ನಾವು ಪಕ್ಷದ ಶಿಸ್ತಿನ ಸಿಪಾಯಿಗಳು, ಪಕ್ಷದ ಆಜ್ಞೆಯನ್ನ ಮೀರುವುದಿಲ್ಲ – ಸವದಿ ಪುತ್ರ
ವಿಜಯಪುರ : ಸಿಂದಗಿ ಕ್ಷೇತ್ರದಿಂದ ಡಿಸಿಎಂ ಲಕ್ಷ್ಮಣ ಸವದಿ ಸ್ಪರ್ಧೆ ವಿಚಾರವಾಗಿ ವಿಜಯಪುರ ಜಿಲ್ಲೆಯ ಇಂಚಗೇರಿ ಮಠದಲ್ಲಿ ಸವದಿ ಪುತ್ರ ಚಿದಾನಂದ ಸವದಿ ಪ್ರತಿಕ್ರಿಯೆ ನೀಡಿದ್ದಾರೆ. ಸಿಂದಗಿಯಿಂದ ನಾನು ಇಲ್ಲಾ ನಮ್ಮ ತಂದೆ ಸ್ಪರ್ಧಿಸುತ್ತಾರೆ ಎನ್ನುವ ಊಹಾಪೋಹಗಳು ಎದ್ದಿವೆ. ನಾನಂತು ಸ್ಪರ್ಧೆ ಮಾಡೋದೆ ಇಲ್ಲ. ನನಗೆ ಸಿಂದಗಿ ಕ್ಷೇತ್ರದಲ್ಲಿ ಸ್ಪರ್ಧೆಯ ಯಾವ ಆಸಕ್ತಿಯು ಇಲ್ಲ. ನಾವು ಪಕ್ಷದ ತೀರ್ಮಾನಕ್ಕೆ ಬದ್ಧ. ಪಕ್ಷ ಹೇಳಿದ್ರೆ ಲಕ್ಷ್ಮಣ ಸವದಿ ಸ್ಪರ್ಧೆ ಪಕ್ಕಾ ಎಂದಿದ್ದಾರೆ.
FASTaag ಸ್ಕಾನ್ ಆಗದಕ್ಕೆ ದುಪಟ್ಟು ಹಣಕ್ಕೆ ಬೇಡಿಕೆ : ಲಾರಿ ಚಾಲಕರ ಗಲಾಟೆ
ಇದೇ ವೇಳೆ ನಾವು ಪಕ್ಷದ ಶಿಸ್ತಿನ ಸಿಪಾಯಿಗಳು. ಪಕ್ಷದ ಆಜ್ಞೆಯನ್ನ ಮೀರುವುದಿಲ್ಲ. ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರ ನಮ್ಮಲ್ಲಿ ಇಲ್ಲ. ನಾವೆಂದು ಇದನ್ನು ವಿಚಾರ ಮಾಡಿಯು ಇಲ್ಲ. ಪಕ್ಷ ಸೂಚಿಸಿದ್ರೆ ತಂದೆ ಸಿಂದಗಿಯಿಂದ ಸ್ಪರ್ಧಿಸಲಿದ್ದಾರೆ.
ಅಥವಾ ಪಕ್ಷ ಸೂಚಿಸುವ ಅಭ್ಯರ್ಥಿಯನ್ನ ಗೆಲ್ಲಿಸಲಿದ್ದಾರೆ ಎಂದಿದ್ದಾರೆ.