ಲಕ್ಕವಳ್ಳಿ | ರಕ್ತದಾನ ಮಾಡಿ ಮಾದರಿಯಾದ ಪಿಎಸ್ ಐ ಮೇಘ
ಚಿಕ್ಕಮಗಳೂರು : ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡುವ ಮೂಲಕ ಯುವ ಪೀಳಿಗೆಯರಿಗೆ ಪಿಎಸ್ ಐ ಮೇಘ ಟಿ ಎನ್ ಯುವ ಪೀಳಿಗೆಯರಿಗೆ ಮಾದರಿಯಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕು ಲಕ್ಕವಳ್ಳಿ ಸ್ಪೂರ್ತಿ ಸೇವಾ ಸಂಸ್ಥೆ ವತಿಯಿಂದ ಜಿಲ್ಲಾ ಮೆಗ್ಗಾನ್ ಭೋಧಕ ಆಸ್ಪತ್ರೆ ರಕ್ತನಿಧಿ ಹಾಗೂ ಪ್ರಾಥಮಿಕ ಆಗೋಗ್ಯ ಕೇಂದ್ರ ಲಕ್ಕವಳ್ಳಿ ಇವರ ಸಹಯೋಗದೊಂದಿಗೆ ಒಂದು ದಿನದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಕರ್ತವ್ಯದಲ್ಲಿದ್ದ ಪಿಎಸ್ ಐ ಮೇಘ ಅವರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ ಎಲ್ಲರ ಪ್ರಶಂಸೆಗೆ ಕಾರಣರಾಗಿದ್ದಾರೆ.
ಇನ್ನು ಈ ಶಿಬಿರಕ್ಕೆ ಮುಖ್ಯ ಅಥಿತಿಯಾಗಿ ಬಂದಿದ್ದ ತರೀಕೆರೆ ಶಾಸಕ ಡಿ ಎಸ್ ಸುರೇಶ್ ರವರು ಪಿಎಸ್ ಐ ಮೇಘ ಅವರಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಲ್ಲದೇ, ರಕ್ತದಾನಿಗಳಿಗೆ ಫಲಹಾರ ವಿತರಣೆಯನ್ನು ಮಾಡಿದ್ದಾರೆ.
ಈ ಶಿಬಿರಕ್ಕೆ ಊರಿನ 80 ಕ್ಕೂ ಅಧಿಕ ಮಂದಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದ್ದು ಮಹಿಳೆಯರು ಮತ್ತು ಹಿರಿಯರು ಹೆಚ್ಚಾಗಿ ರಕ್ತದಾನ ಮಾಡಿದ್ದು ವಿಶೇಷತೆಯಾಗಿತ್ತು.
ಶಿಬಿರಕ್ಕೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪದ್ಮಾವತಿ ಸಂಜೀವ್ ಕುಮಾರ್ ಹಾಗೂ ಸ್ಪೂರ್ತಿ ಸೇವಾ ಸಂಸ್ಥೆಯ ಎಲ್ಲಾ ಕಾರ್ಯಕರ್ತರು ಉಪಸ್ಥಿತಿಯಲ್ಲಿದ್ದರು.