ಪಾಟ್ನಾ: ಬಿಹಾರ ಸಿಎಂ ನಿತೀಶ್ ಕುಮಾರ್ (Nitish Kumar) ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ (ಇಂಡಿಯಾ) ಮರಳಲು ಬಯಸಿದರೆ ಅವರಿಗೆ ಒಕ್ಕೂಟದ ಬಾಗಿಲು ಸದಾ ತೆರೆದಿರುತ್ತದೆ ಎಂದು ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ (Lalu Prasad Yadav) ಹೇಳಿದ್ದಾರೆ.
ನಾಯಕತ್ವಕ್ಕಾಗಿ ಒಕ್ಕೂಟದಲ್ಲಿ ಒಳಜಗಳ ನಡೆಯುತ್ತಿರುವ ಹೊತ್ತಲ್ಲಿ ಈ ಹೇಳಿಕೆ ರಾಷ್ಟ್ರ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಸಿಎಂ ನಿತೀಶ್ ಕುಮಾರ್ ಗಾಗಿ ಒಕ್ಕೂಟದ ಬಾಗಿಲು ತೆರೆದಿದೆ. ಅವರು ಒಗ್ಗೂಡಿ ಕೆಲಸ ಮಾಡಲಿ, ಮಹಾಮೈತ್ರಿಯೊಂದಿಗೆ ಬರುವುದು ಬಿಡುವುದು ಅವರಿಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಮಾತನಾಡಿದ್ದ ಲಾಲೂ ಪುತ್ರ ಮಾಜಿ ಡಿಸಿಎಂ ತೇಜಸ್ವಿ ಯಾದವ್, ನಿತೀಶ್ ಕುಮಾರ್ ಈಗ ಸುಸ್ತಾಗಿದ್ದಾರೆ. ಅವರಿಗೆ ಮಹಾಮೈತ್ರಿಕೂಟದ ಬಾಗಿಲು ಮುಚ್ಚಿದೆ. ಆದರೆ ಸಿಎಂ ನಿತೀಶ್ ಕುಮಾರ್ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಾದರೆ ಅದನ್ನು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದಿದ್ದರು.
ಸೋನಿಯಾ–ರಾಹುಲ್‌ಗೆ ಬಿಗ್ ರಿಲೀಫ್: ED ಆರೋಪಪಟ್ಟಿ ಪರಿಗಣನೆಗೆ ನ್ಯಾಯಾಲಯ ನಿರಾಕರಣೆ
ದೆಹಲಿಯ ರೌಸ್ ಅವೆನ್ಯೂ ವಿಶೇಷ ನ್ಯಾಯಾಲಯದಿಂದ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಮಹತ್ವದ ರಿಲೀಫ್ ಲಭಿಸಿದೆ. ಜಾರಿ ನಿರ್ದೇಶನಾಲಯ (ED) ಸಲ್ಲಿಸಿದ್ದ...








