ಲಾಲೂ ಪ್ರಸಾದ್ ಯಾದವ್ ಆರೋಗ್ಯ ಮತ್ತಷ್ಟು ಗಂಭೀರ
ಪಟ್ನಾ : ಬಿಹಾರ್ ಮಾಜಿ ಸಿಎಂ, ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಆರೋಗ್ಯ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ.
ರಾಂಚಿಯಲ್ಲಿನ ರಾಜೇಂದ್ರ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲೂ ಆರೋಗ್ಯ ಪರಿಸ್ಥಿತಿ ಮತ್ತಷ್ಟು ಕ್ಷೀಣಿಸುತ್ತಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಡಾಕ್ಟರ್ ಉಮೇಶ್ ಪ್ರಸಾದ್ ಮಾತನಾಡುತ್ತಾ ಲಾಲು ಪ್ರಸಾದ್ ಯಾದವ್ ಕಿಡ್ನಿಗಳು ಪ್ರಸ್ತುತ 25 ರಷ್ಟು ಮಾತ್ರ ಕೆಲಸ ಮಾಡುತ್ತಿವೆ. ಅದು ಯಾವ ಸಂದರ್ಭದಲ್ಲಾದ್ರೂ ಪೂರ್ತಿಯಾಗಿ ಕೆಲಸ ಮಾಡದೇ ಇರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಈ ವಿಚಾರವನ್ನು ಈಗಾಗಲೇ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಹೇಳಿರುವ ವೈದ್ಯರು, ಲಾಲೂ ಪ್ರಸಾದ್ ಈಗಾಗಲೇ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
ಅವರಿಗೆ ಡಯಾಬಿಟಿಸ್, ರಕ್ತದ ಒತ್ತಡ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿವೆ. ಇದರಿಂದಾಗಿಯೇ ಅವರಿಗೆ ಈಗ ಕಿಡ್ನಿ ಸಮಸ್ಯೆ ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
ಇನ್ನೊಂದೆಡೆ ಲಾಲೂ ಪ್ರಸಾದ್ ಯಾದವ್ ಅವರಿಗೆ ಬೇಲ್ ಮಂಜೂರ್ ಮಾಡಬೇಕೆಂದು ಅವರ ಪರ ವಕೀಲ ಸಲ್ಲಿಕೆ ಮಾಡಿದ್ದ ಅರ್ಜಿಯನ್ನ ಜಾರ್ಖಂಡ್ ಹೈ ಕೋರ್ಟ್ ಜನವರಿ 22ಕ್ಕೆ ಮುಂದೂಡಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel