ಕೃಷಿ ಕಾಯ್ದೆಗಳ ಜಾರಿ ನಿಲ್ಲಿಸಿ : ಕೇಂದ್ರಕ್ಕೆ ಸುಪ್ರೀಂ ಚಾಟಿ
ನವದೆಹಲಿ : ಕೃಷಿ ಕಾಯ್ದೆಗಳ ಜಾರಿ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಸುಪ್ರಿಂ ಕೋರ್ಟ್ ಚಾಟಿ ಬೀಸಿದೆ. ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಜೊತೆ ಕೇಂದ್ರ ಸರ್ಕಾರ ನಡೆಸುತ್ತಿರುವ ಮಾತುಕತೆ ಪ್ರಕ್ರಿಯೆ ತೀವ್ರ ನಿರಾಸೆ ತಂದಿದೆ.
ಈ ಕಾನೂನುಗಳ ಅನುಷ್ಠಾನವನ್ನು ಸರ್ಕಾರ ನಿಲ್ಲಿಸದೇ ಇದ್ದರೇ ನಾವೇ ಅದನ್ನ ತಡೆಹಿಡಿಯುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿ ಬೋಬಡೆ ಹೇಳಿದ್ದಾರೆ.
ಅಲ್ಲದೇ ಇದೇ ವೇಳೆ ನೀವು ಪ್ರತಿಭಟನೆ ಮುಂದುವರಿಸಬಹುದು, ಆದರೆ ಅದೇ ಸ್ಥಳದಲ್ಲಿ ಪ್ರತಿಭಟಿಸಬೇಕೆ ಎಂಬ ಪ್ರಶ್ನೆ ಇದೆ ಎಂದು ಪ್ರತಿಭಟನಕಾರರನ್ನು ಪ್ರಶ್ನಿಸಿದ್ದಾರೆ ಎಂದು ವರದಿಯಾಗಿದೆ.
ಬುದ್ಧಿ ಕಲಿಯದ `ಚೀಟರ್ ಸ್ಮಿತ್’ : ವಿಕೆಟ್ ಬಳಿ ಸ್ಮಿತ್ ಮಾಡಿದ್ದೇನು ಗೊತ್ತಾ?
ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳನ್ನು ಪ್ರಶ್ನಿಸಿ ಮತ್ತು ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಆಂದೋಲನಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್, ಈ ಕಾನೂನನ್ನ ಜಾರಿಗೆ ತರುವುದನ್ನು ಕೇಂದ್ರ ಸರ್ಕಾರ ನಿಲ್ಲಿಸಬೇಕೆಂದು ತಿಳಿಸಿದೆ.
ಕಾಯ್ದೆಗಳ ಜಾರಿ ಮಾಡುವುದನ್ನು ನೀವು ನಿಲ್ಲಿಸುತ್ತೀರೋ ಅಥವಾ ನಾವೇ ಮಧ್ಯ ಪ್ರವೇಶ ಮಾಡಿ ಕ್ರಮ ತೆಗೆದುಕೊಳ್ಳಬೇಕೋ ಎಂದು ಕೇಂದ್ರಕ್ಕೆ ಕೋರ್ಟ್ ಚಾಟಿ ಬೀಸಿದೆ.
ಸರ್ಕಾರ ಪ್ರತಿಭಟನಾ ನಿರತರೊಂದಿಗೆ ನಡೆಸುತ್ತಿರುವ ಮಾತುಕತೆ ಪ್ರಕ್ರಿಯೆ ತೀವ್ರ ನಿರಾಸೆ ತಂದಿದೆ ಎಂದು ಕೇಂದ್ರದ ವಿರುದ್ಧ ಅಸಮಾಧಾನ ಹೊರಹಾಕಿರುವ ಸುಪ್ರೀಂ, ನಿಮ್ಮ ಮಾತುಕತೆಗಳ ಬಗ್ಗೆ ದಾರಿತಪ್ಪಿಸುವ ಅವಲೋಕನಗಳನ್ನು ಮಾಡಲು ನಾವು ಬಯಸುವುದಿಲ್ಲ.
ಆದರೆ, ಈ ಪ್ರಕ್ರಿಯೆ ಬಗ್ಗೆ ನಾವು ತೀವ್ರ ನಿರಾಶೆಗೊಂಡಿದ್ದೇವೆ. ಈ ಕೃಷಿ ಕಾನೂನುಗಳು ಪ್ರಯೋಜನಕಾರಿ ಎಂದು ಹೇಳುವ ಒಂದೇ ಒಂದು ಅರ್ಜಿಯೂ ನಮ್ಮ ಮುಂದೆ ಇಲ್ಲ’ ಅಂತ ಸುಪ್ರೀಂ ಕೋರ್ಟ್ ತಿಳಿಸಿರುವುದಾಗಿ ವರದಿಯಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









