krishna nadig
ಸ್ಯಾಂಡಲ್ ವುಡ್ ನ ಹಿರಿಯ ನಟ ಮತ್ತು ಬರಹಗಾರ ಕೃಷ್ಣ ನಾಡಿಗ್ ತಡರಾತ್ರಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ಕಳೆದು ಮೂರು ದಿನಗಳಿಂದ ಕೃಷ್ಣ ನಾಡಿಗ್ ಅವರಿಗೆ ಎದೆ ನೋವು ಕಾಣಿಸಿಕೊಳ್ಳುತ್ತಿತ್ತಂತೆ.
ಆದರೆ ಶೂಟಿಂಗ್ ಇದ್ದ ಕಾರಣ ವೈದ್ಯರ ಬಳಿ ಹೋಗಲು ನಿರ್ಲಕ್ಷ್ಯ ಮಾಡಿದ್ದಾರೆ.
ರಾತ್ರಿ ಎದೆ ನೋವು ಜಾಸ್ತಿಯಾಗಿದೆ. ಆದರೆ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ.
ಸುಮಾರು ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರೀಯರಾಗಿ ಸಾಕಷ್ಟು ಸಿನಿಮಾಗಳಿಗೆ ಬರಹಗಾರನಾಗಿ ಕೆಲಸ ಮಾಡಿ, ಜೊತೆಗೆ ಕಲಾವಿದರಾಗಿಯೂ ಜನಪ್ರಿಯರಾಗಿದ್ದಾರೆ.
ಕೃಷ್ಣ ನಾಡಿಗ್ ನಿಧನಕ್ಕೆ ಕಿರುತೆರೆ ಮತ್ತು ಸ್ಯಾಂಡಲ್ ವುಡ್ ಗಣ್ಯರು ಕಂಬನಿ ಮಿಡಿದಿದ್ದಾರೆ.
ಕೃಷ್ಣ ನಾಡಿಗ್ ಮೂಲತಃ ಚಿಕ್ಕಮಗಳೂರಿನ ಕಡೂರಿನವರು. ತಂದೆ-ತಾಯಿಯಿಂದ ಸಾಂಸ್ಕೃತಿಕ ಲೋಕದ ಕಡೆ ಒಲವು ಬೆಳೆಸಿಕೊಂಡಿದ್ದರು.
ನಿರ್ದೇಶಕ ಪುಟ್ಟಣ್ಣ ಕಣಗಲ್ ಅವರ ಚಿತ್ರಗಳನ್ನು ನೋಡಿ ತಾವು ನಿರ್ದೇಶಕರಾಗಬೇಕೆಂದು ಕನಸುಕಂಡಿದ್ದರು.
ಆದರೆ ಅವರ ಕನಸು ಕೊನೆಗೂ ನನಸಾಗಲಿಲ್ಲ.
ಓದು ಮುಗಿಸಿ ಬೆಂಗಳೂರಿಗೆ ಬಂದು ಕಿರ್ಲೋಸ್ಕರ್ ಫ್ಯಾಕ್ಟರಿಯಲ್ಲಿ ವೃತ್ತಿ ಜೀವನ ಪ್ರಾರಂಭಿಸಿದ್ದರು.
ಚಕ್ರತೀರ್ಥ ಧಾರಾವಾಹಿ ಮೂಲಕ ನಟರಾಗಿ ಗುರುತಿಸಿಕೊಂಡರು. ಪಲ್ಲವಿ ಅನು ಪಲ್ಲವಿ, ಮಹಾದೇವಿ ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಪೈಲ್ವಾನ್, ಆದಿ ಲಕ್ಷ್ಮಿ ಪುರಾಣ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
krishna nadig
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel