ಜಮೀನಿನ ವಿಚಾರ | ಮಹಿಳೆ ಮೇಲೆ ಗುಂಡಿನ ದಾಳಿ kalaburagi saaksha tv
ಕಲಬುರಗಿ : ಜಮೀನು ವಿಚಾರದಲ್ಲಿ ಗಲಾಟೆ ನಡೆದು ಮಹಿಳೆ ಮೇಲೆ ಗುಂಡಿನ ದಾಳಿ ನಡೆದಿರುವ ಘಟನೆ ಆಳಂದ ತಾಲೂಕಿನ ಕಡಗಂಚಿ ಗ್ರಾಮದಲ್ಲಿ ನಡೆದಿದೆ.
ನಿರ್ಮಲ ಸಾತಲಿಂಗಪ್ಪ (38) ಎಂಬುವವರ ಮೇಲೆ ನಾಗರಾಜ ವಾಣಿ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಗಲಾಟೆ ವೇಳೆ ನಾಗರಾಜ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದು, ನಂತರ ನಿರ್ಮಲ ಅವರತ್ತ ಹಾರಿಸಿದ್ದಾರೆ.
ಇದರಿಂದ ಗುಂಡು ನೇರವಾಗಿ ನಿರ್ಮಲಾ ಭುಜಕ್ಕೆ ತಾಗಿ, ಗಾಯಗೊಂಡಿದ್ದಾರೆ.
ಸದ್ಯ ಆರೋಪಿ ನಾಗರಾಜನನ್ನು ಬಂಧಿಸಲಾಗಿದ್ದು, ಈ ಸಂಬಂಧ ನರೋಣಾ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









