8 ವರ್ಷಗಳ ಬಳಿಕ ಒಂದಾದ `ಬುಲ್ ಬುಲ್’ ಜೋಡಿ Darshan saaksha tv
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಲಿರುವ ‘ಕ್ರಾಂತಿ’ ಸಿನಿಮಾ ಘೋಷಣೆ ಆದಾಗಿನಿಂದ ಸಿನಿಮಾಕ್ಕೆ ನಾಯಕಿ ಯಾರಾಗುತ್ತಾರೆ ಎಂದು ಕುತೂಹಲ ಡಿ ಬಾಸ್ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಆದರೆ ಆ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ.
ಪ್ಯಾನ್ ಇಂಡಿಯಾ ರೇಂಜ್ ನಲ್ಲಿ ಸೆಟ್ಟೇರುತ್ತಿರುವ ಕ್ರಾಂತಿ ಸಿನಿಮಾದಲ್ಲಿ ದಚ್ಚು ಜೊತೆ ರಚ್ಚು ಹೆಜ್ಜೆ ಹಾಕಲಿದ್ದಾರೆ.
‘ಬುಲ್-ಬುಲ್’ ಸಿನಿಮಾದ ಮೂಲಕ ಸಿನಿಮಾ ನಟನೆ ಆರಂಭಿಸಿದ ರಚಿತಾ ರಾಮ್ ಇದೀಗ ಎಂಟು ವರ್ಷಗಳ ಬಳಿಕ ಮತ್ತೆ ದರ್ಶನ್ ಜೊತೆ ನಟಿಸುತ್ತಿದ್ದಾರೆ.
ಸಿನಿಮಾದ ಮುಹೂರ್ತ ಗಣೇಶ ದೇವಾಲಯದಲ್ಲಿ ನಡೆದಿದ್ದು, ಸಿನಿಮಾಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಸಂಸದೆ, ನಟಿ ಸುಮಲತಾ ಶುಭ ಹಾರೈಸಿದ್ದಾರೆ.
‘ಕ್ರಾಂತಿ’ ಸಿನಿಮಾವನ್ನು ವಿ.ಹರಿಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾವನ್ನು ಶೈಲಜಾ ನಾಗ್ ಹಾಗೂ ಬಿ ಸುರೇಶ್ ನಿರ್ಮಾಣ ಮಾಡುತ್ತಿದ್ದಾರೆ.
ಈ ಹಿಂದೆ ದರ್ಶನ್ ನಟನೆಯ ‘ಯಜಮಾನ’ ಸಿನಿಮಾವನ್ನು ಹರಿಕೃಷ್ಣ ನಿರ್ದೇಶನ ಮಾಡಿದ್ದರು.









