ಪಿಎಫ್ ಐ ಸಂಘಟನೆಗೆ ಸಿದ್ದರಾಮಯ್ಯ ಪರೋಕ್ಷ ಬೆಂಬಲ : ಈಶ್ವರಪ್ಪ ಆರೋಪ
ಕಲಬುರಗಿ : ಪಿಎಫ್ ಐ ಒಂದು ದೇಶದ್ರೋಹಿ ಸಂಘಟನೆ. ಪಿಎಫ್ ಐ ಸಂಘಟನೆ ಬ್ಯಾನ್ ಬಗ್ಗೆ ಸಂಪುಟದಲ್ಲಿ ಚರ್ಚಿಸಲಾಗಿದೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.
ರಾಜ್ಯ ಸರ್ಕಾರದ ಬಜೆಟ್ ಬಗ್ಗೆ ಯಾವುದೇ ನಿರೀಕ್ಷೆ ಇಲ್ಲ, ಅವರ ಬಳಿ ಹಣವೇ ಇಲ್ಲ : ಸಿದ್ದರಾಮಯ್ಯ
ಕಲಬುರಗಿಯಲ್ಲಿ ಮಾತನಾಡಿರುವ ಅವರು ಪಾಕಿಸ್ತಾನ ಜಿಂದಾಬಾದ್ ಎನ್ನುವ ಪಿಎಫ್ ಐ ಸಂಘಟನೆಯವರು ದೇಶದ್ರೋಹಿಗಳು. ಅಂತವರಿಗೆ ನಮ್ಮ ಸಿದ್ದರಾಮಯ್ಯನವರು ಪರೋಕ್ಷವಾಗಿ ಬೆಂಬಲ ಕೊಡ್ತಿದಾರೆ. ಪಾಕ್ ಜಿಂದಾಬಾದ್ ಘೋಷಣೆ ಬಗ್ಗೆ ಕಾಂಗ್ರೆಸ್ ಚಕಾರ ಎತ್ತಲಿಲ್ಲ. ಕಾಂಗ್ರೆಸ್ ನಿರ್ಣಾಮಕ್ಕೆ ಸಿದ್ದರಾಮಯ್ಯ ಒಬ್ಬರು ಸಾಕು ಎಂದು ಕಿಡಿಕಾರಿದ್ದಾರೆ. ಇದೇ ವೇಳೆ ನಾನೆ ಮುಂದಿನ ಸಿಎಂ ಅಂತ ಸಿದ್ದರಾಮಯ್ಯ ಹೇಳ್ಕೊತಿದಾರೆ. ಹಾಗಾದ್ರೆ ಮಲ್ಲಿಕಾರ್ಜುನ ಖರ್ಗೆ ಸೇರಿ ಕಾಂಗ್ರೆಸ್ ನಾಯಕರು ಮೌನವಾಗಿರೋದೆಕೆ ಎಂದು ಪ್ರಶ್ನಿಸಿದ್ದಾರೆ.