ಅಕ್ಟೋಬರ್ 4 ರಂದು ಭಾರತದಾದ್ಯಂತ ಕುವೈಟ್ ರಾಜ ಅವರ ಸ್ಮರಣಾರ್ಥ ಶೋಕಾಚರಣೆ
ಹೊಸದಿಲ್ಲಿ, ಅಕ್ಟೋಬರ್02: ಭಾರತದಾದ್ಯಂತ ಅಕ್ಟೋಬರ್ 4 ರಂದು ಮಂಗಳವಾರ ನಿಧನರಾದ ಕುವೈಟ್ ರಾಜ ಅವರಿಗೆ ಗೌರವ ಸೂಚಕವಾಗಿ ಶೋಕಾಚರಣೆಯನ್ನು ಸರ್ಕಾರ ಘೋಷಿಸಿದೆ. ಕೇಂದ್ರ ಸರ್ಕಾರ ಸೆಪ್ಟೆಂಬರ್ 29 ರಂದು ನಿಧನರಾದ ಕುವೈತ್ ರಾಜ ಶೇಖ್ ಸಬಾ ಅಲ್ ಅಹಮದ್ ಅಲ್ ಜೇಬರ್ ಅಲ್ ಸಬಾ ಅವರಿಗೆ ಗೌರವ ಸೂಚಕವಾಗಿ ಅಕ್ಟೋಬರ್ 4 ರಂದು ಭಾರತದಾದ್ಯಂತ ಏಕದಿನ ರಾಜ್ಯ ಶೋಕಾಚರಣೆಯನ್ನು ಗುರುವಾರ ಪ್ರಕಟಿಸಿದೆ. ಆ ದಿನ ಎಲ್ಲಾ ಸರ್ಕಾರಿ ಕಟ್ಟಡಗಳ ಮೇಲೆ ಅರ್ಧ ಮಟ್ಟದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತದೆ.
ಗೋಹತ್ಯೆ ನಿಷೇಧಿಸಿದ ಶ್ರೀಲಂಕಾ ಸರ್ಕಾರ
ಗೃಹ ಸಚಿವಾಲಯದ ಹೇಳಿಕೆಯಲ್ಲಿ ಕುವೈಟ್ ನ ರಾಜ ಎಮಿರ್ ಶೇಖ್ ಸಬಾ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾ ಸೆಪ್ಟೆಂಬರ್ 29 ರಂದು ನಿಧನರಾದರು. ಅಗಲಿದ ಗಣ್ಯರಿಗೆ ಗೌರವ ಸೂಚಕವಾಗಿ, ಭಾರತದಾದ್ಯಂತ 2020 ರ ಅಕ್ಟೋಬರ್ 4 ರಂದು ಒಂದು ದಿನದ ರಾಜ್ಯ ಶೋಕಾಚರಣೆ ನಡೆಯಲಿದೆ ಎಂದು ಭಾರತ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದೆ.
ರಾಷ್ಟ್ರದಾದ್ಯಂತ ಧ್ವಜವನ್ನು ಅಂದು ಎಲ್ಲಾ ಕಟ್ಟಡಗಳ ಮೇಲೆ ಅರ್ಧ ಮಟ್ಟದಲ್ಲಿ ಹಾರಿಸಲಾಗುತ್ತದೆ ಮತ್ತು ಆ ದಿನದಂದು ಯಾವುದೇ ಅಧಿಕೃತ ಮನರಂಜನೆ ಇರುವುದಿಲ್ಲ ಎಂದು ಗೃಹ ಸಚಿವಾಲಯದ ಪ್ರಕಟನೆ ತಿಳಿಸಿದೆ.
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv