ಕುಲಭೂಷಣ್ ಜಾಧವ್ ಪ್ರಕರಣ ಹೈಕೋರ್ಟ್ (ಐಎಚ್ಸಿ) ನ ತ್ರಿಸದಸ್ಯ ಪೀಠಕ್ಕೆ ವರ್ಗಾವಣೆ
ಇಸ್ಲಾಮಾಬಾದ್: ಭಾರತದ ರಾಜತಾಂತ್ರಿಕ ಒತ್ತಡಕ್ಕೆ ಮಣಿದ ಪಾಕಿಸ್ತಾನ ಸರಕಾರವು ಮರಣ ದಂಡನೆಗೆ ಗುರಿಯಾಗಿರುವ ಕುಲಭೂಷಣ್ ಜಾಧವ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಒಪ್ಪಿಗೆ ಸೂಚಿಸಿತು. ಪ್ರಕರಣವನ್ನು ಕೈಗೆತ್ತಿ ಕೊಂಡ ಇಸ್ಲಾಮಾಬಾದ್ ಹೈಕೋರ್ಟ್ ಪೀಠ (ಐಎಚ್ಸಿ) ಇದೀಗ ತ್ರಿ ಸದಸ್ಯ ಪೀಠಕ್ಕೆ ವರ್ಗಾವಣೆ ಮಾಡಲು ನಿರ್ಧರಿಸಿದೆ.
ಕೆಲವು ಸಮಯಗಳ ಹಿಂದೆ ಪಾಕಿಸ್ತಾನ ಮಿಲಿಟರಿ ನ್ಯಾಯಾಲಯ ಯಾವುದೇ ವಿಚಾರಣೆ ನಡೆಸದೆ ಮರಣದಂಡನೆ ವಿಧಿಸಿದರ ವಿರುದ್ಧ ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿತ್ತು. ಎರಡು ಕಡೆಯ ವಾದ ವಿವಾದವನ್ನು ಆಲಿಸಿದ ಅಂತಾರಾಷ್ಟ್ರೀಯ ನ್ಯಾಯಾಲಯ ಪಾಕಿಸ್ತಾನಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನಾತ್ಮಕ ಹೋರಾಟ ಮಾಡಲು ಅನುವು ಮಾಡಿಕೊಡಲು ಆದೇಶ ನೀಡಿತ್ತು.

ಐಎಚ್ಸಿ ಮುಖ್ಯ ನ್ಯಾಯಮೂರ್ತಿ ಅಥರ್ ಮಿನಲ್ಲಾ, ನ್ಯಾಯಮೂರ್ತಿಗಳಾದ ಅಮೀರ್ ಫಾ ಮತ್ತು ಮಿಯಾನ್ ಗುಲ್ ಗಳನ್ನೂ ಒಳಗೊಂಡ ತ್ರಿ ಸದಸ್ಯ ಪೀಠ ಸೆಪ್ಟೆಂಬರ್ 3 ರಂದು ವಿಚಾರಣೆ ನಡೆಸಲು ನ್ಯಾಯಪೀಠವನ್ನು ಶುಕ್ರವಾರ ರಚಿಸಲಾಗಿದೆ.
ಪಾಕಿಸ್ತಾನ ಮೀಡಿಯಾ ಭಾರತೀಯ ಅಧಿಕಾರಿಗಳಿಗೆ ಅವಕಾಶ ನೀಡಲಾಗಿದೆ ಎಂದು ಹೇಳಿದರು ಕೂಡ ಯಾವುದೇ ಮಾಹಿತಿ ಇಲ್ಲವೆಂದು ಭಾರತ ವಿದೇಶಾಂಗ ಸಚಿವಾಲಯ ತಿಳಿಸಿದೆ.








