ಲಖೀಮ್ ಪುರ್ ಹಿಂಸಾಚಾರ : ನಿನ್ನೆ ಕಾಣೆಯಾಗಿದ್ದ ಪತ್ರಕರ್ತ ಇಂದು ಸಾವು
ಲಖ್ನೋ : ಉತ್ತರಪ್ರದೇಶದ ಲಖೀಮ್ ಪುರ್ ನಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಈ ಹಿಂಸಾಚಾರದಲ್ಲಿ ಈವರೆಗೂ ಎಂಟು ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿತ್ತು.
ಇದೀಗ ಈ ಸಂಖ್ಯೆ ಒಂಭತ್ತಕ್ಕೆ ಏರಿಕೆಯಾಗಿದ್ದು, ನಿನ್ನೆ ಘಟನೆಯ ನಂತರ ಕಾಣೆಯಾಗಿದ್ದ ಸ್ಥಳೀಯ ಪತ್ರಕರ್ತ ಇಂದು ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಭಾನುವಾರ ಕೇಂದ್ರ ಸಚಿವ ಅಜಯ್ ಮಿಶ್ರಾ ಮತ್ತು ಡಿಸಿಎಂ ಕೇಶವ ಪ್ರಸಾದ್ ಮೌರ್ಯ ಭೇಟಿಗೆ ರೈತರು ಬಂದಿದ್ದರು.
ಅವರಿಗೆ ಅವಕಾಶ ನೀಡದ ಹಿನ್ನಲೆಯಲ್ಲಿ ಅಜಯ್ ಮಿಶ್ರಾ ರಸ್ತೆ ಮಾರ್ಗವಾಗಿ ಬರುವಾಗ ರೈತರ ಗುಂಪು ಕಪ್ಪು ಬಾವುಟ ಪ್ರದರ್ಶಿಸಿ ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.
ಈ ವೇಳೆ ಸಚಿವರ ಪುತ್ರ ರೈತರ ಮೇಲೆ ಕಾರ್ ಚಲಾಯಿಸಿದ್ದಾರೆ. ಈ ವೇಳೆ ಅನೇಕ ರೈತರು ಮೃತಪಟ್ಟಿದ್ದಾರೆ. ಈ ಘಟನೆ ಉತ್ತರ ಪ್ರದೇಶದಲ್ಲಿ ಅಲ್ಲಕಲ್ಲೋಲವನ್ನು ಸೃಷ್ಠಿಸಿದೆ.
ಇತ್ತ ಮೃತ ರೈತರ ಕುಟುಂಬಕ್ಕೆ ಸಾಂತ್ವನ ಹೇಳಲು ಆಗಮಿಸಿದ್ದ ಪ್ರಿಯಾಂಕಾ ಗಾಂಧಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯನ್ನು ಖಂಡಿಸಿ ಅಖಿಲೇಶ್ ಯಾದವ್ ರಸ್ತೆಗಿಳಿದು ಹೋರಾಟ ನಡೆಸಿದ ಪರಿಣಾಮ ಅವರನ್ನೂ ಸಹ ಬಂಧಿಸಲಾಗಿದೆ.









