ಚಾಮುಂಡಿ ಬೆಟ್ಟದಲ್ಲಿ ಮತ್ತೆ ಭೂಕುಸಿತ Chamundi Hill
ಮೈಸೂರು: ಗುರುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಚಾಮುಂಡಿ ಬೆಟ್ಟದಲ್ಲಿ ಮತ್ತೆ ಭೂಕುಸಿತವಾಗಿದೆ.
ಇದರೊಂದಿಗೆ ಬೆಟ್ಟದ ನಂದಿ ಮಾರ್ಗದ ರಸ್ತೆಯಲ್ಲಿ ಕಳೆದ 15 ದಿನಗಳ ಅಂತರದಲ್ಲಿ ಮೂರು ಬಾರಿ ಭೂ ಕುಸಿತವಾಗಿದೆ.
ಹೀಗೆ ಪದೇ ಪದೇ ಭೂ ಕುಸಿತವಾಗುತ್ತಿರುವುದರಿಂದ ಭಕ್ತರಲ್ಲಿ ಆತಂಕ ಮನೆ ಮಾಡಿದೆ.
ಇನ್ನು ಬಿರುಕು ಬಿಟ್ಟಿರುವ ಸ್ಥಳಕ್ಕೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‍ನ ತಜ್ಞರು ಇಂದು ಭೇಟಿ ನೀಡುತ್ತಿದ್ದಾರೆ.
ತಜ್ಞರ ನೀಡುವ ವರದಿ ಆಧಾರದ ಮೇಲೆ ಪಿಡಬ್ಲ್ಯೂ ಇಲಾಖೆ ಕೆಲಸ ಆರಂಭಿಸಲಿದೆ.
ಕಳೆದ ದಿನಗಳಿಂದೆ ಭೂಕುಸಿತದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮತ್ತು ಶಾಸಕ ಜಿಟಿದೇವೇಗೌಡ ಭೇಟಿ ನೀಡಿದ್ದರು.









