ಗಡಿ ಜಿಲ್ಲೆಯಾದ ಬೆಳಗಾವಿಯಲ್ಲಿ ಡಿಸೆಂಬರ್-26 ಮತ್ತು 27ರಂದು ದೇಶದ ಎಲ್ಲಾ ಪ್ರಮುಖ ಕಾಂಗ್ರೆಸ್ ನಾಯಕರ ಸಮಾಗಮದ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯ 150 ಸದಸ್ಯರುಗಳನ್ನು ಒಳಗೊಂಡಂತೆ ದೇಶದ ನಾನಾ ಮೂಲೆಮೂಲೆಗಳಿಂದ ಪಕ್ಷದ 300ಕ್ಕೂ ಹೆಚ್ಚು ಗಣ್ಯ ನಾಯಕರು ‘ಕುಂದಾ ನಗರಿ’ಯಾದ ಬೆಳಗಾವಿಯಲ್ಲಿ ಸೇರಲಿದ್ದಾರೆ.
ಇಡೀ ದೇಶದ ಗಮನ ಸೆಳೆದಿರುವ ಅಧಿವೇಶನದ ಶತಮಾನೋತ್ಸವ ಸಮಾರಂಭದ ಈ ಕಾರ್ಯಕ್ರಮಕ್ಕೆ ಡಿ.26ರಂದು ದಿಲ್ಲಿಯಿಂದ ಎರಡು ವಿಶೇಷ ವಿಮಾನಗಳಲ್ಲಿ ಗಣ್ಯರ ಆಗಮನವಾಗಲಿದೆ ಎಂದು ತಿಳಿದುಬಂದಿದೆ.