Kuldeep Yadav : ಏಕದಿನ ವಿಶ್ವಕಪ್ ಗೆ Team India ಸಿಕ್ಕ ಹೊಸ ಅಸ್ತ್ರ
ಭಾರತ ಮತ್ತು ಶ್ರೀಲಂಕಾ ನಡುವೆ ಏಕದಿನ ಸರಣಿ ನಡೆಯುತ್ತಿದೆ. ಸರಣಿಯಲ್ಲಿ ಟೀಂ ಇಂಡಿಯಾ 2-0 ಮುನ್ನಡೆ ಸಾಧಿಸಿದೆ. ಭಾರತದ ಪರ ಎರಡನೇ ಪಂದ್ಯದಲ್ಲಿ ಕುಲದೀಪ್ ಯಾದವ್ ಅದ್ಭುತ ಬೌಲಿಂಗ್ ಮಾಡಿ ಗಮನ ಸೆಳೆದಿದ್ದಾರೆ. ಈ ಪಂದ್ಯದಲ್ಲಿ ಕುಲದೀಪ್ 3 ವಿಕೆಟ್ ಪಡೆದರು. ಚೈನಾಮನ್ ಬೌಲರ್ ಕುಲದೀಪ್ 2023 ರ ವಿಶ್ವಕಪ್ನಲ್ಲಿ ಅವರು ಭಾರತಕ್ಕೆ ದೊಡ್ಡ ಅಸ್ತ್ರವೆಂದು ಸಾಬೀತುಪಡಿಸಬಹುದು.
ಈ ಬಾರಿಯ ವಿಶ್ವಕಪ್ ಭಾರತದಲ್ಲಿ ಆಯೋಜನೆಯಾಗಲಿದೆ. ಇಲ್ಲಿನ ಪಿಚ್ ಗಳಲ್ಲಿ ಸ್ಪಿನ್ ಬೌಲರ್ ಗಳ ಪ್ರಾಬಲ್ಯ ಕಂಡು ಬಂದಿದೆ. ಹೀಗಾಗಿ ಈ ಬಾರಿ ಪ್ರತಿ ತಂಡಕ್ಕೂ ಸ್ಪಿನ್ ಬೌಲರ್ ಗಳು ಮುಖ್ಯವಾಗಲಿದ್ದಾರೆ. ಈ ಪರಿಸ್ಥಿತಿಯಲ್ಲಿ ಕುಲದೀಪ್ ಯಾದವ್ ಟೀಂ ಇಂಡಿಯಾಗೆ ಮಾರಕ ಅಸ್ತ್ರವಾಗಬಲ್ಲರು. ಕುಲದೀಪ್ ಇದುವರೆಗೆ 74 ಏಕದಿನ ಪಂದ್ಯಗಳಲ್ಲಿ 122 ವಿಕೆಟ್ ಪಡೆದಿದ್ದಾರೆ. ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಹೀರೋ ಕುಲದೀಪ್ಗೆ ಹೆಚ್ಚಿನ ಅವಕಾಶಗಳನ್ನು ನೀಡಬೇಕಾಗಿದೆ.
ಶ್ರೀಲಂಕಾ ವಿರುದ್ಧ ಕುಲದೀಪ್ ಆಕ್ರಮಣಕಾರಿ ಬೌಲಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಅವರು ಮಧ್ಯಮ ಓವರ್ಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡುತ್ತಿದ್ದಾರೆ. ವಿಶ್ವಕಪ್ ನಲ್ಲಿ ಭಾರತವು ಕುಲದೀಪ್ ಅವರನ್ನು ಉತ್ತಮ ಆಸ್ತಿಯಾಗಿ ಬಳಸಿಕೊಳ್ಳಬಹುದು.
ಕುಲದೀಪ್ ಯಾದವ್ ಟೀಂ ಇಂಡಿಯಾ ಪರ ಇದುವರೆಗೆ 74 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ 122 ವಿಕೆಟ್ ಪಡೆದಿದ್ದಾರೆ. 25 ರನ್ಗಳಿಗೆ 6 ವಿಕೆಟ್ ಕಬಳಿಸಿರುವುದು ಅವರ ಅತ್ಯುತ್ತಮ ಏಕದಿನ ಪ್ರದರ್ಶನವಾಗಿದೆ. 24 ಟಿ20 ಇನಿಂಗ್ಸ್ಗಳಲ್ಲಿ 44 ವಿಕೆಟ್ಗಳನ್ನು ಪಡೆದಿದ್ದಾರೆ. ಕುಲದೀಪ್ 8 ಟೆಸ್ಟ್ ಪಂದ್ಯಗಳಲ್ಲಿ 34 ವಿಕೆಟ್ ಪಡೆದಿದ್ದಾರೆ.
Kuldeep Yadav, ODI series, India, Sri Lanka








