ವಿಜಯಪುರ: ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ವಿಜಯಾನಂದ ಕಾಶಪ್ಪನವರ್ ಇತ್ತೀಚೆಗಷ್ಟೇ ವಾಗ್ದಾಳಿ ನಡೆಸಿದ್ದರು. ಈಗ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (lakshmi Hebbalkar) ಅಸಮಾಧಾನ ಹೊರಹಾಕಿದ್ದಾರೆ.
ನಗರದಲ್ಲಿ (vijayapura) ಮಾತನಾಡಿದ ಅವರು, ಮೃತ್ಯುಂಜಯ ಸ್ವಾಮೀಜಿ (Basavajaya Mrutyunjaya Swamiji) ಅವರು ಬೆಳಗಾವಿ ಚಳಿಗಾಲದ ಅಧಿವೇಶನದ ಸಮಯದಲ್ಲಿ ಪಂಚಮಸಾಲಿ ಹೋರಾಟ ಮಾಡುವುದಾಗಿ ಹೇಳಿದ್ದರು. ನಾವು ಸರ್ಕಾರದಲ್ಲಿದ್ದರೂ ಹೋರಾಟದಲ್ಲಿ ಭಾಗಿಯಾಗಿದ್ದೆವು.
ಆದರೆ ಸ್ವಾಮೀಜಿಗಳು ಸರ್ಕಾರಕ್ಕೆ ಮುಜುಗರವಾಗುವಂತೆ ಹೋರಾಟ ಮಾಡಬಾರದು. ಯಾವುದೇ ಸರ್ಕಾರ ಇದ್ದರೂ ಸರಿ, ಹೋರಾಟ ಅತಿಯಾಗಿದೆ ಎನ್ನುವಂತೆ ಹೋರಾಟ ಮಾಡಬಾರದು. ಪಂಚಮಸಾಲಿ ಸಮಾಜವನ್ನು ಬಿಟ್ಟು ನಾನಿಲ್ಲ ಎಂದು ಹೇಳಿದ್ದಾರೆ.