ನೈಟ್ ಕರ್ಫ್ಯೂ ಮರುಜಾರಿಗೊಳಿಸುವ ಯಾವುದೇ ಚಿಂತನೆ ಇಲ್ಲ : ಕೆ. ಸುಧಾಕರ್
ಬೆಂಗಳೂರು : ರಾಜ್ಯದಲ್ಲಿ ಲಾಕ್ ಡೌನ್ ಅಥವಾ ನೈಟ್ ಕರ್ಫ್ಯೂ ಮರುಜಾರಿಗೊಳಿಸುವ ಯಾವುದೇ ಚಿಂತನೆ ಇಲ್ಲ. ಅಂತಹಾ ಪರಿಸ್ಥಿತಿ ತಂದುಕೊಳ್ಳುವುದು ಬೇಡ. ಜನರು ದಯಮಾಡಿ ಜಾಗ್ರತೆವಹಿಸಿ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ಜನರಲ್ಲಿ ಮನೆವಿ ಮಾಡಿಕೊಂಡಿದ್ದಾರೆ. ಇದೇ ವಿಚಾರವಾಗಿ ಮುಂದಿನ ವಾರ ಸಿಎಂ ಜೊತೆ ಸಭೆ ನಡೆಸ್ತೇವೆ. ರಾಜ್ಯದ ಎಲ್ಲ ಅಧಿಕಾರಿಗಳ ಜೊತೆ ವಿಡಿಯೋಕಾನ್ಫರೆನ್ಸ್ ಮಾಡ್ತಾರೆ ಎಂದು ಸುಧಾಕರ್ ತಿಳಿಸಿದ್ದಾರೆ.
ಇದೇ ವೇಳೆ ಪಂಚಮಸಾಲಿ ಸಮುದಾಯಕ್ಕೆ ಹೆಚ್ಚು ಜನಸೇರುವ ಹಿನ್ನೆಲೆ , ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟು ಅನುಷ್ಠಾನಕ್ಕೆ ಆರೋಗ್ಯ ಇಲಾಖೆಯಿಯೊಂದರಿಂದಲೇ ಕಷ್ಟ. ಹಾಗಾಗಿ ಕಂದಾಯ,ಗೃಹ ಇಲಾಖೆ ಸಹಕಾರ ಬೇಕು. ಹೊರಗಿನಿಂದ ಬರುವವರ ಟೆಸ್ಟ್ ಕಡ್ಡಾಯ ಮಾಡ್ತೇವೆ ಎಂದಿದ್ದಾರೆ.