ವಿಜಯಪುರ: ಪಶ್ಚಿಮ ಘಟ್ಟದಲ್ಲಿ ಬಾರೀ ಮಳೆಯಾಗುತ್ತಿರುವ ಪರಿಣಾಮ ಕೃಷ್ಣಾ ನದಿಯಲ್ಲಿ ಒಳ ಹರಿವು ಹೆಚ್ಚಾಗಿದೆ. ಧಾರಾಕಾರ ಮಳೆಗೆ ಇಂದು ಒಂದೇ ದಿನ ಜಲಾಶಯಕ್ಕೆ 13 ಟಿಎಂಸಿ ಅಡಿ ನೀರು ಹರಿದು ಬಂದಿದೆ. ಇನ್ನೂ ಮೂರ್ನಾಲ್ಕು ದಿನಗಳ ಕಾಲ ಮಳೆ ಹೀಗೆ ಮುಂದುವರೆದರೆ ಲಕ್ಷ ಕ್ಯುಸೆಕ್ ಗೂ ಹೆಚ್ಚು ಒಳಹರಿವಾಗುವ ಸಾಧ್ಯತೆಯಿದೆ. ಜಲಾಶಯದ ಒಳಹರಿವು 1.70 ಲಕ್ಷ ಕ್ಯುಸೆಕ್ ಗೆ ಏರಿಕೆಯಾದ ಹಿನ್ನೆಲೆ , ನದಿಗೆ 2.20 ಲಕ್ಷ ಕ್ಯುಸೆಕ್ ನೀರು ಬಿಡಲಾಗಿದೆ. ಜಲಾಶಯದ 26 ಗೇಟ್‌ಗಳ ಮೂಲಕವೂ ನೀರು ಹರಿಸಲಾಗಿದೆ. ಇತ್ತ ಹರಿವು ಹೆಚ್ಚಳವಾದ ಪರಿಣಾಮ ಡ್ಯಾಂನ ಸಮೀಪದಲ್ಲೇ ಇದ್ದ ಅರಳದಿನ್ನಿ ಗ್ರಾಮದ ಕೆಲ ಜಮೀನುಗಳು ಜಲಾವೃತಗೊಂಡಿದ್ದು, ಬೇಳೆ ನಾಶವಾಗಿ ರೈತರು ಕಂಗಾಲಾಗಿದ್ದಾರೆ. ಈಗಾಗಲೇ ಡ್ಯಾಂನಲ್ಲಿ 95 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಇನ್ನೂ 28 ಟಿಎಂಸಿ ಅಡಿ ನೀರಿನ ಸಂಗ್ರವದಾದಲ್ಲಿ ಡ್ಯಾಂ ಸಂಪೂರ್ಣ ಭರ್ತಿ ಆಗಲಿದೆ. ಹೀಗಾಗಿ ಇದೀಗ ನದಿ ಪಾತ್ರದ ಜನರಲ್ಲಿ ನೆರೆ ಭೀತಿ ಎದುರಾಗಿ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.
ಚಿನ್ನದ ಮೇಲೆ ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಾ? ಹಾಗಾದರೆ ನಿರ್ಧಾರ ತೆಗೆದುಕೊಳ್ಳುವ ಮುನ್ನ ಈ ಮಾಹಿತಿ ಓದಿ
ಭಾರತೀಯರ ಪಾಲಿಗೆ ಚಿನ್ನ ಕೇವಲ ಆಭರಣವಲ್ಲ, ಅದೊಂದು ಭಾವನೆ, ಪರಂಪರೆ ಮತ್ತು ಆಪತ್ಕಾಲದಲ್ಲಿ ಕೈಹಿಡಿಯುವ ಅತಿ ದೊಡ್ಡ ಆಸ್ತಿ. ಮನೆಯಲ್ಲಿ ಒಂದು ಶುಭ ಕಾರ್ಯ ನಡೆಯಲಿ ಅಥವಾ...








