Tollywood : ಬಾಲಯ್ಯ ಜೊತೆಗೆ ನಟಿಸುವುದಕ್ಕೆ ನೋ ಎಂದಿದ್ಯಾಕೆ ಕೃತಿ ಶೆಟ್ಟಿ
ತೆಲುಗಿನ ಸ್ಟಾರ್ ನಟ ಬಾಲಯ್ಯ ಅವರಿಗೆ ಅವರದ್ದೇ ಆದ ವಿಭಿನ್ನ ಅಭಿಮಾನಿಗಳ ವರ್ಗವಿದೆ.. ಅವರ ಒಂದು ಡಿಫರೆಂಟ್ ಕ್ರೇಜ್ ಇದೆ.. ಅದ್ರಲ್ಲೂ ಇತ್ತೀಚೆಗೆ ಅವರ ಅಖಂಡ ಸಿನಿಮಾ ಭರ್ಜರಿಯಾಗಿಯೇ ಬಾಕ್ಸ್ ಆಫೀಸ್ ನಲ್ಲಿ ಸೌಂಡ್ ಮಾಡಿದೆ.
ಇದೀಗ ಅಖಂಡ ಸಿನಿಮಾದ ನಂತರ ಮತ್ತೊಂದು ಬಿಗ್ ಬಜೆಟ್ ಸಿನಿಮಾದಲ್ಲಿ ನಂದಮೂರಿ ಬಾಲಕೃಷ್ಣ ನಟಿಸುತ್ತಿದ್ದಾರೆ. ಇದೇ ಸಿನಿಮಾಗೆ ಉಪ್ಪೇನಾ ಸುಂದರಿ , ನಮ್ಮ ಕರ್ನಾಟಕದ ಹುಡುಗಿ ಕೃತಿ ಶೆಟ್ಟಿಯನ್ನ ಅಪ್ರೋಚ್ ಮಾಡಲಾಗಿತ್ತಂತೆ.. ಆದ್ರೆ ಈಗಿನ್ನೂ ಸುಮಾರು 18 ವರ್ಷ ವಯಸ್ಸಿನ ಕೃತಿ ಬಾಲಯ್ಯ ಅವರ ಜೊತೆಗೆ ನಟಿಸಲು ಸಾಧ್ಯವಿಲ್ಲ ಎಂದಿದ್ದಾರೆ ಎನ್ನಲಾಗಿದೆ.
ಅಲ್ಲದೇ ನಂದಮೂರಿ ಅವರಿಗೆ ವಯಸ್ಸಾಗಿದೆ. ನನಗಿನ್ನೂ ಹದಿನೆಂಟು ವರ್ಷವಷ್ಟೇ. ವಯಸ್ಸಿನ ಭಾರೀ ಅಂತರ ಇರುವ ನಟರ ಜತೆ ಈಗಲೇ ಕೆಲಸ ಮಾಡಿದರೆ, ನನ್ನ ಕೆರಿಯರ್ ಗೆ ತೊಂದರೆ ಆಗುತ್ತದೆ. ಹಾಗಾಗಿ ನಾನು ಬಾಲಯ್ಯ ಅವರ ಚಿತ್ರದಲ್ಲಿ ನಟಿಸಲ್ಲ ಎಂದಿದ್ದಾರೆ ಎಂಬ ಸುದ್ದಿ ಸದ್ಯ ಟಾಲಿವುಡ್ ಅಂಗಳದಲ್ಲಿ ಭಾರೀ ಸೌಂಡ್ ಮಾಡ್ತಿದೆ.
ಇನ್ನೂ ಮೂಲಗಳ ಪ್ರಕಾರ ಕೃತಿ ಶೆಟ್ಟಿ ನಿರಾಕರಿಸಿದ ನಂತರ ಅವರ ಜಾಗಕ್ಕೆ ಸೌತ್ ನ ಮತ್ತೊಬ್ಬ ಸ್ಟಾರ್ ನಟಟಿ ಶ್ರುತಿ ಹಾಸನ್ ರನ್ನ ಕರೆತರಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಅಂದ್ಹಾಗೆ ಈ ಸಿನಿಮಾದಲ್ಲಿ ನಮ್ಮ ಕನ್ನಡದ ಕರಿಚಿರತೆ ನಟ ದುನಿಯಾ ವಿಜಯ್ ಅವರು ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ದುನಿಯಾ ವಿಜಯ್ ಅವರ ಮೊದಲ ತೆಲುಗು ಸಿನಿಮಾವೂ ಆಗಿದೆ.