ಕೆ ಎಸ್ ಆರ್ ಟಿ ಸಿ ಸಿಬ್ಬಂದಿಗಳಿಗೆ ಯಾವುದೇ ಕಾರಣಕ್ಕೂ ಸಂಬಳ ನೀಡುವದನ್ನ ನಿಲ್ಲಿಸುವುದಿಲ್ಲ. 2652 ಕೋಟಿ ನಷ್ಟವನ್ನ ಕೆ ಎಸ್ ಆರ್ ಟಿ ಸಿ ನಷ್ಟ ಅನುಭವಿಸುತ್ತಿದೆ. ಆದರೂ ಸಂಸ್ಥೆಯ 1 ಲಕ್ಷ 30 ಸಾವಿರ ಸಿಬ್ಬಂದಿಗಳಿಗೆ ವೇತನ ನೀಡಲಾಗುವುದು ಎಂದು ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ಪ್ರವಾಸಿ ಮಂದಿರ ಹಾಗೂ ಅಂಬೇಡ್ಕರ ಭವನ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಸಚಿವರು ಪ್ರತಿ ತಿಂಗಳು 126 ಕೋಟಿ ವೇತನ ನೀಡಬೇಕಾಗುತ್ತದೆ. ಮುಖ್ಯಮಂತ್ರಿಗಳು 326 ಕೋಟಿ ನೀಡಿದ್ದು, ಸಿಬ್ಬಂದಿಗಳ 2 ತಿಂಗಳ ವೇತನ ನೀಡಲಾಗಿದೆ. ಸಿಬ್ಬಂದಿಗಳಿಗೆ ವೇತನ ರಹಿತ ರಜೆಯನ್ನ ಪಡೆಯುವಂತೆ ಒತ್ತಾಯ ಹಾಕುತ್ತಿಲ್ಲ ಯಾವುದೇ ಸಂದರ್ಭದಲ್ಲೂ ಸಿಬ್ಬಂದಿಯ ವೇತನವನ್ನ ಸರ್ಕಾರ ನೀಡೆ ನೀಡುತ್ತೆ ಎಂದು ಭರವಸೆ ನೀಡಿದ್ದಾರೆ.








