ಡಿಎಲ್ ಎಫ್ ಲಂಚ ಕೇಸ್ : ಲಾಲೂಗೆ ಕ್ಲೀನ್ ಚೀಟ್
ನವದೆಹಲಿ: ಡಿಎಲ್‍ಎಫ್ ಲಂಚ ಪ್ರಕರಣದಲ್ಲಿ ಮಾಜಿ ಸಚಿವ ಲಾಲು ಪ್ರಸಾದ್ ಯಾದವ್ ಅವರಿಗೆ ಸಿಬಿಐ ಕ್ಲೀನ್ ಚಿಟ್ ನೀಡಿದೆ ಎಂದು ವರದಿಯಾಗಿದೆ.
ಲಾಲು ಪ್ರಸಾದ್ ಯಾದವ್ ವಿರುದ್ಧ ಯಾವುದೇ ಪುರಾವೆಗಳು ಕಂಡುಬಂದಿಲ್ಲವಾದ್ದರಿಂದ ಸಿಬಿಐ ಕ್ಲೀನ್ ಚೀಟ್ ನೀಡಿದೆ.
ಈ ಪ್ರಕರಣದಲ್ಲಿ ಲಾಲು ಈಗಾಗಲೇ ಮೂರೂವರೆ ವರ್ಷ ಜೈಲುವಾಸ ಅನುಭವಿಸಿದ್ದಾರೆ.
ಈ ಪ್ರಕರಣದಲ್ಲಿ ಸಿಬಿಐ ಕ್ಲೀನ್ ಚಿಟ್ ನೀಡಿದ್ದರೂ ಸಹ … ಆದಾಯ ತೆರಿಗೆ ಇಲಾಖೆ ತನ್ನ ತನಿಖೆಯನ್ನು ಮುಂದುವರಿಸಲಿದೆ.
ಲಾಲು ಪ್ರಸಾದ್ ಯಾದವ್ ಯುಪಿಎ 2 ಸರ್ಕಾರದ ಅವಧಿಯಲ್ಲಿ ರೈಲ್ವೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಆ ಸಂದರ್ಭದಲ್ಲಿ ಮುಂಬೈ ಮತ್ತು ದೆಹಲಿಯಲ್ಲಿ ರೈಲ್ವೆ ಯೋಜನೆಗಳನ್ನು ದಕ್ಕಿಸಿಕೊಳ್ಳಲು ರಿಯಲ್ ಎಸ್ಟೇಟ್ ಕಂಪನಿ ಡಿಎಲ್ ಫ್ ಲಾಲುಗೆ ಲಂಚ ನೀಡಿದೆ ಎಂಬುದು ಪ್ರಮುಖ ಆರೋಪವಾಗಿತ್ತು.