ರಾಜ್ಯದ ಜನತೆಗೆ ಸಿಹಿ ಸುದ್ದಿ ಕೊಟ್ಟ ಕೆಎಸ್ ಆರ್ ಟಿಸಿ
ಬೆಂಗಳೂರು : ರಾಜ್ಯದ ಜನತೆಗೆ ಕೆಎಸ್ ಆರ್ ಟಿಸಿ ಸಿಹಿ ಸುದ್ದಿ ನೀಡಿದೆ.
ಅದೇನೆಂದರೇ ಈ ಹಿಂದೆ ರಾಜ್ಯ ಸಾರಿಗೆ ನಿಗಮದ ಪ್ರತಿಷ್ಠಿತ ಸಾರಿಗೆಗಳಲ್ಲಿ ವಾರಾಂತ್ಯದ ದಿನಗಳಲ್ಲಿ ಶೇ 10 ರಷ್ಟು ಹೆಚ್ಚುವರಿ ಪ್ರಯಾಣದರ ಕೊಟ್ಟು ಪ್ರಯಾಣಿಸಬೇಕಿತ್ತು. ಇದೀಗ ಈ ನಿಯಮವನ್ನು ಕೆಎಸ್ ಆರ್ ಟಿಸಿ ಕಡಿತಗೊಳಿಸಿದೆ.
ಕೊರೊನಾ ಸೋಂಕಿತರೇ ಸ್ವಲ್ಪ ದಿನ ಜಾಗ್ರತೆ..!
ಈ ಕುರಿತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಅದರಲ್ಲಿ ” ಕರಾರಸಾ ನಿಗಮದ ಪ್ರತಿಷ್ಟಿತ ಸಾರಿಗೆಗಳಾದ ರಾಜಹಂಸ, ಐರಾವತ, ಐರಾವತ ಕ್ಲಬ್ ಕ್ಲಾಸ್, ಅಂಬಾರಿ ಡ್ರೀಮ್ ಕ್ಲಾಸ್, ಎಸಿ ಸ್ಲೀಪರ್, ನಾನ್ ಎಸಿ ಸ್ಲೀಪರ್ ಸಾರಿಗೆಗಳಲ್ಲಿ ವಾರಾಂತ್ಯ ದಿನಗಳಾದ ಶುಕ್ರವಾರ ಹಾಗೂ ಭಾನುವಾರಗಳಂದು ಅಕರಿಸುತ್ತಿದ್ದ ಶೇ 10 ರಷ್ಟು ಹೆಚ್ಚುವರಿ ಪ್ರಯಾಣ ದರವನ್ನು ದಿನಾಂಕ 15.01.2021ರಿಂದ 31.03.2021 ಅವಧಿಗೆ ಹಿಂಪಡೆದು, ವಾರದ ಎಲ್ಲಾ ದಿನಗಳಂದು ಏಕರೂಪದ ಪ್ರಯಾಣದರ ನಿಗದಿಪಡಿಸಲಾಗಿದೆ ಎಂದು ತಿಳಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









