Krithi Shetty Crying : ಲೈವ್ ನಲ್ಲಿ ಕಣ್ಣೀರಾಕಿದ ನಟಿ ಕೃತಿ ಶೆಟ್ಟಿ..!
‘ಉಪ್ಪೇನಾ’ ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟ ಮಂಗಳೂರು ಸುಂದರಿ ಕೃತಿಶೆಟ್ಟಿ ಟಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಮೊದಲ ಸಿನಿಮಾದಲ್ಲಿಯೇ ಬ್ಲಾಕ್ ಬಸ್ಟರ್ ಹಿಟ್ ಪಡೆದ ಕೃತಿ ಶೆಟ್ಟಿ ಆ ನಂತರ ಶ್ಯಾಮ್ ಸಿಂಗ ರಾಯ್, ಬಂಗಾರ್ರಾಜು ಸಿನಿಮಾಗಳೊಂದಿಗೆ ಹ್ಯಾಟ್ರಿಕ್ ಹಿಟ್ ಪಡೆದರು.
ಪ್ರಸ್ತುತ ಕೃತಿ ಶೆಟ್ಟಿ ರಾಮ್ ಜೊತೆ ದಿ ವಾರಿಯರ್ ಸಿನಿಮಾದಲ್ಲಿ ನಟಿಸುತ್ತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಸಿನಮಾ ಪ್ರೇಕ್ಷಕರ ಮುಂದೆ ಬರಲಿದೆ.
ಇದಲ್ಲದೇ ಸುಧಿರ್ ಬಾಬು ಜೊತೆ ಆ ಅಮ್ಮಾಯಿ ಗುರಿಂಚಿ ಮಿಕು ಚೆಪ್ಪಾಲಿ, ನಿತೀನ್ ಜೊತೆ ಮಾಚರ್ಲ ನಿಯಾಜಕವರ್ಗಂ ಸಿನಿಮಾಗಳಲ್ಲಿಯೂ ಕೃತಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದು ಹೀಗಿದ್ದರೇ ತಮಿಳು ನಾಡಿನಲ್ಲಿ ನಡೆದ ಒಂದು ಸಂದರ್ಶನದಲ್ಲಿ ಕೃತಿಶೆಟ್ಟಿ ಕಣ್ಣೀರು ಹಾಕಿದ್ದಾರೆ. ಆಂಕರ್ ಗಳ ವರ್ತನೆ ನೋಡಿ ಇಂಟರ್ ವೀವ್ಯೂ ನಲ್ಲಿಯೇ ಬೇಬಮ್ಮ ಕಣ್ಣೀರಾಕಿದ್ದಾರೆ.
ಸಂದರ್ಶನದ ವೇಳೆ ಇಬ್ಬರು ಆ್ಯಂಕರ್ಗಳು ಕೃತಿಶೆಟ್ಟಿಗೆ ಪ್ರಶ್ನೆಗಳನ್ನು ಕೇಳಲು ಪೈಪೋಟಿಗೆ ಬಿದ್ದಿದ್ದಾರೆ.
ಅಲ್ಲದೇ ಒಬ್ಬರ ಮೇಲೆ ಒಬ್ಬರು ಗಲಾಟೆ ಮಾಡಿಕೊಂಡು ಕೃತಿ ಶೆಟ್ಟಿ ಎದುರೇ ಕಿತ್ತಾಡಿಕೊಂಡಿದ್ದಾರೆ.
ಜೊತೆ ಒಬ್ಬ ಆಂಕರ್ ಮತ್ತೊಬ್ಬ ಆಂಕರ್ ಅವರನ್ನ ಹೊಡೆದಿದ್ದಾರೆ. ಇದರಿಂದ ಅಲ್ಲಿ ಏನು ನಡೀತಿದ್ಯೋ ತಿಳಿಯದೇ ಕೃತಿ ಭಯದಿಂದ ಕಣ್ಣೀರಾಗಿದ್ದಾರೆ.