Kraken Variant : ಕೊರೊನಾ ವೈರಸ್ ನ ಮತ್ತೊಂದು ಅಪಾಯಾಕಾರಿ ರೂಪಾಂತರ ಪತ್ತೆ…
ಕರೊನಾ ವೈರಸ್ ಅನ್ನ ನಿಯಂತ್ರಿಸಲು ಸರ್ಕಾರ ಮತ್ತು ವೈದ್ಯಕೀಯ ವಿಜ್ಞಾನ ಎಷ್ಟೇ ಪ್ರಯತ್ನಸಿದರೂ ಸಾಧ್ಯವಾಗುತ್ತಿಲ್ಲ. ಕರೋನಾ ವೈರಸ್ ಒಮಿಕ್ರಾನ್ ರೂಪಾಂತರದ ಹಲವು ಉಪರೂಪಾಂತರಗಳು ಮತ್ತೆ ಮತ್ತೆ ಪತ್ತೆಯಾಗುತ್ತಿವೆ.
ಇದೀಗ ಕ್ರಾಕನ್ ಎನ್ನುವಂತಹ ಅಪಾಯಕಾರಿ ಉಪರೂಪಾಂತರವೊಂದು ಪತ್ತೆಯಾಗಿದೆ. ಈಗಾಗಲೇ 29 ದೇಶಗಳಲ್ಲಿ ಹರಡಿಕೊಂಡಿರುವ ಇದು ಈಗಾಗಲೇ ಭಾರತಕ್ಕೂ ಕಾಲಿಟ್ಟಿದೆ ಎಂದು ಹೇಳಲಾಗುತ್ತಿದೆ. ಕ್ರಾಕನ್ ಎಂಬುದು XBB.1.5 SarsCoV-2 ರೂಪಾಂತರದ ಅಡ್ಡಹೆಸರು. ಬೇರೆ ಉಪರೂಪಾಂತರಗಳಂತೆ ಇದು ಸಹವೇಗವಾಗಿ ಹರಡುತ್ತಿದೆ.
ಅಮೆರಿಕಾದ ವೈಟ್ ಹೌಸ್ ಕೋವಿಡ್-19 ಸಂಯೋಜಕ ಡಾ. ಆಶಿಶ್ ಕೆ. ಟ್ವೀಟ್ ಮೂಲಕ ಒಮಿಕ್ರಾನ್ XBB.1.5 ಬಗ್ಗೆ ತುಂಬಾ ಕಾಳಜಿ ವಹಿಸುವಂತೆ ಸಲಹೆ ನೀಡಿದ್ದಾರೆ. ಕ್ರಾಕನ್ ರೂಪಾಂತರವು ಅತ್ಯಂತ ವೇಗವಾಗಿ ಹರಡುತ್ತಿದೆ. ಕೆಲ ವಾರಗಳಲ್ಲಿ ಇದು ಶೇ. 40 ರಿಂದ 40 ರಷ್ಟು ತಲುಪಿದೆ ಎಂದು ತಿಳಿಸಿದ್ದಾರೆ.
ಓಮಿಕ್ರಾನ್ XBB. 1.5 ರೂಪಾಂತರ ಅತ್ಯಂತ ಅಪಾಯಕಾರಿ ರೂಪಾಂತರವಾಗಿದೆ. ಇತರೆ ರೂಪಾಂತರಗಳಿಗಿಂತ ವೇಗವಾಗಿ ಹರಡುತ್ತದೆ. ಅದರೇ ಸಾವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇಲ್ಲ ಎಂದು ತಿಳಿಸಿದ್ದಾರೆ.
Kraken Variant: Another dangerous variant of Corona virus has been discovered…