Kumaraswamy: ಅಧಿಕಾರಕ್ಕೆ ಬಂದ 24 ಗಂಟೆಗಳ ಒಳಗೆ ಸಾಲ ಮನ್ನಾ
ನಾನು ಸಿಎಂ ಆದ್ರೆ ಅಧಿಕಾರಕ್ಕೆ ಬಂದ 24 ಗಂಟೆಗಳ ಒಳಗೆ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡುತ್ತೇನೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.
ಜೆಡಿಎಸ್ ಪಂಚರತ್ನ ರಥಯಾತ್ರೆಯ ಮೂರನೇ ದಿನ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿಯಲ್ಲಿ ಮಾತನಾಡಿದ ಅವರು, ಜನರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ರಥಯಾತ್ರೆ ಆರಂಭಿಸಿದ್ದು, ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.ಅಧಿಕಾರಕ್ಕೆ ಬಂದ 24 ಗಂಟೆಗಳ ಒಳಗೆ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡುತ್ತೇನೆ. ಈ ಬಾರಿ 123 ಸ್ಥಾನ ಗೆದ್ದು, ಆರೋಗ್ಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತಂದು ರಾಮರಾಜ್ಯ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು.
ಭಾನುವಾರ ಬೆಳಿಗ್ಗೆ 10 ಗಂಟೆಗೆ ಹೆಚ್.ಡಿ.ಕುಮಾರಸ್ವಾಮಿಯವರ ನೇತೃತ್ವದಲ್ಲಿ ಮಾಲೂರಿನ ಕೆಂಪಸಂದ್ರದಿಂದ ಪ್ರಾರಂಭವಾದ ರಥಯಾತ್ರೆಯು ಹುಣಸಿಕೋಟೆ , ಕೆ ಜಿ. ಹಳ್ಳಿ, ತೊರಲಕ್ಕಿ , ದಿನ್ನಹಳ್ಳಿ, ಮಾಸ್ತಿ, ಕುಡಿಯನೂರು, ಕೋಡಿಹಳ್ಳಿ ಗೇಟ್, ಸಂಪಂಗೆರೆ, ಚಿಕ್ಕತಿರುಪತಿ, ಲಕ್ಕೂರನಲ್ಲಿ ಸಾಗಿತು. ರಥಯಾತ್ರೆ ಸಾಗಿದ ಕಡೆಗಳಲ್ಲಿ ಭಾರೀ ಜನ ಬೆಂಬಲ ವ್ಯಕ್ತವಾಗಿದ್ದು, ಕುಮಾರಸ್ವಾಮಿ ಅವರಿಗೆ ಜನರು ಸಮಸ್ಯೆಗಳ ಮನವಿ ಸಲ್ಲಿಸಿದರು.
Kumaraswamy: Loan waiver within 24 hours of coming to power








