ADVERTISEMENT
Saturday, April 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಪಾತ್ರಧಾರಿ ಕೆ.ವಿ. ಪ್ರಭಾಕರ್..!

admin by admin
February 14, 2026
in Newsbeat, Sports, ಕ್ರೀಡೆ
KV Prabhakar, the protagonist of the CM Cup badminton tournament..!

KV Prabhakar, the protagonist of the CM Cup badminton tournament..!

Share on FacebookShare on TwitterShare on WhatsappShare on Telegram

ಕೆ.ವಿ. ಪ್ರಭಾಕರ್, ಪತ್ರಿಕಾ ರಂಗ, ರಾಜಕೀಯ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು. ಕಳೆದ 13 ವರ್ಷಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೆರಳಿನಂತೆ ಇರುವ ಕೆ.ವಿ. ಪ್ರಭಾಕರ್, ಒಂದು ಲೆಕ್ಕದಲ್ಲಿ ಪತ್ರಿಕೋದ್ಯಮ ಮತ್ತು ರಾಜಕೀಯ ಕ್ಷೇತ್ರದಲ್ಲಿ ಅಜಾತಶತ್ರು ಎಂದೇ ಹೇಳಬಹುದು. ಪವರ್ಫುಲ್ ಸ್ಥಾನದಲ್ಲಿದ್ದರೂ ತಮ್ಮ ಬಳಿಗೆ ಬಂದವರಲ್ಲಿ ಆ ಅಹಂ ಎಂದೂ ಪ್ರದರ್ಶಿಸಿದವರಲ್ಲ. ಬೆಂಬಲ ಕೋರಿ ಬಂದವರಿಗೆ ಬೆನ್ನೆಲುಬಾಗಿ ನಿಂತವರು. ಸಿಎಂ ಕಪ್ 2026ಕ್ಕೂ ಅದೇ ರೀತಿಯ UNCONDITIONAL ಬೆಂಬಲ ನೀಡುತ್ತಾ, ನಾನಿದ್ದೀನಿ ನೀವು ಮುಂದುವರಿಯಿರಿ ಎಂದು ಬೆನ್ನು ತಟ್ಟಿದ್ದಾರೆ ಮತ್ತು ಬೆನ್ನ ಹಿಂದೆ ನಿಂತು ಪ್ರೋತ್ಸಾಹಿಸಿದ್ದಾರೆ. ಅಲ್ಲದೆ ಟೂರ್ನಿಯಲ್ಲಿ ಆಡುತ್ತಿರುವುದು ಇನ್ನಷ್ಟು ಸ್ಪೂರ್ತಿಯನ್ನುಂಟು ಮಾಡಿದೆ  ಅಂತಹ ಮೇರು ವ್ಯಕ್ತಿತ್ವದ ಪರಿಚಯ ಮಾಡುವ ಸಣ್ಣ ಪ್ರಯತ್ನ ನಮ್ಮದು.

ಕೋಲಾರದ ಕುರುಬರ ಪೇಟೆಯ ಮಧ್ಯಮ ವರ್ಗದ ವೆಂಕಟೇಶಪ್ಪ ಮತ್ತು ಲಕ್ಷ್ಮೀದೇವಿ ಅವರ ಪುತ್ರ ಕೆ.ವಿ. ಪ್ರಭಾಕರ್, ತಮ್ಮ ಪ್ರಾಥಮಿಕ ಮತ್ತು ಪದವಿ ಶಿಕ್ಷಣವನ್ನು ಕೋಲಾರ ಮತ್ತು ಕೆಜಿಎಫ್ನಲ್ಲಿ ಪೂರ್ಣಗೊಳಿಸಿದರು.

Related posts

ಮೋದಿ ಎಂದರೆ ಭಯವೇ ನಾವು ಕೇಜ್ರಿವಾಲ್ ಸೈನಿಕರು ಸಮೋಸಾ ಬೆಲೆ ಇಳಿಸುವುದಲ್ಲ ನಮ್ಮ ಗುರಿ ರಾಘವ್ ಚಡ್ಡಾಗೆ ಆಪ್ ತಿರುಗೇಟು

ಮೋದಿ ಎಂದರೆ ಭಯವೇ ನಾವು ಕೇಜ್ರಿವಾಲ್ ಸೈನಿಕರು ಸಮೋಸಾ ಬೆಲೆ ಇಳಿಸುವುದಲ್ಲ ನಮ್ಮ ಗುರಿ ರಾಘವ್ ಚಡ್ಡಾಗೆ ಆಪ್ ತಿರುಗೇಟು

April 4, 2026
ಎಸ್ಎಸ್ಎಲ್ ಸಿ ತೃತೀಯ ಭಾಷೆ ಅಂಕ ಕಡಿತ ನಿರ್ಧಾರ ಮರುಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರ ಖಡಕ್ ಸೂಚನೆ

ಎಸ್ಎಸ್ಎಲ್ ಸಿ ತೃತೀಯ ಭಾಷೆ ಅಂಕ ಕಡಿತ ನಿರ್ಧಾರ ಮರುಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರ ಖಡಕ್ ಸೂಚನೆ

April 4, 2026

ಆನಂತರ ಕೋಲಾರ ಪತ್ರಿಕೆಯ ಹಂಚಿಕೆದಾರರಿಗೆ ಪತ್ರಿಕಾ ರಂಗದಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಪ್ರಭಾಕರ್ ಅವರ ವೃತ್ತಿಪರತೆ, ಮಹಾತ್ವಾಕಾಂಕ್ಷೆ, ಕಾರ್ಯಕ್ಷಮತೆ, ಶ್ರಮ ಮತ್ತು ಶ್ರದ್ಧೆಯು ಹಂಚಿಕೆದಾರರಾಗಿದ್ದ ಕೋಲಾರ ಪತ್ರಿಕೆಯಲ್ಲಿಯೇ ವರದಿಗಾರರಾಗಿ ವೃತ್ತಿ ಜೀವನವನ್ನು ಮತ್ತೊಂದು ಮಜಲಿಗೆ ಹೊರಳುವಂತಾಯಿತು. ಜತೆಗೆ ಸುದ್ದಿ ಸಂಚಯ, ಕೋಲಾರ ವಾಣಿ ಪತ್ರಿಕೆಯಲ್ಲೂ ಕೆಲಸ ಮಾಡಿದರು.

ಈ ಪತ್ರಿಕೆಗಳ ಅನುಭವವನ್ನು ಹೊತ್ತು 1999ರಲ್ಲಿ ರಾಜಧಾನಿ ಬೆಂಗಳೂರಿತ್ತ ಮುಖಮಾಡಿದ ಕೆ.ವಿ. ಪ್ರಭಾಕರ್, ವಿಜಯಕರ್ನಾಟಕ, ಕನ್ನಡಪ್ರಭ ಪತ್ರಿಕೆಗಳ ಮೂಲಕ ವೃತ್ತಿಯಲ್ಲಿ ಮತ್ತೊಂದು ಹಂತಕ್ಕೇರಿದರು. ವರದಿಗಾರರಾಗಿ, ವಿಶೇಷ ವರದಿಗಾರ ಮತ್ತು ಮುಖ್ಯ ವರದಿಗಾರರಾಗಿಯೂ ಸೇವೆ ಸಲ್ಲಿಸಿದ್ದರು. ರಾಜಕೀಯ, ಅಪರಾಧ, ಸಾಮಾಜಿಕ ಕಳಕಳಿಯ ಹಲವು ವರದಿಗಳ ಮೂಲಕ ಪತ್ರಿಕೋದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿದರು.

ಪತ್ರಿಕೋದ್ಯಮದಲ್ಲಿನ ಸಾಧನೆ, ವೃತ್ತಿಪರತೆಗಾಗಿ ಕೆ.ವಿ. ಪ್ರಭಾಕರ್ ಅವರಿಗೆ, ಕೆಂಪೇಗೌಡ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಪ್ರೆಸ್ಕ್ಲಬ್ ಪ್ರಶಸ್ತಿ, ಕೋಲಾರ ಜಿಲ್ಲಾ ಪತ್ರಕರ್ತರ ಸಂಘ ಕೊಡಮಾಡುವ ಪತ್ರಿಕೋದ್ಯಮದ ಹೆಮ್ಮೆ ಜಿ. ನಾರಾಯಣಸ್ವಾಮಿ ಪ್ರಶಸ್ತಿ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಪುರಸ್ಕಾರ, ಗೌರವಗಳು ಸಂದಿವೆ.

25 ವರ್ಷಗಳ ವೃತ್ತಿಪರತೆ, ಅನುಭವ, ಪ್ರಾಮಾಣಿಕತೆ ಕೆ.ವಿ. ಪ್ರಭಾಕರ್ ಅವರನ್ನು ಶಕ್ತಿ ಕೇಂದ್ರದಲ್ಲಿ ಕೆಲಸ ಮಾಡುವ ಅವಕಾಶ ಕಲ್ಪಿಸಿತು. ಅದೂ ಕೂಡ ರಾಜ್ಯದ ಯಶಸ್ವಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಗದಲ್ಲಿ ಜನಸೇವೆ ಮಾಡುವಂತಹ ಮಹತ್ವದ ಜವಾಬ್ದಾರಿಯೂ ದೊರೆಯಿತು. 2013ರಲ್ಲಿ ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಅವರ ಮಾಧ್ಯಮ ಸಂಯೋಜಕರಾಗಿ ಸೇವೆ ಸಲ್ಲಿಸಿದರು. ಆನಂತರ 2018ರಲ್ಲಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ಮಾಧ್ಯಮ ಸಂಯೋಜಕರಾಗಿ ಕಾರ್ಯನಿರ್ವಹಿಸಿದರು.

ಈ ಎರಡೂ ಅವಧಿಯಲ್ಲಿ ತಮ್ಮ ವ್ಯಕ್ತಿತ್ವ ಮತ್ತು ಪ್ರಾಮಾಣಿಕತೆ ಬಿಟ್ಟುಕೊಡದ ಕೆ.ವಿ. ಪ್ರಭಾಕರ್ ಅವರಿಗೆ 2023ರಲ್ಲಿ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿ ಆಗುತ್ತಿದ್ದಂತೆ ಮಾಧ್ಯಮ ಸಲಹೆಗಾರರಾಗುವ ಜವಾಬ್ದಾರಿ ಒದಗಿ ಬಂದಿತು.

ಮುಖ್ಯಮಂತ್ರಿ ಅವರಿಗೆ ಮಾಧ್ಯಮ ಸಲಹೆಗಾರರಾಗಿ ಸಂಪುಟ ದರ್ಜೆ ಸ್ಥಾನಮಾನ ಹೊಂದಿದ್ದರೂ, ತಮ್ಮ ಬಳಿಗೆ ಬರುವ ಯಾರನ್ನೂ ದೂರ ಇಟ್ಟ ಅಥವಾ ಅವರ ಕಷ್ಟಗಳನ್ನು ಉದಾಸೀನ ಮಾಡಿದ ಉದಾಹರಣೆಗಳಿಲ್ಲ. ಸರ್ಕಾರದ ಭಾಗವಾಗಿದ್ದರೂ ತಮ್ಮನ್ನು ಪತ್ರಕರ್ತ ಎಂದು ಗುರುತಿಸಿಕೊಳ್ಳುವುದಕ್ಕೆ ಈಗಲೂ ಕೆ.ವಿ. ಪ್ರಭಾಕರ್ ಹೆಮ್ಮೆ ಪಡುತ್ತಾರೆ. ಅದನ್ನೂ ಹಲವು ವೇದಿಕೆಗಳಲ್ಲಿ ಹೇಳಿಯೂ ಇದ್ದಾರೆ.

ಪ್ರಭಾಕರ್ ಅವರು ಅಧಿಕಾರ ರಾಜಕಾರಣದ ಭಾಗವಾಗಿದ್ದರೂ ತಮ್ಮ ಜವಾಬ್ದಾರಿ ಮತ್ತು ಕೆಲಸದ ಆಚೆಗೆ ರಾಜಕಾರಣವನ್ನು ಅಂಟಿಸಿಕೊಂಡಿಲ್ಲ.

ಆದರೆ, ಅಧಿಕಾರ ರಾಜಕಾರಣದಿಂದಲೇ ಪತ್ರಕರ್ತ ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಹಿರಿಯ ಪತ್ರಕರ್ತರಿಗೆ ಆರ್ಥಿಕ ನೆರವು ನೀಡಲು ಅವರಿಗೆ ಸಿಗುತ್ತಿದ್ದ ಮಾಸಾಶನವನ್ನು 3 ಸಾವಿರ ರು.ನಿಂದ ಹಂತಹಂತವಾಗಿ 15 ಸಾವಿರ ರು.ಗೆ ತಲುಪುವಂತೆ ಮಾಡುವಲ್ಲಿ ಕೆ.ವಿ. ಪ್ರಭಾಕರ್ ಅವರ ಕಾಳಜಿ, ಶ್ರಮ ಸಾಕಷ್ಟಿದೆ.

ಮುಖ್ಯಮಂತ್ರಿ ಅವರ ಆರೋಗ್ಯ ಸಂಜೀವಿನಿ ಯೋಜನೆ ಚಾಲನೆ, ಗ್ರಾಮೀಣ ಪತ್ರಕರ್ತರ 3 ದಶಕಗಳ ಬೇಡಿಕೆಯಾದ ಉಚಿತ ಬಸ್ ಪಾಸ್ ನೀಡಿರುವುದು ಪತ್ರಕರ್ತ ಸಮುದಾಯಕ್ಕೆ ಸರ್ಕಾರಿ ಸವಲತ್ತುಗಳನ್ನು ಪಡೆಯಲು ವಿಧಿಸಲಾಗಿದ್ದ ಕಠಿಣ ಷರತ್ತುಗಳನ್ನು ಸರಳಗೊಳಿಸಿದ್ದರ ಹಿಂದೆ ಕೆ.ವಿ.ಪ್ರಭಾಕರ್ ಇದ್ದಾರೆ.ಪತ್ರಿಕಾ ವಿತರಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಮಾಡುವಲ್ಲಿಯೂ ಪ್ರಭಾಕರ್ ಶ್ರಮವಿದೆ.

Tags: #cmcupbadminton2026#cmSiddaramaiah#kvprabhakar#nammabengaluru#saakshatvbengalurukannadanewskarnataka
ShareTweetSendShare
Join us on:

Related Posts

ಮೋದಿ ಎಂದರೆ ಭಯವೇ ನಾವು ಕೇಜ್ರಿವಾಲ್ ಸೈನಿಕರು ಸಮೋಸಾ ಬೆಲೆ ಇಳಿಸುವುದಲ್ಲ ನಮ್ಮ ಗುರಿ ರಾಘವ್ ಚಡ್ಡಾಗೆ ಆಪ್ ತಿರುಗೇಟು

ಮೋದಿ ಎಂದರೆ ಭಯವೇ ನಾವು ಕೇಜ್ರಿವಾಲ್ ಸೈನಿಕರು ಸಮೋಸಾ ಬೆಲೆ ಇಳಿಸುವುದಲ್ಲ ನಮ್ಮ ಗುರಿ ರಾಘವ್ ಚಡ್ಡಾಗೆ ಆಪ್ ತಿರುಗೇಟು

by Shwetha
April 4, 2026
0

ಆಮ್ ಆದ್ಮಿ ಪಕ್ಷದಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದ್ದು ನಾಯಕರ ನಡುವಿನ ವಾಕ್ಸಮರ ತಾರಕಕ್ಕೇರಿದೆ. ರಾಜ್ಯಸಭೆಯ ಎಎಪಿ ಉಪನಾಯಕ ಸ್ಥಾನದಿಂದ ಯುವ ನಾಯಕ ರಾಘವ್ ಚಡ್ಡಾ ಅವರನ್ನು ದಿಢೀರನೆ...

ಎಸ್ಎಸ್ಎಲ್ ಸಿ ತೃತೀಯ ಭಾಷೆ ಅಂಕ ಕಡಿತ ನಿರ್ಧಾರ ಮರುಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರ ಖಡಕ್ ಸೂಚನೆ

ಎಸ್ಎಸ್ಎಲ್ ಸಿ ತೃತೀಯ ಭಾಷೆ ಅಂಕ ಕಡಿತ ನಿರ್ಧಾರ ಮರುಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರ ಖಡಕ್ ಸೂಚನೆ

by Shwetha
April 4, 2026
0

ರಾಜ್ಯ ಸರ್ಕಾರದ ಎಸ್ಎಸ್ಎಲ್ ಸಿ ಪರೀಕ್ಷೆಯ ತೃತೀಯ ಭಾಷೆ ನೀತಿಗೆ ಇದೀಗ ಹೊಸ ತಿರುವು ಸಿಕ್ಕಿದೆ. ಹತ್ತನೇ ತರಗತಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗಳಿಗೆ ಅಂಕಗಳ...

ಅಸಮಾಧಾನ ಮರೆತು ದಾವಣಗೆರೆ ಬಾಗಲಕೋಟೆ ಚುನಾವಣಾ ಅಖಾಡಕ್ಕೆ ಧುಮುಕಿದ ಜಮೀರ್ ಅಹ್ಮದ್ ಖಾನ್ ; ಅಲ್ಪಸಂಖ್ಯಾತ ಮತಗಳ ಕ್ರೋಢೀಕರಣಕ್ಕೆ ಜಮೀರ್ ತಂತ್ರ ಶುರು

ಅಸಮಾಧಾನ ಮರೆತು ದಾವಣಗೆರೆ ಬಾಗಲಕೋಟೆ ಚುನಾವಣಾ ಅಖಾಡಕ್ಕೆ ಧುಮುಕಿದ ಜಮೀರ್ ಅಹ್ಮದ್ ಖಾನ್ ; ಅಲ್ಪಸಂಖ್ಯಾತ ಮತಗಳ ಕ್ರೋಢೀಕರಣಕ್ಕೆ ಜಮೀರ್ ತಂತ್ರ ಶುರು

by Shwetha
April 4, 2026
0

ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಯ ಕಾವೇರುತ್ತಿರುವ ಹೊತ್ತಿನಲ್ಲೇ ರಾಜ್ಯ ಕಾಂಗ್ರೆಸ್ ವಲಯದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಯೊಂದು ನಡೆದಿದೆ. ಕಳೆದ ಕೆಲವು ದಿನಗಳಿಂದ ಪ್ರಚಾರ ಕಣದಿಂದ ಅಂತರ ಕಾಯ್ದುಕೊಂಡಿದ್ದ...

ದೇವೇಗೌಡರ ಶ್ರಮದಿಂದ ಅಧಿಕಾರ ಉಂಡು ದ್ರೋಹ ಬಗೆದ್ರಿ:ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಆಕ್ರೋಶ

ದೇವೇಗೌಡರು ನಮ್ಮನ್ನು ವಸೂಲಿಗೆ ತಂದಿಲ್ಲ ಜನರ ಸೇವೆಗೆ ತಂದಿದ್ದಾರೆ : ಮಗನನ್ನು ರಾಜಕೀಯಕ್ಕೆ ತಂದು ವಸೂಲಿಗಿಳಿದ ಸಿಎಂ ಸಿದ್ದರಾಮಯ್ಯಗೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ ; ಹೆಚ್ ಡಿಕೆ ವಾಗ್ದಾಳಿ

by Shwetha
April 4, 2026
0

ಮಂಡ್ಯ: ರಾಜ್ಯ ರಾಜಕಾರಣದಲ್ಲಿ ಮುಡಾ ಹಗರಣ, ಭ್ರಷ್ಟಾಚಾರದ ಆರೋಪಗಳ ನಡುವೆಯೇ ಇದೀಗ ಕುಟುಂಬ ರಾಜಕಾರಣದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಜೆಡಿಎಸ್ ವಿರುದ್ಧ ಕುಟುಂಬ ರಾಜಕಾರಣದ ಟೀಕೆ...

ಎಚ್ ಎಸ್ ಆರ್ ಪಿ ಕಡ್ಡಾಯ ಆದೇಶ ದಿಢೀರ್ ವಾಪಸ್ ನಿಯಮ ಪಾಲಿಸಿದ ಪ್ರಾಮಾಣಿಕ ವಾಹನ ಸವಾರರಿಗೆ ಸರ್ಕಾರದ ಉಂಡೆ ನಾಮ ಗ್ಯಾರಂಟಿ ಆಯ್ತು!

ಎಚ್ ಎಸ್ ಆರ್ ಪಿ ಕಡ್ಡಾಯ ಆದೇಶ ದಿಢೀರ್ ವಾಪಸ್ ನಿಯಮ ಪಾಲಿಸಿದ ಪ್ರಾಮಾಣಿಕ ವಾಹನ ಸವಾರರಿಗೆ ಸರ್ಕಾರದ ಉಂಡೆ ನಾಮ ಗ್ಯಾರಂಟಿ ಆಯ್ತು!

by Shwetha
April 4, 2026
0

ರಾಜ್ಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಹಾಗೂ ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿದ್ದ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಕಡ್ಡಾಯ ಆದೇಶವನ್ನು ರಾಜ್ಯ ಸರ್ಕಾರ ಅಂತಿಮವಾಗಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram