ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ RCB ವಿಜಯೋತ್ಸವದ ಬಳಿಕ ಸಂಭವಿಸಿದ ಕಾಲ್ತುಳಿತ ದುರಂತ ಈಗ ರಾಜ್ಯ ಸರ್ಕಾರದ ಮೇಲಿದೆ. ಈ ಹಿನ್ನೆಲೆಯಲ್ಲಿ ಇದೀಗ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ನೇರವಾಗಿ ರಾಜ್ಯ ಸರ್ಕಾರದ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಇದರಿಂದ ಸರ್ಕಾರಕ್ಕೆ ಬಿಗ್ ಶಾಕ್ ನೀಡಿದೆ.
KSCA ಪರವಾಗಿ ಹೈಕೋರ್ಟ್‌ಗೆ ಸಲ್ಲಿಸಲಾದ ರಿಟ್ ಅರ್ಜಿಯಲ್ಲಿ ಮಹತ್ವದ ಆರೋಪಗಳು ಕೇಳಿಬಂದಿವೆ. KSCA ವಿವರಣೆಯಂತೆ, RCB ಗೆಲುವಿನ ಸಂಭ್ರಮಾಚರಣೆಯನ್ನು ವಿಧಾನಸೌಧದ ಎದುರು ನಡೆಸಲು ತಾವು ಸೂಚನೆ ನೀಡಿಲ್ಲ, ಇಂತಹ ಸಂಭ್ರಮಾಚರಣೆಗಾಗಿ ಸರ್ಕಾರವೇ ತಮ್ಮ ಮೇಲೆ ಒತ್ತಾಯಿಸಿದೆ ಎಂಬುದನ್ನು ರಿಟ್ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಸಚಿವರಿಂದಲೇ ವೇದಿಕೆ ಆಯ್ಕೆ?
ಅರ್ಜಿಯಲ್ಲಿನ ಮತ್ತೊಂದು ಆರೋಪವೆಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಕೆಲವು ಸಚಿವರು ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್‌ನ್ನು ವೇದಿಕೆಯಾಗಿಸಿ RCB ಆಟಗಾರರಿಗೆ ಸನ್ಮಾನ ಮಾಡಿದ್ದಾರೆ ಎಂಬುದು. ಈ ವೇದಿಕೆ ತಯಾರಾತಿಯ ಹಿಂದೆ KSCA ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
FIR ರಾಜಕೀಯ ಉದ್ದೇಶದಿಂದಲೇ?
KSCA ಅರ್ಜಿಯಲ್ಲಿ, ಜನರ ಆಕ್ರೋಶವನ್ನು ತಪ್ಪಿಸಲು ತಾವೇ ತಪ್ಪುಮಾಡಿಲ್ಲ ಎಂದು ತಪ್ಪಿಸಿಕೊಳ್ಳಲು ಸರ್ಕಾರವೇ ಇತರರ ಮೇಲೂ ಎಫ್‌ಐಆರ್ ದಾಖಲಿಸಿದೆ ಎಂಬ ಗಂಭೀರ ಆರೋಪವೂ ಇದೆ. ಸರ್ಕಾರದ ನಡೆ ‘ತಮ್ಮ ತಪ್ಪುಗಳ ಹೊರೆ ಬೇರೆಯವರ ಮೇಲೆ ಹಾಕುವ’ ಪ್ರಯತ್ನ ಎಂಬುದು KSCA ನ ನಿಲುವು.
ಹೈಕೋರ್ಟ್ ಮೊರೆ – ಮುಂದೇನು?
KSCA ದೂರು ಹೈಕೋರ್ಟ್ ಗಮನ ಸೆಳೆದಿದ್ದು, ನ್ಯಾಯಾಲಯ ಈ ಕುರಿತು ಮುಂದಿನ ದಿನಗಳಲ್ಲಿ ವಿಚಾರಣೆ ನಡೆಸಲಿದೆ. ಸರ್ಕಾರದ ನಿರ್ಧಾರಗಳ ಪಾರದರ್ಶಕತೆ, ಕರ್ತವ್ಯದ ನಿರ್ವಹಣೆಯ ಪ್ರಾಮಾಣಿಕತೆ ಮತ್ತು ಸಾರ್ವಜನಿಕ ಭದ್ರತೆಯ ಕುರಿತಾದ ಪ್ರಶ್ನೆಗಳು ಈಗ ನ್ಯಾಯಾಲಯದ ಮೆಟ್ಟಿಲಿನಲ್ಲಿ ನಿಂತಿವೆ.








