ಕ್ರಾಂತಿಕಾರಿ ಅಂದರೆ ಗುಂಡು ಹೊಡೆಯುವುದಲ್ಲ : ಚೇತನ್ ಗೆ ಹೆಚ್ಡಿಕೆ ಟಾಂಗ್
ಹುಬ್ಬಳ್ಳಿ : ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಕ್ರಾಂತಿಕಾರಿ ದೃಷ್ಟಿ ಇಲ್ಲ ಎಂಬ ನಟ ಚೇತನ್ ಹೇಳಿಕೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಕ್ರಾಂತಿಕಾರಿ ಅಂದರೆ ಗುಂಡು ಹೊಡೆಯುವುದು ಅಲ್ಲ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.
ನಾಡಿನ ಜನತೆ ಐದು ವರ್ಷ ಸಂಪೂರ್ಣ ಬಹುಮತ ನೀಡಿದ್ರೆ ರಾಜ್ಯದಲ್ಲಿ ಕಾಂತ್ರಿಕಾರಿಕ ಬದಲಾವಣೆ ತರುತ್ತೇನೆ ಎಂಬ ಹೇಳಿಕೆಗೆ ಟ್ವಿಟ್ಟರ್ ನಲ್ಲಿ ಟಾಂಗ್ ಕೊಟ್ಟಿದ್ದ ನಟ ಚೇತನ್, ಕರ್ನಾಟಕವನ್ನು 5 ವರ್ಷಗಳ ಮುನ್ನಡೆಸುವ ಸ್ವಾತಂತ್ರ್ಯವಿದ್ದಿದ್ದರೆ ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತೇನೆಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮೊದಲಿಗೆ 2 ಬಾರಿ ಅವರು ಸಿಎಂ ಆಗಿದ್ದಾಗಲೂ ಕೂಡ ನಮ್ಮ ರಾಜ್ಯಕ್ಕೆ ಅಂತಹದೇನೂ ಕ್ರಾಂತಿಕಾರಿ ಮಾಡಲಿಲ್ಲ, ಪ್ರಯತ್ನವನ್ನು ಮಾಡಲಿಲ್ಲ.
ಮುಖ್ಯವಾಗಿ ಅವರಿಗೆ ಕ್ರಾಂತಿಕಾರಿ ದೃಷ್ಟಿ ಇಲ್ಲ ಮತ್ತು ಯಥಾಸ್ಥಿತಿ ಚಿಂತನೆ ಪ್ರಕ್ರಿಯೆಯು ಅಧಿಕಾರಕ್ಕೆ ಮುಂಚಿತವಾಗಿರಬೇಕು. ಇವುಗಳೆಲ್ಲಾ ನಾನ್ ಸೆನ್ಸ್ ಪದಗಳು ಎಂದು ಬರೆದುಕೊಂಡಿದ್ದರು.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿರುವ ಹೆಚ್ ಡಿ ಕುಮಾರಸ್ವಾಮಿ, ಕ್ರಾಂತಿಕಾರಿ ಅಂದ್ರೆ ನೀರಾವರಿ. ಶಿಕ್ಷಣ, ಆರೋಗ್ಯ ಹಾಗೂ ಸಾಲ ಇಲ್ಲದಂತೆ ರೈತರು ಬದುಕು ನಡೆಸುವ ಬಗ್ಗೆ ಕ್ರಾಂತಿಕಾರಿ ಎಂದು ಹೇಳಿದ್ದೆ.
ಕ್ರಾಂತಿಕಾರಿ ಅಂದರೆ ಗುಂಡು ಹೊಡೆಯುವುದು ಅಲ್ಲ ಎಂದು ಸ್ಪಷ್ಟಪಡಿಸಿದರು. ಅವರು ನಟರಾದರೆ ನಾನು ಸಿನಿಮಾ ನಿರ್ದೇಶನ ಮಾಡಿದ್ದೇನೆ. ಆ ಕುರಿತು ಹೆಚ್ಚು ಚರ್ಚೆ ಬೇಡ ಎಂದು ಹೇಳಿದರು.









