Kranti : ಧಿಡೀರ್ ಒಟಿಟಿ ರಿಲೀಸ್ ಡೇಟ್ ಅನೌನ್ಸ್..!! ಹಿಂದಿ ಬಿಟ್ಟು ಮಿಕ್ಕ ಭಾಷೆಯಲ್ಲಿ ಸ್ಟರೀಮಿಂಗ್..!!
ಡಿ ಬಾಸ್ ಕ್ರಾಂತಿ ಸಿನಿಮಾ ಥಿಯೇಟರ್ ಗಳಲ್ಲಿ ಗೆದ್ದಿದೆ..
ಕ್ರಾಂತಿ ಸಕ್ಸಸ್ ನ ನಂತರ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬ್ಯಾಕ್ ಟು ಬ್ಯಾಕ್ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಲಿದ್ದಾರೆ..
ಇತ್ತೀಚೆಗಷ್ಟೇ ಅವರ 56 ನೇ ಸಿನಿಮಾದ ಟೈಟಲ್ ಹಾಗೂ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು , ಈ ಸಿನಿಮಾಗೆ ‘ಕಾಟೇರ’ ಟೈಟಲ್ ಫಿಕ್ಸ್ ಮಾಡಲಾಗಿದೆ..
ಅದ್ರಲ್ಲೂ ಮೋಷನ್ ಪೋಸ್ಟರ್ ಟೀಸರ್ ಮಾತ್ರ ಸಖತ್ ಸೌಂಡ್ ಮಾಡ್ತಿದ್ದು , ಕ್ರೇಜ್ ಹೆಚ್ಚಿಸಿದೆ., ದಚ್ಚು ರಗಡ್ ಲುಕ್ ನಲ್ಲಿ ಕಂಡು ಫ್ಯಾನ್ಸ್ ಉಬ್ಬೇರಿಸಿದ್ದಾರೆ..
ಅಂದ್ಹಾಗೆ ಹೊಸ ಹೊಸ ಪ್ರಾಜೆಕ್ಟ್ ಗಳ ಅನೌನ್ಸ್ ಹೊತ್ತಲ್ಲೇ ಕ್ರಾಂತಿ ಸಿನಿಮಾದ ಬಗ್ಗೆ ಬ್ರೇಕಿಂಗ್ ನ್ಯೂಸ್ ಕೊಟ್ಟಿದೆ ಸಿನಿಮಾತಂಡ..
ಸಿನಿಮಾ ಒಟಿಟಿ ರಿಲೀಸ್ ಡೇಟ್ ಅನ್ನ ಧಿಡೀರ್ ಅಂತ ಅನೌನ್ಸ್ ಮಾಡಿದೆ…
ಜನವರಿ 26 ಗಣರಾಜ್ಯೋತ್ಸವಕ್ಕೆ ಸಿನಿಮಾ ರಿಲೀಸ್ ಆಗಿತ್ತು..
ಅಕ್ಷರ ‘ಕ್ರಾಂತಿ’ ಯ ಬಗ್ಗೆ ರಾಜ್ಯದ ಸರ್ಕಾರಿ ಶಾಲೆಗಳ ಸ್ಥಿತಿ ಗತಿ ಬಗ್ಗೆ ಅರಿವು ಮೂಡಿಸಿ ಒಂದೊಳ್ಳೆ ಸಂದೇಶ ಸಿನಿಮಾದಲ್ಲಿ ನೀಡಲಾಗಿದೆ..
ಜೊತೆಗೆ ಸಿನಿಮಾದ ಹಾಡುಗಳು ಕೂಡ ಸೂಪರ್ ಹಿಟ್ ಎನಿಸಿಕೊಂಡಿದೆ..
ಸಿನಿಮಾದಲ್ಲಿ ದರ್ಶನ್ ಗೆ ರಚಿತಾ ನಾಯಕಿಯಾಗಿದ್ದಾರೆ..
ಹರಿಕೃಷ್ಣ ಸಾರಥ್ಯದ ಈ ಸಿನಿಮಾ ಈಗ ಶೀಘ್ರವೇ ಒಟಿಟಿಗೆ ಬರಲು ರೆಡಿಯಾಗಿದೆ..
ಅಂದ್ಹಾಗೆ ಫೆಬ್ರವರಿ 23 ಕ್ಕೆ ‘ಕ್ರಾಂತಿ’ ಅಮೇಜಾನ್ ಪ್ರೈಂ ಗೆ ಬರಲಿದೆ..
ಈ ಮೂಲಕ ಸಿನಿಮಾ ರಿಲೀಸ್ ಆಗಿ ಕೇವಲ 28 ದಿನಗಳಿಗೆ ಸಿನಿಮಾ ಒಟಿಟಿಯಲ್ಲಿ ಸಿಗಲಿದೆ… ಇದು ಒಂದು ರೀತಿ ಶಾಕಿಂಗ್ ಎನಿಸಿದೆ..
ಕ್ರಾಂತಿ ಸಿನಿಮಾ ಸೆಟ್ಟೇರಿದಾಗಿನಿಂದಲೇ ಇದು ಪ್ಯಾನ್ ಇಂಡಿಯಾ ಸಿನಿಮಾ ಅಂತಲೇ ಹೇಳಲಾಗುತ್ತಿತ್ತು.. ಚಿತ್ರದ ಹಾಡುಗಳನ್ನು ಏಕಕಾಲಕ್ಕೆ 5 ಭಾಷೆಗಳಲ್ಲಿ ರಿಲೀಸ್ ಮಾಡಲಾಗಿತ್ತು.
ಹಾಗೆಯೇ ಇತರೇ ಭಾಷೆಗಳಿಗೂ ಸಿನಿಮಾ ಡಬ್ ಆಗಿದೆ ಎಂಬ ಅಪ್ ಡೇಟ್ಸ್ ಸಿಕ್ಕಿತ್ತಾದ್ರೂ ಸಿನಿಮಾ ಥಿಯೇಟರ್ ಗಳಲ್ಲಿ ರಿಲೀಸ್ ಆಗಿದ್ದು ಮಾತ್ರ ಕನ್ನಡ ಭಾಷೆಯಲ್ಲಿಯೇ..
ಆದ್ರೆ ಒಟಿಟಿಯಲ್ಲಿ ಕನ್ನಡ, ತೆಲುಗು , ತಮಿಳು , ಮಲಯಾಳಂನಲ್ಲಿ ಏಕಕಾಲದಲ್ಲಿ ಸಿನಿಮಾ ಸ್ಟ್ರೀಮ್ ಆಗಲಿದೆ. ಈ ಬಗ್ಗೆ ಅಮೇಜಾನ್ ಪ್ರೈಂ ಖಚಿತಪಡಿಸಿದೆ..
ಆದ್ರೆ ಹಿಂದಿಯ ಕಥೆಯೇನು ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸಿದೆ..
ಹಿಂದಿಯ ಒಟಿಟಿ ಹಕ್ಕು ಬೇರೆ ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಸೇಲಾಗಿದ್ಯಾ ಅಥವ ನೇರವಾಗಿ ಹಿಂದಿ ವಾಹಿನಿಯಲ್ಲಿ ಪ್ರೀಮಿಯರ್ ಆಗಲಿದ್ಯಾ ಎಂಬ ಚರ್ಚೆಯಿದ್ದು , ಮುಂದಿನ ದಿನಗಳಲ್ಲಿ ಇದಕ್ಕೆ ಉತ್ತರ ಸಿಗಲಿದೆ..
Kranti , darshan’s kranti to release in ott soon