ಬೆಳಗಾವಿ ನಿವಾಸಿ ಪಾಜಕದ ಮೂಲಕ ಕನ್ನಡಿಗ ವಿದ್ವಾನ್ ನಿಗದಿಪಡಿಸಿದ ಮಹೂರ್ತದಲ್ಲಿ ಅಯೋದ್ಯೆಯ ರಾಮಚಂದ್ರಪ್ರಭುವಿನ ಭವ್ಯ ಆಲಯದ ಭೂಮಿ ಪೂಜೆ:
ಇತ್ತೀಚಿಗಷ್ಟೇ ದೇಶದ ಸರ್ವೋಚ್ಚ ನ್ಯಾಯಾಲಯ ಪುರಾತತ್ವ ಇಲಾಖೆಯ ಸಾಕ್ಷಿ ಆಧಾರದ ಮೇಲೆ ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ರಾಮ ಜನ್ಮ ಭೂಮಿ ವಿವಾದಕ್ಕೆ ಅಂತಿಮ ತೀರ್ಪು ಪ್ರಕಟಿಸಿದ ಬೆನ್ನಲ್ಲೇ ಇದೀಗ ಆಗಸ್ಟ್ 5 ರಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ರ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೂ ಹೃದಯ ಸಾಮ್ರಾಟ ಶ್ರೀರಾಮಚಂದ್ರ ಪ್ರಭುವಿನ ಭವ್ಯ ದೇವಾಲಯದ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಕರ್ನಾಟಕದ ಬೆಳಗಾವಿಯ ಎನ್.ಆರ್.ವಿಜೇಂದ್ರ ಶರ್ಮಾ ಅವರು ನಿಗದಿಪಡಿಸಿದ ಶುಭ ಸಮಯದಲ್ಲಿ ಅಯೋಧ್ಯೆಯಲ್ಲಿರುವ ರಾಮ ದೇವಾಲಯದ ಭೂಮಿ ಪೂಜೆಯನ್ನು ಬೆಳ್ಳಿ ಇಟ್ಟಿಗೆಯನ್ನಿಟ್ಟು ಶಿಲನ್ಯಾಸ ಮಾಡುವ ವಾಸ್ತು ಮುಹೂರ್ತಕ್ಕೆ ತಯಾರಿ ನಡೆಲಾಗುತ್ತಿದೆ.
ಪಂಡಿತ್ ಎನ್.ಆರ್.ವಿಜೇಂದ್ರ ಶರ್ಮಾ ಕಳೆದ ಹಲವು ವರ್ಷಗಳಿಂದ ರಾಮ ಜನ್ಮ ಭೂಮಿ ಚಳವಳಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದು ಈ ವರ್ಷದ ಫೆಬ್ರವರಿಯಲ್ಲಿ ಸಂಘಟಕರು ಧಾರ್ಮಿಕವಾಗಿ ಮಹತ್ವದ ಕಾರ್ಯಕ್ರಮಕ್ಕೆ ದಿನಾಂಕ ನಿಗದಿಪಡಿಸಿದ್ದರು. ಕಳೆದ ಏಪ್ರಿಲ್ ನ ಅಕ್ಷಯ ತೃತೀಯ ದಿನವನ್ನೇ ಅಡಿಪಾಯ ಹಾಕುವ ಸಮಾರಂಭಕ್ಕೆ ಆಯ್ಕೆ ಅವರು ಮಾಡಿಕೊಂಡಿದ್ದರು. ಆದರೆ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ದೇಶಾದ್ಯಂತ ಲಾಕ್ಡೌನ್ ಘೋಷಿಸಲಾಗಿದ್ದರಿಂದ ಭೂಮಿ ಪೂಜೆಯ ಶುಭ ಗಳಿಗೆ ಮುಂದೂಡಲಾಗಿತ್ತು.
ಪಂಡಿತ್ ಶರ್ಮರು, ಜುಲೈ 29, ಜುಲೈ 31, ಆಗಸ್ಟ್ 1 ಮತ್ತು ಆಗಸ್ಟ್ 5 ಹೀಗೆ ಒಟ್ಟು ನಾಲ್ಕು ಶುಭ ಮುಹೂರ್ತಗಳನ್ನು ಶ್ರವಣ ಮಾಸದಲ್ಲಿ ದಿನಾಂಕಗಳನ್ನು ನೀಡಿದ್ದರು. ಇದು ಹಿಂದೂ ಕ್ಯಾಲೆಂಡರ್ನ ಅನ್ವಯ ಶುಭ ತಿಂಗಳಾಗಿದೆ. ಆಗಸ್ಟ್ 5ರಂದು ಸಹ ವಾಸ್ತು ಮುಹೂರ್ತಕ್ಕೆ ಸೂಕ್ತವಾಗಿದೆ ಮತ್ತು ಭೂಮಿ ಪೂಜೆಗೆ ಪ್ರಶಸ್ತವಾಗಿದೆ. ಮಧ್ಯಾಹ್ನ 12 ಗಂಟೆಯ ಮೊದಲು ಅಡಿಪಾಯ ಹಾಕಬೇಕು, ಆನಂತರ ರಾಹು ಕಾಲ ಪ್ರಾರಂಭವಾಗುತ್ತದೆ. ಆದರೆ ಕೋವಿಡ್ ಕಾರಣದಿಂದಾಗಿ ಮಹೂರ್ತ ನಿಗದಿಪಡಿಸಿರುವ ವಿಜೇಂದ್ರ ಶರ್ಮಾರಿಗೆ ಈ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಈ ವಿಚಾರವನ್ನು ಸ್ವತಃ ವಿಜೇಂದ್ರ ಶರ್ಮಾ ಮಾಧ್ಯಮವೊಂದರ ಬಳಿ ಮಾತನಾಡುತ್ತಾ ತಿಳಿಸಿದ್ದಾರೆ.
ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವಿದ್ವಾಂಸ ಮತ್ತು ಚಿನ್ನದ ಪದಕ ವಿಜೇತ ಶರ್ಮಾ ಅವರಿಗೆ ಎಂಟು ಭಾಷೆಗಳು ತಿಳಿದಿವೆ. ಅವರು ತಮ್ಮ ಆರಂಭಿಕ ದಿನಗಳನ್ನು ವಿಜಯಪುರದಲ್ಲಿ ಕಳೆದಿದ್ದು, ಅವರ ಕುಟುಂಬವು ಮೂಲತಃ ಉಡುಪಿ ಬಳಿಯ ಪಾಜಕಾದಿಂದ ಸ್ಥಳಾಂತರಗೊಂಡಿದೆ. ಉನ್ನತ ವ್ಯಾಸಂಗಕ್ಕಾಗಿ ವಾರಣಾಸಿಗೆ ತೆರಳಿ ವಿದ್ವಾಂಸ ಗೋಪಾಲಾಚಾರ್ಯ ಗುರುಜಿಯ ಶಿಷ್ಯರಾದರು. ಅವರೊಂದಿಗೆ ದೇಶಾದ್ಯಂತ ಪ್ರವಾಸ ಮಾಡಿದರು. “ನನ್ನ ಗುರು ಇಂದು ಇಲ್ಲಿಲ್ಲ, ಆದರೆ ನಾನು ಸಾಧಿಸಿದ್ದು ಅವನಿಂದಲೇ” ಎಂದು ಅವರು ಹೆಮ್ಮೆ ಮತ್ತು ಅಭಿಮಾನಗಳಿಂದ ಹೇಳಿಕೊಂಡಿದ್ದಾರೆ.
“ವಾಸ್ತವವಾಗಿ, ವಾಜಪೇಯಿ ಅವರ ಜನ್ಮದಿನದ ಆಧಾರದ ಮೇಲೆ, ಅವರು ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ದಿನಾಂಕವನ್ನು ಸಹ ನಾನು ಸೂಚಿಸಿದ್ದೇ” ಎಂದು ಎನ್ ಆರ್ ವಿಜಯೇಂದ್ರ ಶರ್ಮಾ ಇದೆ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ.
ಮಾಹಿತಿ ಕೃಪೆ: ಇಂಡಿಯನ್ ಎಕ್ಸ್ ಪ್ರೆಸ್