K T Srikanthegowda | ಕೆ.ಎನ್.ರಾಜಣ್ಣ ಒಬ್ಬ ಅನಾಗರಿಕ
ಮಂಡ್ಯ: ಕೆ.ಎನ್.ರಾಜಣ್ಣ ಒಬ್ಬ ಅನಾಗರೀಕ ಎಂದು ಮಾಜಿ ಎಂಎಲ್ ಸಿ ಕೆ.ಟಿ.ಶ್ರೀಕಂಠೇಗೌಡ ಕಿಡಿಕಾರಿದ್ದಾರೆ.
ಹೆಚ್ ಡಿ ದೇವೇಗೌಡರು ಈಗ ಇಬ್ಬರ ಹೆಗಲ ಮೇಲೆ ಕೈ ಹಾಕಿ ನಡೆಯುತ್ತಿದ್ದಾರೆ.
ಇನ್ನು ನಾಲ್ವರ ಮೇಲೆ ಹೋಗುವ ಸಮಯ ಹತ್ತಿರದಲ್ಲೇ ಇದೆ ಎಂದು ಕಾಂಗ್ರೆಸ್ ನಾಯಕ ಕೆ. ಎನ್. ರಾಜಣ್ಣ ಲೇವಡಿ ಮಾಡಿದ್ದರು.
ಈ ಹೇಳಿಕೆಯನ್ನು ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಮಳವಳ್ಳಿ-ಮದ್ದೂರು ಹೆದ್ದಾರಿ ತಡೆದು ಆಕ್ರೋಶ ಹೊರಹಾಕಿದ್ದಾರೆ.
ಈ ವೇಳೆ ಮಾತನಾಡಿದ ಕೆ.ಟಿ.ಶ್ರೀಕಂಠೇಗೌಡ, ದೇವೇಗೌಡರ ಬಗ್ಗೆ ಮಾತನಾಡಿರೋದನ್ನ ನಾನು ಉಗ್ರವಾಗಿ ಖಂಡಿಸುತ್ತೇನೆ.
ರಾಜಣ್ಣ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಶಾಸಕರಾಗೋಕೆ ದೇವೇಗೌಡರ ಆಶೀರ್ವಾದ ಬೇಕಿತ್ತು.
ದೇವೇಗೌಡ್ರು ಒಬ್ಬ ಅಪ್ರತಿಮೆ ಹೋರಾಟಗಾರ ಅಂತಹವರ ಬಗ್ಗೆ ಅಮಾನುಷವಾಗಿ ಮಾತನಾಡಿರುವುದು ಖಂಡನೀಯ ಎಂದು ಆಕ್ರೋಶ ಹೊರಹಾಕಿದರು.
ಇನ್ನು ಕೆ.ಎನ್.ರಾಜಣ್ಣ ಸಾರ್ವಜನಿಕ ಬದುಕಿನಲ್ಲಿ ಇರೋಕೆ ಲಾಯಕಿಲ್ಲ. ಸಹಕಾರ ಕ್ಷೇತ್ರದಲ್ಲಿ ಇವರ ದಂಧೆ, ಕಥೆ, ವ್ಯವಹಾರಗಳು ನಮಗೆ ಗೊತ್ತಿದೆ.
ಇಂತಹವರಿಂದ ದೇವೇಗೌಡರು ಪಾಠ ಕಲಿಬೇಕಾ ಎಂದು ಪ್ರಶ್ನಿಸಿದ ಶ್ರೀಕಂಠೇಗೌಡ, ಈಗಾಗಲೇ ಮಂಡ್ಯದಲ್ಲಿ ರಾಜಣ್ಣರ ವಿರುದ್ದ ಹೋರಾಟ ಶುರುವಾಗಿದೆ.
ನಾಳೆ ಮಂಡ್ಯ, ನಾಗಮಂಗಲ, ಮಳವಳ್ಳಿಯಲ್ಲಿ ಪ್ರತಿಭಟನೆ ಮಾಡಲಾಗುವುದು. ನಾಳಿದ್ದು ಮದ್ದೂರು, ಶ್ರೀರಂಗಪಟ್ಟಣದಲ್ಲಿ ರಾಜಣ್ಣ ವಿರುದ್ದ ಪ್ರತಿಭಟನೆ ನಡೆಯಲಿದೆ. ಕಾಂಗ್ರೆಸ್ ನಿಂದ ರಾಜಣ್ಣನನ್ನ ಉಚ್ಛಾಟನೆ ಮಾಡಿದ್ರೆ ಆ ಪಕ್ಷಕ್ಕು ಗೌರವ ಬರುತ್ತೆ ಎಂದು ಹೇಳಿದರು.