ಲಖೀಂಪುರ ಖೇರಿ ಪ್ರಕರಣ – ಆಶಿಶ್ ಮಿಶ್ರಾ ಜಾಮೀನು ರದ್ದುಗೊಳಿಸುವಂತೆ ಸುಪ್ರೀಂ ಮೆಟ್ಟಿಲೇರಿದ ಸಂತ್ರಸ್ತರು.
ಉತ್ತರ ಪ್ರದೇಶದ ಚುನಾವಣೆಯ ಮಧ್ಯೆ ಲಖೀಂಪುರ ಖೇರಿ ಪ್ರಕರಣ ಮತ್ತೆ ಕಾವೇರುತ್ತಿದೆ. ಇದೀಗ ಈ ಪ್ರಕರಣದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಮಿಶ್ರಾಗೆ ಜಾಮೀನು ನೀಡಿರುವುದನ್ನು ವಿರೋಧಿಸಿ ಸಂತ್ರಸ್ತರ ಸಂಬಂಧಿಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಆಶಿಶ್ ಮಿಶ್ರಾ ಜಾಮೀನು ರದ್ದುಗೊಳಿಸುವಂತೆ ಕುಟುಂಬ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದೆ.
ಆರೋಪಿ ಆಶಿಶ್ ಮಿಶ್ರಾಗೆ ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠವು ಈ ಹಿಂದೆ ಜಾಮೀನು ನೀಡಿತ್ತು. ಜಾಮೀನು ಮಂಜೂರು ಮಾಡಿದ ನಂತರವೇ ಮೃತ ರೈತರ ಕುಟುಂಬಗಳು ನಿರ್ಧಾರವನ್ನು ವಿರೋಧಿಸಿ ಆದೇಶವನ್ನು ಪ್ರಶ್ನಿಸಲು ಕೇಳಿಕೊಂಡವು.
ಕಳೆದ ವರ್ಷ ಅಕ್ಟೋಬರ್ 3 ರಂದು ಲಖಿಂಪುರದಲ್ಲಿ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಬಿಜೆಪಿ ನಾಯಕರ ಬೆಂಗಾವಲು ಪಡೆಯಲ್ಲಿ ಕಾರೊಂದು ನುಗ್ಗಿತ್ತು. ಈ ಪ್ರಕರಣದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಹೆಸರು ಕೇಳಿಬಂದಿತ್ತು. ಇದಾದ ಬಳಿಕ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.
The relatives of the deceased reached the Supreme Court, pleading for cancellation of bail of Ashish Mishra