರದಿಂದ ಜನರ ರಕ್ಷಣೆ ಅಸಾಧ್ಯವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ನಿನ್ನೆಯ ಆಂಬುಲೆನ್ಸ್ ಸೇವೆ ಸ್ಥಗಿತ ವಿಚಾರವಾಗಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.