ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ 2021ನೇ ಸಾಲಿನ ರಜೆಗಳ ಪಟ್ಟಿ ಬಿಡುಗಡೆ KSRTC holidays 2021
ಬೆಂಗಳೂರು, ಡಿಸೆಂಬರ್21: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ 2021ನೇ ಸಾಲಿನ ರಾಷ್ಟ್ರೀಯ ಮತ್ತು ಹಬ್ಬದ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕೆಎಸ್‌ಆರ್‌ಟಿಸಿ ನೌಕರರಿಗಾಗಿ ಈ ಬಾರಿ 5 ರಾಷ್ಟ್ರೀಯ ಹಬ್ಬಗಳ ರಜೆ ಹಾಗೂ 23 ಹಬ್ಬದ ರಜಾ ದಿನಗಳು ಸಿಗಲಿದೆ. KSRTC holidays 2021

ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು 2021ನೇ ಸಾಲಿನ ರಾಷ್ಟ್ರೀಯ ಮತ್ತು ಹಬ್ಬದ ರಜೆಗಳ ಆಯ್ಕೆ ಮತ್ತು ಮಂಜೂರಾತಿ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಮೋಟಾರು ವಾಹನ ಸಾರಿಗೆ ನೌಕರರ ಕಾಯ್ದೆ ಹಾಗೂ ಕಾರ್ಖಾನೆಗಳ ಕಾಯಿದೆಯಡಿಯಲ್ಲಿ ಬರುವ ಎಲ್ಲಾ ನೌಕರರಿಗೆ (ವಿಭಾಗೀಯ ಕಛೇರಿ ಹೊರತು ಪಡಿಸಿ) 2021ನೇ ಸಾಲಿನಲ್ಲಿ 5 ರಾಷ್ಟ್ರೀಯ ಹಬ್ಬದ ರಜೆಗಳ ಜೊತೆಗೆ ಈ ಕೆಳಕಂಡ ಪಟ್ಟಿಯಲ್ಲಿ ತಿಳಿಸಲಾದ 23 ಹಬ್ಬದ ರಜೆಗಳ ಪೈಕಿ, 5 ಹಬ್ಬದ ರಜೆಗಳನ್ನು ಮಾತ್ರ ಪಡೆಯಲು ಅವಕಾಶವಿರುತ್ತದೆ ಎಂಬುದಾಗಿ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
5 ರಾಷ್ಟ್ರೀಯ ಹಬ್ಬದ ರಜಾ ದಿನಗಳ ಪಟ್ಟಿ
ದಿನಾಂಕ 26-01-2021ರ ಮಂಗಳವಾರ ಗಣರಾಜ್ಯೋತ್ಸವ
ದಿನಾಂಕ 01-05-2021ರ ಶನಿವಾರ ಕಾರ್ಮಿಕರ ದಿನಾಚರಣೆ
ದಿನಾಂಕ 15-08-2021 ಭಾನುವಾರ, ಸ್ವಾತಂತ್ರ್ಯ ದಿನಾಚರಣೆ
ದಿನಾಂಕ 02-10-2021 ಶನಿವಾರ, ಗಾಂಧಿ ಜಯಂತಿ
ದಿನಾಂಕ 01-11-2021 ಸೋಮವಾರ, ಕನ್ನಡ ರಾಜ್ಯೋತ್ಸವ
ನನಸಾಗುತ್ತಿದೆ ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯ ಕನಸಿನ ಬುಲೆಟ್ ರೈಲು
23 ಹಬ್ಬದ ರಜಾ ದಿನಗಳ ಪಟ್ಟಿ
ದಿನಾಂಕ 01-01-2021 ಶುಕ್ರವಾರ, ನೂತನ ವರ್ಷಾರಂಭ
ದಿನಾಂಕ 14-01-2021 ಗುರುವಾರ, ಉತ್ತರಾಯಣ ಪುಣ್ಯ ಕಾಲ ( ಮಕರ ಸಂಕ್ರಾಂತಿ)
ದಿನಾಂಕ 11-03-2021 ಗುರುವಾರ, ಮಹಾ ಶಿವರಾತ್ರಿ
ದಿನಾಂಕ 29-03-2021 ಸೋಮವಾರ, ಹೋಳಿ ಹಬ್ಬ
ದಿನಾಂಕ 02-04-2021 ಶುಕ್ರವಾರ, ಗುಡ್ ಫ್ರೈಡೆ
ದಿನಾಂಕ 13-04-2021 ಮಂಗಳವಾರ, ಚಂದ್ರಮಾನ ಯುಗಾದಿ
ದಿನಾಂಕ 14-04-2021 ಬುಧವಾರ, ಡಾ.ಅಂಬೇಡ್ಕರ್ ಜಯಂತಿ
ದಿನಾಂಕ 10-05-2021 ಸೋಮವಾರ, ಷಬ್ ಎ ಖಾದರ್
ದಿನಾಂಕ 14-05-2021 ಶುಕ್ರವಾರ, ಖುತುಬ್ ಎ ರಂಜಾನ್
ದಿನಾಂಕ 13-06-2021 ಭಾನುವಾರ, ಡೊರನಹಳ್ಳಿ ಆಂಥೋನಿ ಹಬ್ಬ
ದಿನಾಂಕ 21-07-21 ಬುಧವಾರ, ಬಕ್ರೀದ್

ದಿನಾಂಕ 20-08-2021 ಶುಕ್ರವಾರ, ಮೋಹರಂ ಕಡೇ ದಿನ
ದಿನಾಂಕ 10-09-2021 ಶುಕ್ರವಾರ, ಗಣೇಶ ಚತುರ್ಥಿ
ದಿನಾಂಕ 06-10-2021 ಬುಧವಾರ, ಮಹಾಲಯ ಅಮವಾಸ್ಯೆ
ದಿನಾಂಕ 14-10-2021 ಗುರುವಾರ, ಮಹಾನವಮಿ, ಆಯುಧ ಪೂಜೆ
ದಿನಾಂಕ 15-10-2021 ಶುಕ್ರವಾರ, ವಿಜಯ ದಶಮಿ
ದಿನಾಂಕ 19-10-2021 ಮಂಗಳವಾರ, ಈದ್ ಮಿಲಾದ್
ದಿನಾಂಕ 02-11-2021 ಮಂಗಳವಾರ, ಆಲ್ ಸೋಲ್ಸ್ ಡೇ
ದಿನಾಂಕ 03-11-2021 ಬುಧವಾರ, ನರಕ ಚತುರ್ದಶಿ
ದಿನಾಂಕ 05-11-2021 ಶುಕ್ರವಾರ, ಬಲಿ ಪಾಡ್ಯಮಿ, ದೀಪಾವಳಿ
ದಿನಾಂಕ 17-11-2021 ಬುಧವಾರ, ಗ್ಯಾರ್ ವಿನ್ ಮೆಹಬೂಬ್ ಸುಬಾನಿ
ದಿನಾಂಕ 22-11-2021 ಸೋಮವಾರ, ಕನಕದಾಸ ಜಯಂತಿ
ದಿನಾಂಕ 25-12-2021 ಶನಿವಾರ, ಕ್ರಿಸ್ ಮಸ್
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1340341086712078338?s=19
https://twitter.com/SaakshaTv/status/1340341423099371520?s=19








