ಅದೇ ಗ್ರೇಸು… ಅದೇ ಸ್ಟೈಲು… ಆಚಾರ್ಯ ಸಾಂಗ್ ಪ್ರೋಮೋ ರಿಲೀಸ್..!
ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಹುನಿರೀಕ್ಷಿತ ಆಚಾರ್ಯ ಸಿನಿಮಾದ ಲಾಹೆ ಲಾಹೆ ಸಾಂಗ್ ಪ್ರೋಮೋ ರಿಲೀಸ್ ಆಗಿದೆ. 15 ಸೆಕೆಂಡ್ ಗಳ ಪ್ರೋಮೋದಲ್ಲಿ ಚಿರಂಜೀವಿ ಅವರ ಡ್ಯಾನ್ಸ್ ಝಲಕ್ ಅನ್ನ ತೋರಿಸಲಾಗಿದೆ. ಸಂಗೀತ ನಿರ್ದೇಶಕ ಮಣಿಶರ್ಮ ತುಸು ಹೆಚ್ಚು ಕಾಳಜಿ ಕೊಟ್ಟೇ ಸಿನಿಮಾದ ಸಾಂಗ್ ಗಳನ್ನ ರೆಡಿ ಮಾಡಿದ್ದಾರೆ ಅನ್ನೋದು ಪ್ರೋಮೋ ಸಾರಿ ಹೇಳುತ್ತಿದೆ.
ಅದೇ ಗ್ರೇಸು… ಅದೇ ಸ್ಟೈಲು… ಚಿರು ನಿನ್ಗೆ ವಯಸ್ಸಾಗಲ್ವಾ..? ಬಹುಶಃ ಲಾಹೆ ಲಾಹೆ ಸಾಂಗ್ ಪ್ರೋಮೋ ನೋಡಿದ ಶೇಕಡಾ 90 ರಷ್ಟು ಮಂದಿಗೆ ಈ ಪ್ರಶ್ನೆ ಕಾಡಿರುವುದರಲ್ಲಿ ಸಂಶಯವೇನು ಇಲ್ಲ. ಯಾಕೆಂದ್ರೆ 15 ಸೆಕೆಂಡ್ ನ ವಿಡಿಯೋದಲ್ಲಿ ಚಿರು ಒಂದು ಸ್ಟೆಪ್ ಹಾಕಿದ್ದಾರೆ. 65ರ ಹರೆಯದಲ್ಲೂ ಚಿರು ಇಷ್ಟು ಸೊಗಸಾಗಿ ಡ್ಯಾನ್ಸ್ ಮಾಡಿರೋದು ಅವರ ಅಭಿಮಾನಿಗಳೂ ನಂಬಲಸಾಧ್ಯವೇನೋ..? ಯಾಕೆಂದ್ರೆ ಮೆಗಾಸ್ಟಾರ್ ಡ್ಯಾನ್ಸ್ ನಲ್ಲಿ ಒಂದು ಮ್ಯಾಜಿಕ್ ಇರುತ್ತೆ. ಒಂದು ಗ್ರೇಸ್ ಇರುತ್ತೆ. ಒಂದು ಯುನಿಕ್ ಸ್ಟೈಲ್ ಇರುತ್ತೆ. ಅದು ಸದ್ಯ ರಿಲೀಸ್ ಆಗಿರುವ ಪ್ರೋಮೋದಲ್ಲೂ ಎದ್ದು ಕಾಣುತ್ತಿದೆ.
ಇನ್ನು ಈ ಸಿನಿಮಾ ನಕ್ಸಲ್ ಹಿನ್ನೆಲೆಯಲ್ಲಿ ನಡೆಯಲಿದೆ ಎಂದು ಈಗಾಗಲೇ ಚಿತ್ರತಂಡ ಹೇಳಿದೆ. ಶ್ರೀಮಂತುಡು, ಮಿರ್ಜಿ, ಜನತಾ ಗ್ಯಾರೇಜ್ ನಂತಹ ಬ್ಲಾಕ್ ಬಸ್ಟರ್ ಸಿನಿಮಾಗಳನ್ನ ನಿರ್ದೇಶಿಸಿದ್ದ ಕೊರಟಾಲ ಶಿವ ಆಚಾರ್ಯ ಸಿನಿಮಾಗೆ ಆಕ್ಷನ್ ಕಟ್ ಹೇಳಿರೋದು ನಿರೀಕ್ಷೆಗಳನ್ನ ಹೆಚ್ಚಿಸಿದೆ. ಇದಲ್ಲದೇ ಮೆಗಾ ಬುಲ್ಲೋಡು… ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಿನಿಮಾ ಮೇಲಿನ ನಿರೀಕ್ಷೆಗಳು ಆಕಾಶವನ್ನ ಮುಟ್ಟಿವೆ.









