ಅಮಿರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ.. ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಯಿತ್ತಾದ್ರೂ ಸಿನಿಮಾ ನೀರಸ ಪ್ರದರ್ಶನ ಕಂಡಿದೆ.. 10 ವರ್ಷಗಳಲ್ಲೇ ಅಮಿರ್ ಖಾನ್ ಅವರ ಸಿನಿಮಾವೊಂದು ಮೊದಲ ದಿನ ಇಷ್ಟು ಕಡಿಮೆ ಮಟ್ಟದ ಗಳಿಕೆ ಕಂಡಿದೆ ಎನ್ನಲಾಗ್ತಿದೆ…
ಇದಕ್ಕೆಲ್ಲಾ ಒಂದು ಪ್ರಮುಖ ಕಾರಣ ಬಾಯ್ಕಾಟ್ ಲಾಲ್ ಸಿಂಗ್ ಚಡ್ಡಾ , ಬಾಯ್ಕಾಟ್ ಬಾಲಿವುಡ್ , ಬಾಯ್ಕಾಟ್ ಅಮಿರ್ ಖಾನ್ , ಬಾಯ್ಕಾಟ್ ಕರೀನಾ ಕಪೂರ್ ಖಾನ್ ಟ್ರೆಂಡ್ ಗಿದ್ದು… ಈ ಟ್ರೆಂಡ್ ಗೆ ಅವರದ್ದೇ ಹೇಳಿಕೆಗಳೇ ಕಾರಣ ಕೂಡ..
ಅಂದ್ಹಾಗೆ ಬಾಲಿವುಡ್ ನಲ್ಲಿ ಬಾಯ್ಕಾಟ್ ಬಿಸಿ ಸರಿಯಾಗಿಯೇ ತಟ್ಟಿದೆ.. ಯಾವ ಬಾಲಿವುಡ್ ಸಿನಿಮಾಗಳು ಬರಲಿ ಬಾಯ್ಕಾಟ್ ಗೆ ಒಳಗಾಗುತ್ತಿವೆ.,. ಆದ್ರೆ ಇದೆಲ್ಲದರ ನಡುವೆ ಈಗ ನಟ ಅರ್ಜುನ್ ಕಪೂರ್ ಮತ್ತಷ್ಟು ನೆಟ್ಟಿಗರ ಕಣ್ ಕೆಂಪಾಗಿಸಿದ್ದಾರೆ..
ಬಾಯ್ಕಾಟ್ ಟ್ರೆಂಡ್ ಯಾರಿಗೂ ಒಳ್ಳೆಯದಲ್ಲ. ಇದರಿಂದ ಅದೆಷ್ಟು ಕುಟುಂಬಗಳ ನಾಶವಾಗುತ್ತವೆ ಎನ್ನುವ ಅರಿವು ಹೋರಾಟ ಮಾಡುತ್ತಿರುವವರಿಗೆ ಇಲ್ಲ. ಅಲ್ಲದೇ, ಇಂತಿಷ್ಟೇ ಜನರನ್ನೇ ಅವರು ಟಾರ್ಗೆಟ್ ಮಾಡುತ್ತಿದ್ದಾರೆ. ಹೀಗಾಗಿ ಇದನ್ನು ಚಿಗುರಿನಲ್ಲೇ ಚಿವುಟ ಬೇಕು ಎಂದು ಹೇಳಿದ್ದಾರೆ.
ಆದ್ರೆ ಅರ್ಜುನ್ ಕಪೂರ್ ವಿರುದ್ಧ ಬಿಜೆಪಿ ನಾಯಕ ಈಗ ಮುಗಿಬಿದ್ದಿದ್ದಾರೆ..
ಮಧ್ಯ ಪ್ರದೇಶದ ಗೃಹ ಸಚಿವ ಡಾ.ನರೋತ್ತಮ್ ಮಿಶ್ರಾ ಅವರು ಈ ಬಗ್ಗೆ ಮಾತನಾಡಿ ನಟ ಅರ್ಜುನ್ ಕಪೂರ್ ಪ್ರೇಕ್ಷಕರಿಗೆ ಬೆದರಿಕೆ ಹಾಕುತ್ತಿದ್ದಾರೆ. ಭಯ ಹುಟ್ಟಿಸುತ್ತಿದ್ದಾರೆ. ಯಾವ ಕಾರಣಕ್ಕೆ ಸಿನಿಮಾಗಳನ್ನು ಬಾಯ್ಕಾಟ್ ಮಾಡಲಾಗುತ್ತಿದೆ ಎನ್ನುವುದನ್ನು ಅರ್ಜುನ್ ಅರಿಯಲಿ ಎಂದು ಅವರು ಹೇಳಿಕೆ ನೀಡಿದ್ದಾರೆ. ಯಾವುದೇ ರೀತಿಯಲ್ಲಿ ನೀವು ಹೆದರಿಸಿದರೂ, ಪ್ರೇಕ್ಷಕರು ಹೆದರುತ್ತಾರೆ ಎಂಬ ತಪ್ಪು ಕಲ್ಪನೆ ಇದ್ದರೆ ಕೈ ಬಿಡಿ ಎಂದು ಆಕ್ರೋಶ ಹೊರಹಾಕಿದ್ದಾರೆ..