ಬ್ರಹ್ಮಗಿರಿ ದುರಂತ ಸಂಭವಿಸುವ ಮುನ್ನ ತಲಕಾವೇರಿಯ ಅರ್ಚಕರು ಸಮಾಧಿ ನಿರ್ಣಯ ಪುಸ್ತಕ ಓದುತ್ತಿದ್ರಾ ?
ತಲಕಾವೇರಿಯ ಬ್ರಹ್ಮಗಿರಿಯಲ್ಲಿ ಭೂ ಕುಸಿತದಿಂದ ತಲಕಾವೇರಿಯ ಪ್ರಧಾನ ಅರ್ಚಕರ ಕುಟುಂಬ ಭೂ ಸಮಾಧಿಯಾಗಿದೆ. ಈಗಾಗಲೇ ತೆರವು ಕಾರ್ಯ ನಡೆಯುತ್ತಿದ್ದು ಪ್ರಧಾನ ಅರ್ಚಕರಾದ ನಾರಾಯಣಚಾರ್ ಅವರ ಶವ ಪತ್ತೆಯಾಗಿದೆ. ಇನ್ನುಳಿದವರ ಶವ ತೆಗೆಯಲು ರಕ್ಷಣಾ ಕಾರ್ಯ ತಂಡ ಹರಸಾಹಸಪಡುತ್ತಿದೆ.
ಈ ನಡುವೆ ಭೂ ಸಮಾಧಿಯಾಗಿದ್ದ ಅರ್ಚಕರ ಮನೆ ತೆರವು ಕಾರ್ಯದ ವೇಳೆ ಪುಸ್ತಕವೊಂದು ಸಿಕ್ಕಿದೆ. ಸಮಾಧಿ ನಿರ್ಣಯ ಪುಸ್ತಕ ಶೀರ್ಷಿಕೆ ಹೊಂದಿದ್ದು, ತಲಕಾವೇರಿಯ ಅರ್ಚಕರಿಗೆ ಅಪಾಯದ ಮುನ್ಸೂಚನೆ ಮೊದಲೇ ಸಿಕ್ಕಿತ್ತಾ ಹೀಗಾಗಿ ಅವರು ಮನೆ ಬಿಟ್ಟು ಹೊರಗಡೆ ಬಂದಿಲ್ಲ. ತಾನು ಇಲ್ಲಿಯೇ ಸಮಾಧಿಯಾಗಬೇಕು ಎಂಬುದು ಅವರ ಇಚ್ಛೆಯಾಗಿತ್ತಾ ? ಅಥವಾ ದುರಂತ ಸಂಭವಿಸುವಾಗ ಅವರು ಸಮಾಧಿ ನಿರ್ಣಯ ಪುಸ್ತಕ ಓದುತ್ತಿದ್ರಾ ಹೀಗೆ ಹಲವು ಪ್ರಶ್ನೆಗಳು ಮೂಡುತ್ತಿವೆ. ಆದ್ರೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಲು ಅವರು ಬ್ರಹ್ಮ ಗಿರಿ ಬೆಟ್ಟದ ಬಳಿಯೇ ಭೂ ಸಮಾಧಿಯಾಗಿದ್ದಾರೆ.
ಅಂದ ಹಾಗೇ ತಲಕಾವೇರಿಯ ಪ್ರಧಾನ ಅರ್ಚಕರಾದ ನಾರಾಯಣಚಾರ್ ಅವರು ಶಾಸ್ತ್ರಕ್ಕೆ ಸಂಬಂಧಪಟ್ಟಂತಹ ಅನೇಕ ಪುಸ್ತಕಗಳ ಭಂಡಾರವೇ ಅವರ ಮನೆಯಲ್ಲಿತ್ತು. ಪ್ರತಿ ಪೂಜೆಯ ನಂತರ ಶಾಸ್ತ್ರಗಳ ಪುಸ್ತಕ ಓದುವ ಹವ್ಯಾಸವನ್ನು ಹೊಂದಿದ್ದರು ಎಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ.
ಈ ನಡುವೆ, ನಾರಾಯಣಚಾರ್ ಅವರನ್ನು ಮನೆ ತೆರವುಗೊಳಿಸುವಂತೆ ತಹಸಿಲ್ದಾರ್ ಕೂಡ ಮನವೋಲಿಸಿದ್ದರು. ಆದ್ರೆ ಅವರು ಯಾರ ಮಾತು ಕೂಡ ಕೇಳಲಿಲ್ಲ. ಹೀಗಾಗಿ ಅವರ ಕುಟುಂಬ ಈ ದುರಂತದಲ್ಲಿ ಭೂ ಸಮಾಧಿಯಾಗಿದೆ.
ಒಟ್ಟು ಐದು ಮಂದಿ ಭೂ ಸಮಾಧಿಯಾಗಿದ್ದು, ಇದರಲ್ಲಿ ಒಬ್ಬರ ಶವ ಪತ್ತೆಯಾಗಿದೆ. ಇನ್ನುಳಿದವರ ಶವ ಪತ್ತೆಗಾಗಿ ಇಂದು ಶೋಧ ಕಾರ್ಯ ಮುಂದುವರಿದೆ.








