ಇದು ಪಟಾಕಿಯಲ್ಲ…. ಗುಂಡಿನ ದಾಳಿ ಅಂತ ಗೊತ್ತಾದಾಗ…. ಹೋದ ಜೀವ ಮತ್ತೆ ಬಂದಿದ್ದೇಗೆ…?
ಅದು 2009. ಕಣ್ಣೇದುರಲ್ಲೇ ಸಾವು ಬಂತು ನಿಂತಿತ್ತು. ಇನ್ನೇನೂ ಸಾವು ಖಚಿತ. ಬದುಕಿ ಉಳಿಯುವುದು ಅಸಾಧ್ಯ. ಒಂದು ಕ್ಷಣ ನಮ್ಮನ್ನೇ ನಾವು ಸತ್ತೇ ಹೋಗಿದ್ದೇವು ಅಂತ ಅಂದುಕೊಂಡಿದ್ದೇವು. ಸತತವಾಗಿ ಬುಲೆಟ್‍ಗಳು ಗನ್‍ನಿಂದ ಚಿಮ್ಮುತ್ತಿದ್ದವು. ಬುಲೆಟ್ ಯಾರಿಗೆ ಬಿದ್ದಿದೆ ಎಂಬುದು ಸಹ ಗೊತ್ತಾಗುತ್ತಿರಲಿಲ್ಲ. ರಕ್ತ, ಚೀರಾಟದ ನಡುವೆ ಬಸ್‍ನ ಒಳಗಡೆ ಅವಿತು ಕುಳಿತಿದ್ದು ಕೂಡ ನೆನಪಿಗೆ ಬರಲಿಲ್ಲ. ಧೈರ್ಯವಿದ್ರೂ ದೇಹ ನಡುಗುತ್ತಿತ್ತು. ಮಾತುಗಳು ಕಂಪಿಸುತ್ತಿದ್ದವು.. ಅಬ್ಬಾ.. ಆ ದಿನವನ್ನು ನೆನಪಿಸಿಕೊಂಡ್ರೆ ಈಗಲೂ ಮೈ ಝುಮ್ ಅನ್ನಿಸುತ್ತದೆ. ನಾವು ಬದುಕಿದ್ದೇ ದೊಡ್ಡ ಪವಾಡ. ಆದ್ರೆ ಅವರಿಗೆ ನಾವೇ ಯಾಕೆ ಟಾರ್ಗೆಟ್ ಆಗಿದ್ದೇವು ಅನ್ನೋ ಪ್ರಶ್ನೆಗೆ ಈಗಲೂ ಉತ್ತರ ಸಿಕ್ಕಿಲ್ಲ. ಹೀಗೆ ಆ ದಿನದ ಘಟನೆಯನ್ನು ನೆನಪು ಮಾಡಿಕೊಂಡವರು ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕರ.
ನೆನಪಿರಬೇಕಲ್ವಾ… ಇದು ಕ್ರಿಕೆಟ್ ಜಗತ್ತಿನಲ್ಲಿ ನಡೆದ ರಕ್ತಚರಿತ್ರೆಯ ಘಟನೆ. ಅವತ್ತು ಲಂಕಾ ಕ್ರಿಕೆಟಿಗರ ಆಯುಷ್ಯ ಚೆನ್ನಾಗಿತ್ತು. ಇಲ್ಲದೆ ಇದ್ರೆ ಲಂಕಾದ ವಿಶ್ವ ಶ್ರೇಷ್ಠ ಕ್ರಿಕೆಟಿಗರು ಉಗ್ರರ ದಾಳಿಗೆ ಆಹುತಿಯಾಗುತ್ತಿದ್ದರು. ಒಂದಲ್ಲ, ಎರಡಲ್ಲ. 12 ಉಗ್ರರು ಗನ್ ಹಿಡಿದು ಲಂಕಾ ಕ್ರಿಕೆಟಿಗರ ಬಸ್ ಮೇಲೆ ಏಕಾಏಕಿ ಗುಂಡಿನ ದಾಳಿ ಮಾಡಿದ್ದರು. ಅಲ್ಲಿ ಏನಾಗುತ್ತಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಮನಬಂದಂತೆ ಗುಂಡಿನ ಮಳೆಯನ್ನೇ ಸುರಿಸಿದ್ದರು ಉಗ್ರರು. ಆದ್ರೆ ಲಂಕಾ ಕ್ರಿಕೆಟಿಗರ ಬಸ್ ಡ್ರೈವರ್ ಹೆದರಲಿಲ್ಲ. ತನ್ನ ಎದೆಗೆ ಗುಂಡು ಬಿದ್ರೂ ಆಟಗಾರರ ರಕ್ಷಣೆಯೇ ಮುಖ್ಯ ಎಂಬಂತೆ ಬಸ್ ಚಾಲನೆ ಮಾಡಿದ್ದರು.
ಪರಿಣಾಮವೇ ಲಂಕಾ ಕ್ರಿಕೆಟಿಗರ ಜೀವ ಉಳಿಯಿತ್ತು. ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದರು.
ಹೌದು, ಇದೀಗ ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕರ ಆ ದಿನವನ್ನು ನೆನಪು ಮಾಡಿಕೊಂಡಿದ್ದಾರೆ. 2009ರಲ್ಲಿ ನಮಗೆ ಪಾಕ್ ಪ್ರವಾಸ ಮಾಡಲು ಮನಸ್ಸಿರಲಿಲ್ಲ. ಯಾಕಂದ್ರೆ ಭಯವಿತ್ತು. ಉಗ್ರರ ಭೀತಿಯಿಂದಲೇ ಲಂಕಾ ಕ್ರಿಕೆಟ್ ಮಂಡಳಿಯ ಮನವಿಗೆ ಸ್ಪಂದಿಸಿದ್ದೇವು. ಮೊದಲು ಆಗಲ್ಲ ಅಂದಿದ್ದೇವು. ಆನಂತರ ಪಾಕ್ ಭದ್ರತೆ ನೀಡುವುದಾಗಿ ಭರವಸೆ ನೀಡಿತ್ತು. ಜೀವಾ ಮಿಮೆ ಸೇರಿದಂತೆ ಆಟಗಾರರ ರಕ್ಷಣೆಗೆ ಬದ್ಧರಾಗಿರುತ್ತೇವೆ ಎಂಬ ಮಾತುಕೊಟ್ಟ ನಂತರವೇ ನಾವು ಪಾಕ್ ಪ್ರವಾಸ ಕೈಗೊಂಡಿದ್ದು ಅಂತಾರೆ ಕುಮಾರ ಸಂಗಕ್ಕರ
2009ರ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು. ಎರಡನೇ ಟೆಸ್ಟ್ ಪಂದ್ಯದಲ್ಲಿ ಲಂಕಾ ತಂಡ ಮೊದಲ ಇನಿಂಗ್ಸ್ ನಲ್ಲಿ 606 ರನ್ ಗಳಿಸಿತ್ತು. ಎರಡನೇ ದಿನದ ಅಂತ್ಯಕ್ಕೆ ಪಾಕಿಸ್ತಾನ ಒಂದು ವಿಕೆಟ್ ಕಳೆದುಕೊಂಡು 101 ರನ್ ಗಳಿಸಿತ್ತು. ಮೂರನೇ ದಿನ ಬೆಳಗ್ಗೆ.. ಲಾಹೋರ್‍ನ ಗದ್ದಾಫಿ ಕ್ರೀಡಾಂಗಣದಲ್ಲಿ ಅಂತಹುದ್ದೊಂದು ಘಟನೆ ನಡೆಯುತ್ತೆ ಅಂತ ಯಾರು ಕೂಡ ನಿರೀಕ್ಷೆ ಮಾಡಿರಲಿಲ್ಲ. ನಾವಂತೂ ಆ ರೀತಿಯ ದುರಂತ ಸಂಭವಿಸುತ್ತೆ ಅನ್ನೋ ಕಲ್ಪನೆಯೂ ಇರಲಿಲ್ಲ. ಆದ್ರೆ ಅವತ್ತೂ ಯಾರು, ನಿರೀಕ್ಷೆ, ಕಲ್ಪನೆ ಮಾಡಿರದಂತಹ ದುರಂತ ಸಂಭವಿಸುತ್ತು.
ನಾವು ಹೊಟೇಲ್‍ನಿಂದ ಗದ್ದಾಫಿ ಕ್ರೀಡಾಂಣಕ್ಕೆ ಹೊರಟ್ಟಿದ್ದೇವು. ಬಸ್ ನಲ್ಲಿ ಹೋಗುವಾಗ ಸಾಮಾನ್ಯವಾಗಿ ಹರಟೆ ಹೊಡೆದುಕೊಂಡು ಹೋಗುತ್ತಿರುತ್ತೇವೆ. ಕೆಲವರ ತಮಾಷೆ ಕೇಳಿಕೊಂಡು ನಕ್ಕುಕೊಂಡು ಇದ್ದೀವಿ. ಮತ್ತೆ ಕೆಲವರು ಪಿಚ್ ಹೇಗೆ ವರ್ತಿಸುತ್ತೆ ಅಂತ ಮಾತನಾಡುತ್ತಿದ್ದರು. ಇನ್ನು ಕೆಲವರು ಇವತ್ತು ಸಂಜೆ ಏನು ಮಾಡೋದು ? ಗಾಯ ಆಗುತ್ತಾ ? ಇನ್ನು ಕೆಲವರು ಬಾಂಬ್ ಸ್ಫೋಟ ಆಗುತ್ತಾ ಅಂತ ತಮಾಷೆಯಾಗಿ ಹೇಳುತ್ತಿದ್ದದ್ದು ಅಷ್ಟೇ.. ಇನ್ನೇನೂ ನಮ್ಮ ಬಸ್ ಕ್ರೀಡಾಂಗಣದ ಆವರದೊಳಗೆ ಎಂಟ್ರಿಯಾಗಿತ್ತು. 12 ಮಂದಿ ಗನ್‍ಧಾರಿಗಳು ನಮ್ಮ ಬಸ್‍ನತ್ತ ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು.
ಆರಂಭದ ಕ್ಷಣದಲ್ಲಿ ಪಟಾಕಿ ಸಿಡಿಸುತ್ತಿದ್ದಾರೆ ಅಂತ ಅಂದುಕೊಂಡಿದ್ದೇವು. ಕೆಳಗಿಳಿಯಿರಿ ಅವರು ಬಸ್ ಮೇಲೆ ದಾಳಿ ಮಾಡುತ್ತಾರೆ ಅಂತ. ದಿಲ್ಶಾನ್ ಮುಂದಿನ ಸೀಟ್‍ನಲ್ಲಿದ್ದರು. ನಾನು ಮಧ್ಯದಲ್ಲಿದ್ದೆ. ನನ್ನ ಪಕ್ಕ ಮಹೇಳಾ ಜಯವರ್ಧನೆ ಇದ್ರು. ಮುರಳಿ ನನ್ನ ಹಿಂದೆ ಕುತಿದ್ದರು. ಹಾಗೇ ಆರಂಭಿಕ ಆಟಗಾರ ತರಂಗಾ ಪರಣವಿತನ ಅವರು ಮುಂದಿನ ಸೀಟ್‍ನಲ್ಲಿ ಕೂತಿದ್ದರು. ಆಗ ನಾವು ಬಸ್‍ನೊಳಗಡೆಯೇ ಅವಿತು ಕುಳಿತೆವು. ಒಬ್ಬರ ಮೇಲೆ ಒಬ್ಬರು ಬಿದ್ದಿದ್ದೇವು. ಅವರು ಮನಬಂದಂತೆ ಗುಂಡು ಹಾರಿಸುತ್ತಿದ್ದರು. ಗ್ರಾನೈಡ್ ದಾಳಿ ನಡೆಸಿದ್ದರು. ಆದ್ರೆ ನನಗೆ ಈಗಲೂ ಅಚ್ಚರಿ ಅಂದ್ರೆ ನಾವು ಹೇಗೆ ಬದುಕಿ ಉಳಿದ್ದೇವೆ ಎಂಬುದು ಅಂತ ಸಂಗಕ್ಕರ ಆ ದಿನದ ಘಟನೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಾರೆ.
ಈ ಘಟನೆಯಲ್ಲಿ ತಿಲನ್, ಅಜಂತಾ ಮೆಂಡೀಸ್ ಗಾಯಗೊಂಡಿದ್ದರು. ನನಗೂ ಸಣ್ಣ ಪುಟ್ಟ ಗಾಯಗಳಾಗಿದ್ದವು. ತರಂಗಾ ಪರಣವಿತನ್ ಅವರ ಎದೆಯಿಂದ ರಕ್ತ ಸುರಿಯುತ್ತಿತ್ತು. ಅಲ್ಲದೆ ಕೆಳಗಡೆ ಬಿದ್ದು ನನಗೆ ಬುಲೆಟ್ ತಾಗಿದೆ ಅಂದ್ರು. ನಾವು ಬಸ್‍ನೊಳಗಡೆ ಚೀರಾಡುತ್ತಿದ್ದೇವು. ಅಷ್ಟೊರಳಗೆ ಭದ್ರತಾ ಸಿಬ್ಬಂಧಿಗಳು ನಮ್ಮನ್ನು ಸುತ್ತವರಿದಿದ್ದರು. ನಮ್ಮಿಂದಾಗಿ ಕೆಲವು ಭದ್ರತಾ ಸಿಬ್ಬಂದಿಗಳು ಕೂಡ ಸಾವನ್ನಪ್ಪಿದ್ದರು. ಅವರು ನಮ್ಮ ಬಸ್ ಡ್ರೈವರ್ ನ್ನು ಮೊದಲು ಗುರಿಯಾಗಿರಿಸಿಕೊಂಡಿದ್ದರು. ಆದ್ರೆ ಅದೃಷ್ಟವಾಶಾತ್ ಅವರು ಪಾರಾಗಿಬಿಟ್ಟರು. ಅವರು ಬಸ್ ಅನ್ನು ನೇರವಾಗಿ ಮೈದಾನದೊಳಗೆ ಚಾಲನೆ ಮಾಡಿದ್ದರು. ಆಗ ನಾವು ಸತ್ತಿದ್ದೇವೆ ಅಂತ ಅಂದುಕೊಂಡಿದ್ದೇವು. ನಮ್ಮ ದೇಹದೊಳಗಡೆ ಗುಂಡು ಬಿದ್ದಿದೆಯಾ ಅಂತ ಹುಡುಕುತ್ತಿದ್ದೇವು. ಕೊನೆಗೆ ಏನು ಆಗಿಲ್ಲ. ನಾವು ಬದುಕಿದ್ದೇವೆ ಅಂತ ಗೊತ್ತಾಗಿಬಿಟ್ಟಿತ್ತು. ಆ ನಂತರವೂ ಅವರು ಆಂಬ್ಯುಲೆನ್ಸ್ ಮೇಲು ದಾಳಿ ಮಾಡಿದ್ದರು ಹೀಗೆ ಅಂದಿನ ಆ ಕಹಿ ಘಟನೆಯನ್ನು ಕುಮಾರ ಸಂಗಕ್ಕರ ನೆನಪಿಸಿಕೊಂಡು ಒಂದು ಕ್ಷಣ ಭಾವುಕರಾದ್ರು.
ಅವತ್ತು ಏನೋ ಲಂಕಾ ಕ್ರಿಕೆಟಿಗರು ಬದುಕಿಳಿದ್ರು. ಆದ್ರೆ ಆ ಒಂದು ಘಟನೆಯಿಂದ ಪಾಕಿಸ್ತಾನ ವಿಶ್ವದ ಮುಂದೆ ಮಂಡಿಯೂರಿಬಿಟ್ಟಿತ್ತು. ಅಷ್ಟೇ ಯಾಕೆ, ಇವತ್ತೂ ಪಾಕಿಸ್ತಾನ ನೆಲದಲ್ಲಿ ಯಾವುದೇ ಪ್ರಮುಖ ರಾಷ್ಟ್ರಗಳು ಕ್ರಿಕೆಟ್ ಆಡುತ್ತಿಲ್ಲ.








