ಕ್ರಿಶ್ ಸೀರೀಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್ – ರೋಚಕ ಟೀಸರ್ ರಿಲೀಸ್..!
ಭಾರತೀಯ ಸಿನಿಮಾರಂಗ ಮಾತ್ರವಲ್ಲದೇ ವಿಶ್ವದ ಜನರೇ ಇಷ್ಟಪಡುವ ಕ್ರಿಶ್ ಸಿನಿಮಾಗೆ ಎಲ್ಲೆಡೆ ಫ್ಯಾನ್ಸ್ ಇದ್ದಾರೆ.. ಹೃತಿಕ್ ರೋಷನ್ ಸೂಪರ್ ಹೋರೋ ಆಗಿ ತೆರೆಮೇಲೆ ಕಾಣಿಸಿಕೊಂಡು ಆ ಪಾತ್ರಕ್ಕೆ ಕೀವ ತುಂಬಿದ್ದಾರೆ.. 2006ರಲ್ಲಿ ಬಂದ ಕ್ರಿಶ್ ಮೊದಲ ಸರಣಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಹೃತಿಕ್ ರೋಷನ್ ತಂದೆ ರಾಕೇಶ್ ರೋಷನ್ ಸಾರಥ್ಯದಲ್ಲಿ ಸಿನಿಮಾ ಮೂಡಿಬಂದಿತ್ತು.
ಈಗಾಗಲೇ ಮೊದಲ 3 ಸರಣಿಗಳು ಪ್ರೇಕ್ಷಕರನ್ನ ಸಖತ್ ರಂಜಿಸಿದೆ.. ಕ್ರಿಶ್ ಮೊದಲ ಸರಣಿ ಬಿಡುಗಡೆಯಾಗಿ 15 ವರ್ಷಗಳು ಕಳೆದಿವೆ. ಇದೀಗ 4 ನೇ ಸರಣಿ ಕೂಡ ರೆಡಿಯಾಗ್ತಿದೆ. ಈಗಾಗಲೇ ಕ್ರಿಶ್ 3 ಸರಣಿಗಳನ್ನು ಯಶಸ್ವಿಯಾಗಿ ಮುಗಿಸಿದೆ. ಈ ನಡುವೆ ಹೃತಿಕ್ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.
ಕ್ರಿಶ್ 4 ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದಾರೆ. ವಾರ್ ಸಿನಿಮಾ ಬಳಿಕ ಹೃತಿಕ್ ಅಧಿಕೃತವಾಗಿ ಯಾವುದೇ ಅನೌನ್ಸ್ ಮಾಡಿರಲಿಲ್ಲ. ಇದೀಗ ಕ್ರಿಶ್ 4ನೇ ಸರಣಿ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗುತ್ತಿದ್ದಾರೆ. ಈ ಬಗ್ಗೆ ಸ್ವತಃ ಹೃತಿಕ್ ಬಹಿರಂಗ ಪಡಿಸಿದ್ದಾರೆ. ಕ್ರಿಶ್ 4 ಸರಣಿ ಬಗ್ಗೆ 5 ಸೆಕೆಂಡ್ ಗಳ ಟೀಸರ್ ಶೇರ್ ಮಾಡಿದ್ದಾರೆ. ಟೀಸರ್ ನಲ್ಲಿ, ‘ಕ್ರಿಶ್ ಚಿತ್ರಕ್ಕೆ 15 ವರ್ಷಗಳು. ಹಿಂದಿನದು ಮುಗಿದಿದೆ. ಭವಿಷ್ಯ ಏನನ್ನು ತರುತ್ತೆ ಎಂದು ನೋಡೋಣ’ ಎಂದು ಬರೆದುಕೊಂಡಿದ್ದಾರೆ.
2013ರಲ್ಲಿ ಕ್ರಿಶ್ ಮೂರನೇ ಸರಣಿ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಹೃತಿಕ್ ರೋಷನ್ ದ್ವಿಪಾತ್ರದಲ್ಲಿ ಮಿಂಚಿದ್ದರು. ಪ್ರಿಯಾಂಕಾ ಚೋಪ್ರಾ, ಕಂಗನಾ ರಣಾವತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ 4ನೇ ಸರಣಿಯು ಶೀಘ್ರವೇ ಸೆಟ್ಟೇರಲಿದ್ದು, ಯಾವುದೇ ಹೆಚ್ಚಿನ ಅಪ್ ಡೇಟ್ಸ್ ನಿಕ್ಕಿಲ್ಲ.
The past is done .
Let’s see what the future brings. #15YearsOfKrrish #Krrish4 pic.twitter.com/xbp5QzwObF— Hrithik Roshan (@iHrithik) June 23, 2021