ತಿಮ್ಮಪ್ಪನ ಭಕ್ತರಿಗೆ ಕೆಎಸ್ ಆರ್ ಟಿಸಿ ಗುಡ್ ನ್ಯೂಸ್ KSRTC
ಬೆಂಗಳೂರು : ತಿಮ್ಮಪ್ಪನ ಭಕ್ತರಿಗೆ ಕೆಎಸ್ ಆರ್ ಟಿಸಿ ಗುಡ್ ನ್ಯೂಸ್ ನೀಡಿದೆ.
ಕೊರೊನಾ ಹಿನ್ನೆಲೆ ಎರಡು ತಿಂಗಳಿಂದ ಸ್ಥಗಿತಗೊಂಡಿದ ತಿರುಪತಿ ಪ್ಯಾಕೇಜ್ ಟೂರ್ ಅನ್ನು ಕೆಎಸ್ ಆರ್ ಟಿಸಿ ಪುನರ್ ಆರಂಭಿಸಿದೆ.
ದಿನಾಂಕ ಜುಲೈ 16ರಿಂದ ಪ್ಯಾಕೇಜ್ ಟೂರ್ ಆರಂಭವಾಗಲಿದೆ. ಐರಾವತ ಕ್ಲಬ್ ಹೌಸ್ ಬಸ್ ನಲ್ಲಿ ಪ್ರಯಾಣ ಹಾಗೂ ತಿಮ್ಮಪ್ಪನ ದರ್ಶನವನ್ನು ಒಳಗೊಂಡಿದೆ.
ವಾರದ ದಿನಗಳಲ್ಲಿ 2200 ರೂಪಾಯಿ ಹಾಗೂ ವಾರಾಂತ್ಯದ ದಿನಗಳಲ್ಲಿ 2600 ರೂಪಾಯಿ ಪ್ರಯಾಣ ದರ ನಿಗದಿ ಮಾಡಲಾಗಿದೆ.
6 ರಿಂದ 12 ವರ್ಷದ ಮಕ್ಕಳಿಗೆ – ವಾರದದಿನಗಳಲ್ಲಿ ರೂ.1,800 ಮತ್ತು ಜಿಎಸ್ಟಿ, ವಾರಾಂತ್ಯ ದಿನಗಳಲ್ಲಿ ರೂ.2,000 ಮತ್ತು ಜಿಎಸ್ಟಿ ದರ ನಿಗದಿ ಪಡಿಸಲಾಗಿದೆ
ಕೆಎಸ್ ಆರ್ ಟಿಸಿ ವೆಬ್ ಸೆಟ್ ಮೂಲಕ ಸೀಟ್ ಬುಕಿಂಗ್ ಗೆ ಅವಕಾಶ ಮಾಡಿಕೊಡಲಾಗಿದೆ.