ಕುವೈತ್ ಮತ್ತೆ ವಿಮಾನಯಾನ ಪುನರಾರಂಭ – ಭಾರತೀಯ ನಾಗರಿಕರಿಗೆ ಪ್ರವೇಶ ನಿಷೇಧ
ಕುವೈತ್, ಅಗಸ್ಟ್ 3: ಕೋವಿಡ್ ಸೋಂಕು ಹರಡದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿರುವ ಗಲ್ಫ್ ದೇಶ ಕುವೈತ್ ವಿಮಾನಯಾನವನ್ನು ಮತ್ತೆ ಆರಂಭಿಸಿದೆ.
ಆದರೆ ಭಾರತೀಯ ನಾಗರಿಕರು ದೇಶಕ್ಕೆ ಪ್ರವೇಶಿಸುವುದನ್ನು ನಿಷೇಧಿಸಿದೆ. ಭಾರತ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ, ಇರಾನ್, ಫಿಲಿಪೈನ್ಸ್, ಚೀನಾ, ಬ್ರೆಜಿಲ್, ಲೆಬನಾನ್, ಸ್ಪೇನ್, ಸಿಂಗಪುರ, ಈಜಿಪ್ಟ್ ಹಾಗೂ ಶ್ರೀಲಂಕಾ ಸೇರಿದಂತೆ ಒಟ್ಟು 31 ದೇಶಗಳ ಪ್ರಯಾಣಿಕರನ್ನು ಹೊರತು ಪಡಿಸಿ ಇತರ ದೇಶದ ಪ್ರಯಾಣಿಕರು ಕುವೈತ್ ಗೆ ಪ್ರಯಾಣಿಸಬಹುದು ಎಂದು ಕುವೈತ್ ಸರ್ಕಾರ ಪ್ರಕಟಿಸಿದೆ. ಮೂರೂವರೆ ತಿಂಗಳು ಮುಚ್ಚಿದ ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳನ್ನೂ್ ಪುನಃಸ್ಥಾಪಿಸಲಾಗುವುದು ಎಂದು ಕುವೈತ್ ಸರ್ಕಾರ ಘೋಷಿಸಿದ್ದು, ಭಾರತೀಯ ನಾಗರಿಕರ ಮೇಲೆ ವಿಧಿಸಲಾಗಿರುವ ಈ ನಿರ್ಬಂಧದ ಬಗ್ಗೆ ಭಾರತೀಯ ವಿದೇಶಾಂಗ ಸಚಿವಾಲಯಕ್ಕೆ ತಿಳಿದಿದೆ. ಭಾರತ ಸರ್ಕಾರ ಆಡಳಿತಾತ್ಮಕ ಮಟ್ಟದಲ್ಲಿ ಈ ವಿಷಯವನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ.
ಕೊರೋನಾ ಸಾಂಕ್ರಾಮಿಕದಿಂದಾಗಿ ಭಾರತದಲ್ಲಿ ಸಿಲುಕಿರುವ ಸಾವಿರಾರು ಜನರಿಗೆ ಉದ್ಯೋಗ ನಷ್ಟವಾಗಲು ಈ ನಿರ್ಧಾರ ಕಾರಣವಾಗಲಿದೆ ಎಂದು ಭಾರತ ಸಮುದಾಯ ಬೆಂಬಲ ಗುಂಪಿನ ಮುಖ್ಯಸ್ಥ ರಾಜ್ಪಾಲ್ ತ್ಯಾಗಿ ತಿಳಿಸಿದ್ದಾರೆ.
ಅವರಲ್ಲಿ ಕೆಲವರು ಕುಟುಂಬ ಸಮೇತ ಕುವೈತ್ನಲ್ಲಿ ವಾಸಿಸುತ್ತಿದ್ದಾರೆ. ಕೆಲವರು ಭಾರತದಲ್ಲಿ ಸಿಕ್ಕಿಬಿದ್ದಿದ್ದು ಈಗ ಅವರೆಲ್ಲರೂ ಮರಳಿ ಕುವೈತ್ ಗೆ ವಾಪಸಾಗಲು ಬಯಸುತ್ತಿದ್ದಾರೆ ಎಂದು ಹೇಳಿದರು. ರಜೆಯ ಮೇಲೆ ಹೋದ ಜನರು ಹಿಂತಿರುಗದಿದ್ದರೆ, ಅವರು ಉದ್ಯೋಗ ಕಳೆದು ಕೊಳ್ಳುವ ಅಪಾಯವಿದೆ ಎಂದು ಅವರು ಹೇಳಿದರು.