ಕಲಬುರಗಿಯಲ್ಲಿ ಸೋಂಕಿತರ ಡೇಟಾ ಮುಚ್ಚಿಡಲಾಗುತ್ತಿದೆ : ಪ್ರಿಯಾಂಕ್ ಖರ್ಗೆ
ಕಲಬುರಗಿ : ಕಲಬುರಗಿಯಲ್ಲಿ ಸೋಂಕಿತರ ಡೇಟಾ ಮುಚ್ಚಿಡಲಾಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ಆತಂಕ ದಿನೇ ದಿನೇ ಹೆಚ್ಚಾಗ್ತಾಯಿದೆ.
ಕೊರೊನಾ ಎರಡನೇ ಅಲೆ ಬಗ್ಗೆ ಸರ್ಕಾರವೇ ಒಪ್ಪಿಕೊಂಡಿದೆ, ಕೊರೊನಾ ಮೊದಲ ಅಲೆಯಲ್ಲೆ ಸರ್ಕಾರ ಪಾಠ ಕಲಿತಿಲ್ಲ.
ಕಳೆದ ವರ್ಷ ಮಾಡಿದ ತಪ್ಪುಗಳನ್ನೆ ಸರ್ಕಾರ ಮತ್ತೆ ಮಾಡ್ತಿದೆ ಎಂದು ಕಿಡಿಕಾರಿದರು.
ಇನ್ನು ನಮ್ಮ ಜಿಲ್ಲೆಯಲ್ಲಿ ರಾಮನದೊಂದು ಲೆಕ್ಕ, ಕೃಷ್ಣನದೊಂದು ಲೆಕ್ಕ ಎಂಬಂತಾಗಿದೆ. ಸರ್ಕಾರ ಕೊರೊನಾ ಸೊಂಕಿತರ ಪ್ರಮಾಣವನ್ನ ಹೈಡ್ ಮಾಡ್ತಿದೆ.
ಕಲಬುರಗಿಯಲ್ಲಿ ಸೋಂಕಿತರ ಡೇಟಾ ಮುಚ್ಚಿಡಲಾಗ್ತಿದೆ, ಸರ್ಕಾರ ಸುಳ್ಳು ಹೇಳ್ತಿದೆ.
ಮೀಡಿಯಾ ಬುಲೆಟಿನ್ ಮತ್ತು ಮೇನ್ ಡೇಟಾದ ಕೊವಿಡ್ ರಿಪೋಟ್೯ ಮಧ್ಯೆ ವ್ಯತ್ಯಾಸವಿದೆ ಎಂದು ದೂರಿದರು.










